ಮೋರಿಗಾಂವ್ : ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ (ಪಿಎಂಎಫ್ ಬಿವೈ) ಹಗರಣಕ್ಕೆ ಸಂಬಂಧಿಸಿದಂತೆ ಅಸ್ಸಾಂನ ಮೋರಿಗಾಂವ್ ಜಿಲ್ಲಾ ಪೊಲೀಸರು ಸೈಬರ್ ಅಪರಾಧಿ ಒಬ್ಬನನ್ನು ಬಂಧಿಸಿದ್ದಾರೆ. ಈತನಿಂದ ಬರೋಬ್ಬರಿ 521 ಎಟಿಎಂ ಕಾರ್ಡ್‍ಗಳು, ಹಲವಾರು ಸಿಮ್ ಕಾರ್ಡ್‍ಗಳು ಹಾಗೂ ಸ್ವೈಪಿಂಗ್ ಯಂತ್ರವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಅಧಿಕಾರಿ ಮಾಹಿತಿ ನೀಡಿದರು. ಬಂಧಿತ ಆರೋಪಿಯನ್ನು ದಿಲ್ವಾರ್ ಹುಸೇನ್ ಎಂದು ಗುರುತಿಸಲಾಗಿದೆ.
ಕಳೆದ ಕೆಲವು ತಿಂಗಳುಗಳಿಂದ ತಲೆಮರೆದಿಕೊಂಡಿದ್ದ ಈತನನ್ನು ಜುಲೈ 13ರಂದು ಗುವಾಹಟಿಯ ಹಟಿಗಾಂವ್ ಪ್ರದೇಶದ ಬಾಡಿಗೆ ಮನೆಯಲ್ಲಿ ಬಂಧಿಸಲಾಗಿದೆ ಎಂದು ಮೋರಿಗಾಂವ್ ಜಿಲ್ಲೆಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಮೀರನ್ ಬೈಶ್ಯ ತಿಳಿಸಿದ್ದಾರೆ.
'ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಗೆ ಸಂಬಂಧಿಸಿದಂತೆ, ಮಿಕಿರ್ಭೇಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಮೊದಲು ನಾವು ಎಂಟು ಜನರನ್ನು ಬಂಧಿಸಿದ್ದೇವೆ. ಸಿಎಸ್ಪಿ ಮಾಲೀಕ ದಿಲ್ವಾರ್ ಹುಸೇನ್ ಅಂದಿನಿಂದ ತಲೆಮರೆಸಿಕೊಂಡಿದ್ದ' ಎಂದು ಎಸ್ಪಿ ಬೈಶ್ಯ ತಿಳಿಸಿದ್ದಾರೆ.
'ಆರೋಪಿಯಿಂದ 521 ಎಟಿಎಂ ಕಾರ್ಡ್‍ಗಳುಇ, ಹಲವಾರು ಸಿಮ್ ಕಾರ್ಡ್ಗಳು, ಒಂದು ಸ್ವೈಪ್ ಯಂತ್ರ ಮತ್ತು ಫಿಂಗರ್ಪ್ರಿಂಟ್ ಯಂತ್ರವನ್ನು ವಶಪಡಿಸಿಕೊಳ್ಳಲಾಗಿದೆ. ಪೊಲೀಸರು ಈಗ ಎಟಿಎಂ ಕಾರ್ಡ್ ಗಳನ್ನು ಪರಿಶೀಲಿಸುತ್ತಿದ್ದು ಪ್ರಕರಣದಲ್ಲಿ ಹೆಚ್ಚಿನ ತನಿಖೆಯನ್ನು ಪ್ರಾರಂಭಿಸಲಾಗಿದೆ' ಎಂದು ಅಧಿಕಾರಿ ಹೇಳಿದರು.