ನವದೆಹಲಿ: ಭಾರತದ ವಿದೇಶಿ ವಿನಿಮಯ ಮೀಸಲು 1.85 ಬಿಲಿಯನ್ ಡಾಲರ್ ಗಳಿಂದ 595.05 ಬಿಲಿಯನ್ ಡಾಲರ್ ಗಳಿಗೆ ಏರಿಕೆಯಾಗಿದೆ.
ಜೂ.30 ರಂದು ಕೊನೆಯಾದ ವಾರದಲ್ಲಿ ವಿದೇಶಿ ವಿನಿಮಯ ಮೀಸಲು ಏರಿಕೆ ಕಂಡಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮಾಹಿತಿ ನೀಡಿದೆ.
ಕಳೆದ ವಾರದಲ್ಲಿ ಒಟ್ಟಾರೆ ಮೀಸಲು 2.90 ಬಿಲಿಯನ್ ಡಾಲರ್ ನಷ್ಟು ಕುಸಿದು 593.20 ಬಿಲಿಯನ್ ಡಾಲರ್ ಗೆ ತಲುಪಿತ್ತು. ಅಕ್ಟೋಬರ್ 2021 ರಲ್ಲಿ ದೇಶದ ವಿದೇಶಾಂಗ ಮೀಸಲು 645 ಬಿಲಿಯನ್ ಡಾಲರ್ ಗೆ ಏರಿಕೆಯಾಗುವ ಮೂಲಕ ಸಾರ್ವಕಾಲಿಕ ದಾಖಲೆ ನಿರ್ಮಾಣವಾಗಿತ್ತು.