ಕೊಚ್ಚಿ: ಆಲುವಾದಿಂದ ಅಪಹರಣಕ್ಕೊಳಗಾಗಿದ್ದ ಮಗುವಿನ ಶವ ಪತ್ತೆಯಾಗಿದೆ. ಐದು ವರ್ಷದ ಚಾಂದಿನಿಯ ಶವ ಆಲುವಾ ಮಾರುಕಟ್ಟೆ ಬಳಿ ಪತ್ತೆಯಾಗಿದೆ.
ಮಗುವಿನ ಶವವನ್ನು ಗೋಣಿಚೀಲದಲ್ಲಿಯೇ ಬಿಟ್ಟು ಹೋದ ಸ್ಥಿತಿಯಲ್ಲಿ ತ್ತೆಹಚ್ಚಲಾಗಿದೆ. ಮಗು ನಾಪತ್ತೆಯಾದ 22 ಗಂಟೆಗಳ ನಂತರ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಪೆರಿಯಾರ್ ದಡದಲ್ಲಿರುವ ಕೆಸರಿನ ಸ್ಥಳದಿಂದ ಚಾಂದಿನಿಯ ಮೃತದೇಹ ಪತ್ತೆಯಾಗಿದೆ. ಕೈ ಚೀಲದಿಂದ ಹೊರಗಿತ್ತು. ಕೈ ನೋಡಿದ ಸ್ಥಳಕ್ಕೆ ಬಂದ ಜನರು ಮೃತದೇಹ ಎಂದು ಗುರುತಿಸಿದ್ದಾರೆ. ಸಾರ್ವಜನಿಕರ ಗಮನ ಸೆಳೆಯದ ಸ್ಥಳದಿಂದ ಮಗುವಿನ ಶವವನ್ನು ಕಂಡು ತಕ್ಷಣವೇ ಅಲುವಾ ಓಲೀಸರಿಗೆ ಮಾಹಿತಿ ನೀಡಿದರು.
ಮಗುವಿನ ಶವ ಪತ್ತೆಯಾದ ಸ್ಥಳದಲ್ಲಿ ಪೆÇಲೀಸರು ಮತ್ತು ವಿಧಿವಿಜ್ಞಾನ ತಂಡ ಪರಿಶೀಲನೆ ನಡೆಸಿದೆ. ಅಪಹರಣಗೈದು ಕೊಲೆಗೈದ ಆರೋಪಿ ಅಸ್ಫಾಕ್‍ನನ್ನು ಕೂಡ ಸ್ಥಳಕ್ಕೆ ಕರೆತರಲಾಗಿದೆ.
ಅಸ್ಸಾಂ ಮೂಲದ ಅಫ್ಜಾಕ್ ಆಲಂ ಮೊನ್ನೆ ಮಧ್ಯಾಹ್ನ 3 ಗಂಟೆ ಸುಮಾರಿಗೆ ಬಿಹಾರ ಮೂಲದ ದಂಪತಿಯಿಂದ ಮಗಳನ್ನು ಕರೆದೊಯ್ದಿದ್ದಾನೆ. ಮಗುವಿಗೆ ಜ್ಯೂಸ್ ಕೊಡಿಸುವುದಾಗಿ ಮೋಸ ಮಾಡಿದ್ದ, ಚೂರ್ಣಿಕರದ ಬಾಡಿಗೆ ಮನೆಯಿಂದ ಅಫ್ಜಾಕ್ ಮಗುವನ್ನು ಕರೆದುಕೊಂಡು ಹೋಗಿದ್ದ ಎಂದು ವರದಿಯಾಗಿದೆ. ಬಳಿಕ ಆತ ಮಗುವಿನೊಂದಿಗೆ ಹೋಗುತ್ತಿರುವ ಸಿಸಿಟಿವಿ ದೃಶ್ಯಾವಳಿ ಪೋಲೀಸರಿಗೆ ಸಿಕ್ಕಿತ್ತು. ನಂತರ ಆರೋಪಿಯನ್ನು ರಾತ್ರಿ ಪೋಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಪೆರುಂಬವೂರು ಮತ್ತು ವೆಂಗನಾರೂರ್‍ನ ವಿವಿಧ ಸ್ಥಳಗಳಲ್ಲಿ ಮಗುವನ್ನು ಹುಡುಕಲಾಗಿತ್ತು. ಇದೇ ವೇಳೆ ಬಂಧಿತನಾದ ಅಫ್ಜಾಕ್, ಮಗುವನ್ನು ಬೇರೆಯವರಿಗೆ ಒಪ್ಪಿಸಿರುವುದಾಗಿ ಪೋಲೀಸರಿಗೆ ತಿಳಿಸಿದ್ದಾನೆ. ಆರೋಪಿ ಸುಳ್ಳು ಹೇಳಿಕೆ ನೀಡಿದ್ದಾನೆ ಎಂದು ಪೋಲೀಸರು ಶಂಕಿಸಿದ್ದರು. ಮಗುವನ್ನು ಅಪಹರಿಸುವ ವೇಳೆ ಆರೋಪಿ ಪಾನಮತ್ತನಾಗಿದ್ದ ಎಂಬುದು ಪೆÇಲೀಸರು ನೀಡಿರುವ ಮಾಹಿತಿ. ಆಲುವಾ ಮಾರುಕಟ್ಟೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ರಾಜ್ಯೇತರ ಕಾರ್ಮಿಕರಲ್ಲಿ ವ್ಯಾಪಕವಾದ ಮಾದಕ ದ್ರವ್ಯ ಸೇವನೆಯ ಆರೋಪಗಳು ಈ ಹಿಂದೆಯೇ ಕೇಳಿಬಂದಿದ್ದವು.
ಏತನ್ಮಧ್ಯೆ, ಪೆÇಲೀಸರ ವಶದಲ್ಲಿರುವ ಆರೋಪಿ ಅಫ್ಜಾಕ್ ಮಗುವನ್ನು ಮಾರುಕಟ್ಟೆಯಲ್ಲಿ ಬಿಟ್ಟು ಹೋಗಿದ್ದಾನೆ ಎಂದು ಪ್ರತ್ಯಕ್ಷದರ್ಶಿ ಪೋರ್ಟ್ ನಿವಾಸಿ ಶಾಜುದ್ದೀನ್ ಖಚಿತಪಡಿಸಿದ್ದಾರೆ. ಮಗುವಿನೊಂದಿಗೆ ಅಫ್ಜಾಕ್ ಆಗಮಿಸಿದಾಗ, ಅವನೊಂದಿಗೆ ಇನ್ನೂ ಇಬ್ಬರು ಇದ್ದರು ಎಂದು ಅವರು ಹೇಳಿದರು. ಸದ್ಯ ಪೆÇಲೀಸರು ಮಗುವಿನ ಹತ್ಯೆಯಲ್ಲಿ ಭಾಗಿಯಾಗಿರುವ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.