ಕಾಸರಗೋಡು: ಹಿರಿಯ ಕವಿ, ಪತ್ರಕರ್ತ ರಾಧಾಕೃಷ್ಣ ಉಳಿಯತ್ತಡ್ಕ ಅವರ 65ನೇ ಹುಟ್ಟು ಹಬ್ಬವನ್ನು ಸಮತಾ ಸಾಹಿತ್ಯ ವೇದಿಕೆ ಬದಿಯಡ್ಕದ ಆಶ್ರಯದಲ್ಲಿ ಅಗೋಸ್ತು 12 ರಂದು ಸಾಹಿತ್ಯಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಉಳಿಯತ್ತಡ್ಕ ಶ್ರೀಶಕ್ತಿ ಸಭಾಭವನದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಸಲಾಗುವುದು.
ಸಮಾರಂಭದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಶ್ರೀ ಎಡನೀರು ಮಠದಲ್ಲಿ ನಡೆಯಿತು. ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ವ್ಯಂಗಚಿತ್ರಕಾರ,ಚುಟುಕು ಕವಿ ವೆಂಕಟ್ ಭಟ್ ಎಡನೀರು ಅವರಿಗೆ ಆಮಂತ್ರಣಪತ್ರಿಕೆ ನೀಡುವ ಮೂಲಕ ಬಿಡುಗಡೆಗೊಳಿಸಿದರು. ಈ ಸಂದರ್ಭ ನಿವೃತ್ತ ಗ್ರಾಮಾಧಿಕಾರಿ ಕೃಷ್ಣ ಡಿ.ದರ್ಬೆತ್ತಡ್ಕ, ಸಮತಾ ಸಾಹಿತ್ಯ ವೇದಿಕೆಯ ಸುಂದರ ಬಾರಡ್ಕ, ಅಂಬೇಡ್ಕರ್ ವಿಚಾರ ವೇದಿಕೆಯ ಅಧ್ಯಕ್ಷ ರಾಮ ಪಟ್ಟಾಜೆ, ಬೊಳಿಕೆ ಜಾನಪದ ಕಲಾ ತಂಡದ ನಿರ್ದೇಶಕ ಶಂಕರ ಸ್ವಾಮಿಕೃಪಾ, ನಾರಿ ಚಿನ್ನಾರಿ ಸಂಘಟನೆಯ ಕಾರ್ಯದರ್ಶಿ ದಿವ್ಯಾ ಗಟ್ಟಿ ಪರಕ್ಕಿಲ, ರಾಧಾಕೃಷ್ಣ ಉಳಿಯತ್ತಡ್ಕ, ಗಾಯಕ ವಸಂತ ಬಾರಡ್ಕ ಉಪಸ್ಥಿತರಿದ್ದರು.