ಕಾಸರಗೋಡು: ಬಿಜೆಪಿಯ ಹಿರಿಯ ಮುಖಂಡ, ವಿ.ರವೀಂದ್ರನ್ ಕುಂಬಳೆ ಅವರು ಮಲಯಾಳದಲ್ಲಿ ಬರೆದಿರುವ 'ತುರ್ತು ಪರಿಸ್ಥಿತಿಯ ಕರಾಳ ದಿನಗಳು'(ಡಾರ್ಕ್ ಡೇಸ್ ಆಫ್ ಎಮರ್ಜೆನ್ಸಿ)ಕನ್ನಡ ಅನುವಾದಿತ ಕೃತಿಯ ಬಿಡುಗಡೆ ಸಮಾರಂಭ ಆಗಸ್ಟ್ 6ರಂದು ಬೆಳಗ್ಗೆ 10ಕ್ಕೆ ಮಂಜೇಶ್ವರದ ಪ್ರೇರಣಾ ಸಭಾಂಗಣದಲ್ಲಿ ಜರುಗಲಿದೆ.
ಮಾಜಿ ಮುಖ್ಯಮಂತ್ರಿ, ಸಂಸದ ಡಿ.ವಿ ಸದಾನಂದ ಗೌಡ ಸಮಾರಂಭ ಉದ್ಘಾಟಿಸುವರು. ಖ್ಯಾತ ವೈದ್ಯ ಸಾಹಿತಿ ಡಾ. ರಮಾನಂದ ಬನಾರಿ ಅದ್ಯಕ್ಷತೆ ವಹಿಸುವರು. ನಿವೃತ್ತ ಪ್ರಾಧ್ಯಾಪಕಿ, ಸಾಹಿತಿ ಡಾ. ಪ್ರಮಿಳಾ ಮಾಧವ್ ಪುಸ್ತಕದ ಪರಿಚಯ ನೀಡುವರು. ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಪಿ.ಕೆ ಕೃಷ್ಣದಾಸ್ ಪುಸ್ತಕ ಬಿಡುಗಡೆಗೊಳಿಸುವರು. ತುರ್ತು ಪರಿಸ್ಥಿತಿ ಸಂತ್ರಸ್ತ ಎಂ.ಕೆ ಭಟ್ ಪುಸ್ತಕ ಸ್ವೀಕರಿಸುವರು. ಕೃತಿರಚನಾಕಾರ ವಿ.ರವೀಂದ್ರನ್ ಕುಂಬಳೆ ಲೇಖಕರ ಅನಿಸಿಕೆ ವ್ಯಕ್ತಪಡಿಸುವರು.
ಅಖಿಲ ಭಾರತ ಕುಟುಂಬ ಪ್ರಬೋಧನ್ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಮುಖ್ಯ ಭಾಷಣ ಮಾಡುವರು. ಬಿಜೆಪಿ ಜಿಲ್ಲಾಧ್ಯಕ್ಷ ರವೀಶ ತಂತ್ರಿ ಕುಂಟಾರು, ನಿವ್ರತ್ತ ಪ್ರಾಂಶುಪಾಲ, ಸಾಹಿತಿ ಪಿ.ನಾರಾಯಣ ಮೂಡಿತ್ತಾಯ, ವಿಹಿಂಪ ಜಿಲ್ಲಾಧ್ಯಕ್ಷ ಜಯದೇವ ಖಂಡಿಗೆ, ಬಿಜೆಪಿ ರಾಷ್ಟ್ರೀಯ ಸಮಿತಿ ಸದಸ್ಯ ಎಂ. ಸಂಜೀವ ಶೆಟ್ಟಿ, ತುರ್ತು ಪರಿಸ್ಥಿತಿ ಸಂತ್ರಸ್ತರ ಸಮಿತಿ ಕೇರಳ ಘಟಕ ಪ್ರಧಾನ ಕಾರ್ಯದರ್ಶಿ ಆರ್. ಮೋಹನನ್ ಪಾಲ್ಗೊಳ್ಳುವರು.