ಇಂಫಾಲ್: ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಜನಾಂಗೀಯ ಸಂಘರ್ಷಕ್ಕಿಳಿದಿರುವ ಎರಡು ಗುಂಪುಗಳ ಬಳಿ ಮೂರು ಸಾವಿರ ಶಸ್ತ್ರಾಸ್ತ್ರಗಳು, ಆರು ಲಕ್ಷ ಗುಂಡುಗಳಿವೆ ಎಂದಿರುವ ಅಧಿಕಾರಿಗಳು ಮತ್ತು ತಜ್ಞರು, ನಿಷೇಧಿತ ಭಯೋತ್ಪಾದಕ ಗುಂಪುಗಳು ರಾಜ್ಯದಲ್ಲಿ ಮತ್ತೆ ಪುನರ್ ಜಾಗೃತಿಗೊಳ್ಳುವ ಎಚ್ಚರಿಕೆ ನೀಡಿದ್ದಾರೆ.

303 ರೈಫಲ್ಸ್, ಮಧ್ಯಮ ಗಾತ್ರದ ಮೆಷಿನ್ ಗನ್‌ಗಳು (ಎಂಎಂಜಿ), ಹಗುರವಾದ ಮೆಷಿನ್ ಗನ್‌ಗಳು (ಎಲ್‌ಎಂಜಿ), ಎಕೆ ರೈಫಲ್ಸ್, ಕಾರ್ಬೈನ್ಸ್, ಐಎನ್‌ಎಸ್‌ಎಎಸ್ ರೈಫಲ್ಸ್, ಎಂ-16 ಮತ್ತು ಎಂಪಿ5 ರೈಫಲ್ಸ್‌ಗಳು ಮೇ ತಿಂಗಳಲ್ಲಿ ಪೊಲೀಸರ ಶಸ್ತ್ರಾಗಾರದಿಂದ ಕಾಣೆಯಾಗಿವೆ ಎಂದು ವಿವಿಧ ಮೂಲಗಳಿಂದ ಸಂಗ್ರಹಿಸಿರುವ ಅಂಕಿ-ಅಂಶಗಳನ್ನು ಅಧಿಕಾರಿಗಳು ಉಲ್ಲೇಖಿಸಿದ್ದಾರೆ.
ಇದರೊಟ್ಟಿಗೆ ಪೊಲೀಸರು ಮತ್ತು ವಿವಿಧ ಭದ್ರತಾ ಪಡೆಗಳ ಅಧಿಕಾರಿಗಳ ಮೇಲೆ ಮೇ 3ರಿಂದ ಇಲ್ಲಿಯವರೆಗೂ ಪ್ರತಿಭಟನನಿರತರು ನಡೆಸಿದ ದಾಳಿಯಲ್ಲಿ 6 ಲಕ್ಷ ಗುಂಡುಗಳು ನಾಪತ್ತೆಯಾಗಿವೆ. ಹಿಂಸಾಚಾರದಿಂದಾಗಿ 160ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಎಂದಿದ್ದಾರೆ.
ಐಆರ್‌ಬಿಯ 7ನೇ ಬೆಟಾಲಿಯನ್ ಹಾಗೂ ಮಣಿಪುರ ರೈಫಲ್ಸ್‌ನ 8ನೇ ಬೆಟಾಲಿಯನ್‌ನ ಕೇಂದ್ರಗಳಿಂದ 4,537 ಶಸ್ತ್ರಾಸ್ತ್ರ, 6.32 ಲಕ್ಷ ಸುತ್ತು ಗುಂಡುಗಳು ನಾಪತ್ತೆಯಾಗಿವೆ. ಇವುಗಳಲ್ಲಿ 2,900 ಶಸ್ತ್ರಾಸ್ತ್ರ ಮಾರಣಾಂತಿಕವಾದವು. ಇವು ಕಣಿವೆಯ ಗಲಭೆಕೋರರ ಕೈ ಸೇರಿದ್ದು, ಶೇ 5.31ರಷ್ಟು ಮಾತ್ರ ಗುಡ್ಡಗಾಡು ಪ್ರದೇಶದವರ ಕೈ ಸೇರಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಯುಎಲ್‌ಎಲ್‌ಎಫ್, ಪಿಎಲ್‌ಎ, ಕೆವೈಕೆಎಲ್, ಪಿಆರ್‌ಇಪಿಎಕೆ ಸೇರಿದಂತೆ ಇನ್ನಿತರೆ ನಿಷೇಧಿತ ಗುಂಪುಗಳು ಈಗಾಗಲೇ ಪುನರ್ಜಾಗೃತಿಗೊಳ್ಳುವ ಹಾದಿಯಲ್ಲಿವೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.