ಹೈದರಾಬಾದ್ : 'ಚೀನಾ ಮೂಲದವರು ನಿರ್ವಹಣೆ ಮಾಡುತ್ತಿದ್ದ ಸುಮಾರು ₹ 712 ಕೋಟಿ ಕ್ರಿಪ್ಟೊವಾಲೆಟ್ ಹೂಡಿಕೆಯ ವಂಚನೆ ಜಾಲವನ್ನು ಭೇದಿಸಿದ್ದು, ಈ ಸಂಬಂಧ ಒಂಭತ್ತು ಜನರನ್ನು ಬಂಧಿಸಲಾಗಿದೆ' ಎಂದು ಹೈದರಾಬಾದ್‌ನ ಪೊಲೀಸರು ತಿಳಿಸಿದ್ದಾರೆ.
ಹೈದರಾಬಾದ್ : 'ಚೀನಾ ಮೂಲದವರು ನಿರ್ವಹಣೆ ಮಾಡುತ್ತಿದ್ದ ಸುಮಾರು ₹ 712 ಕೋಟಿ ಕ್ರಿಪ್ಟೊವಾಲೆಟ್ ಹೂಡಿಕೆಯ ವಂಚನೆ ಜಾಲವನ್ನು ಭೇದಿಸಿದ್ದು, ಈ ಸಂಬಂಧ ಒಂಭತ್ತು ಜನರನ್ನು ಬಂಧಿಸಲಾಗಿದೆ' ಎಂದು ಹೈದರಾಬಾದ್‌ನ ಪೊಲೀಸರು ತಿಳಿಸಿದ್ದಾರೆ.
ಈ ಜಾಲದ ಮೂಲಕ, ಉಗ್ರರ ಹಣಕಾಸು ವಹಿವಾಟು ಜಾಲ ಹೆಜ್‌ಬೊಲ್ಹಾ ವಾಲೆಟ್ ಜೊತೆಗೆ ವಹಿವಾಟು ನಡೆಸಿರುವುದು ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸ್ಥಳೀಯ ನಿವಾಸಿ ದೂರು ಆಧರಿಸಿ ಸೈಬರ್ ಕ್ರೈಂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. 'ನಂಬಲರ್ಹ ಎಂದು ವೆಬ್‌ಸೈಟ್ ಮೂಲಕ ಹೆಸರು ನೋಂದಾಯಿಸಿದ್ದೆ. ಕೆಲಸಕ್ಕಾಗಿ ಮೆಸೆಂಜಿಂಗ್ ಆಯಪ್ ಮೂಲಕ ಆಹ್ವಾನ ಬಂದಿತ್ತು' ಎಂದು ದೂರುದಾರರು ತಿಳಿಸಿದ್ದಾರೆ.
ಬಂಧಿತ ಒಂಭತ್ತು ಜನರು ಚೀನಾದ ನಾಗರಿಕರಿಗೆ ಸುಮಾರು 65 ಖಾತೆಗಳ ವಿವರಗಳನ್ನು ನೀಡಿದ್ದರು. ಈ ಖಾತೆಗಳ ಮೂಲಕವಾಗಿ ಸುಮಾರು ₹ 128 ಕೋಟಿ ವಹಿವಾಟು ನಡೆಸಿರುವುದು ತನಿಖೆಯಿಂದ ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.