ಇಂಫಾಲ್: ಕಳೆದ ವಾರದಲ್ಲಿ ಮ್ಯಾನ್ಮಾರ್‌ನಿಂದ 301 ಮಕ್ಕಳು ಸೇರಿದಂತೆ 718 ಜನರು ಈಶಾನ್ಯ ರಾಜ್ಯಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದಾರೆ ಎಂದು ಮಣಿಪುರ ಸರ್ಕಾರ ತಿಳಿಸಿದೆ.
ಇಂಫಾಲ್: ಕಳೆದ ವಾರದಲ್ಲಿ ಮ್ಯಾನ್ಮಾರ್‌ನಿಂದ 301 ಮಕ್ಕಳು ಸೇರಿದಂತೆ 718 ಜನರು ಈಶಾನ್ಯ ರಾಜ್ಯಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದಾರೆ ಎಂದು ಮಣಿಪುರ ಸರ್ಕಾರ ತಿಳಿಸಿದೆ.
ಚಂದೇಲ್ ಜಿಲ್ಲೆಯ ಮೂಲಕ ಇವರು ಜುಲೈ 22, 23ರಂದು ಅಕ್ರಮವಾಗಿ ದೇಶ ಪ್ರವೇಶಿಸಿದ್ದಾರೆ ಎಂದು ಭಾರತ-ಮ್ಯಾನ್ಮಾರ್ ಗಡಿಯಲ್ಲಿ ಕಾವಲು ಕಾಯುವ ಅಸ್ಸಾಂ ರೈಫಲ್ಸ್ ವರದಿ ಮಾಡಿದೆ ಎಂದು ಗೃಹ ಸಚಿವಾಲಯ ಹೇಳಿದೆ.
'ಯಾವೊಂದು ದಾಖಲೆಗಳಿಲ್ಲದೆ ಮ್ಯಾನ್ಮಾರ್‌ನಿಂದ ಹೇಗೆ ದೇಶವನ್ನು ಪ್ರವೇಶಿಸಿದ್ದಾರೆ. ಅವರನ್ನು ತಕ್ಷಣವೇ ವಾಪಸ್ ಕಳುಹಿಸಿ' ಎಂದು ಮುಖ್ಯ ಕಾರ್ಯದರ್ಶಿ ವಿನೀತ್ ಜೋಶಿ ಹೇಳಿದ್ದಾರೆ.
'ಕೇಂದ್ರ ಗೃಹ ಸಚಿವಾಲಯದ ಸೂಚನೆಯನುಸಾರ ಸೂಕ್ತ ದಾಖಲೆಗಳಿಲ್ಲದೇ ಮ್ಯಾನ್ಮಾರ್ ಪ್ರಜೆಗಳು ಗಡಿ ದಾಟದಂತೆ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಅಸ್ಸಾಂ ರೈಫಲ್ಸ್‌ಗೆ ಮಣಿಪುರ ಸರ್ಕಾರ ಈ ಹಿಂದೆಯೇ ತಿಳಿಸಿದೆ. ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಅಕ್ರಮವಾಗಿ ದೇಶ ಪ್ರವೇಶಿಸಿರುವ ವಲಸಿಗರ ವಾಪಸಾತಿ ಮೇಲ್ವಿಚಾರಣೆಗಾಗಿ ಅವರೆಲ್ಲರ ಬಯೊಮೆಟ್ರಿಕ್ ಹಾಗೂ ಛಾಯಾಚಿತ್ರ ಪಡೆಯುವಂತೆ ಚಂದೇಲ್ ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ' ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.