ಎರ್ನಾಕುಳಂ: ಕೊನೆಗೂ ಶೀಲಾ ಸನ್ನಿಗೆ ನ್ಯಾಯ ಕಣ್ತೆರೆದಿದೆ. ನಕಲಿ ಮಾದಕ ವಸ್ತು ಪ್ರಕರಣದಲ್ಲಿ ಬ್ಯೂಟಿ ಪಾರ್ಲರ್ ಮಾಲಕಿ ಶೀಲಾ ಸನ್ನಿ ವಿರುದ್ಧದ ಎಫ್‍ಐಆರ್ ಅನ್ನು ಹೈಕೋರ್ಟ್ ವಜಾಗೊಳಿಸಿದೆ.
ಪ್ರಕರಣವನ್ನು ರದ್ದುಗೊಳಿಸುವಂತೆ ಸಲ್ಲಿಸಿದ್ದ ಅರ್ಜಿಯಲ್ಲಿ ಈ ಆದೇಶ ನೀಡಲಾಗಿದೆ.
ಮಾರಣಾಂತಿಕ ಮಾದಕವಸ್ತು ಎಲ್‍ಎಸ್‍ಡಿ ಸ್ಟಾಂಪ್ ಹೊಂದಿದ್ದ ಆರೋಪದ ಮೇಲೆ ಶೀಲಾ ಅವರನ್ನು ಅಬಕಾರಿ ಅಧಿಕಾರಿಗಳು ಬಂಧಿಸಿದ್ದರು. ಇದರ ಬೆನ್ನಲ್ಲೇ ಶೀಲಾ ಮಾಡದ ಅಪರಾಧಕ್ಕೆ 72 ದಿನ ಜೈಲು ವಾಸ ಅನುಭವಿಸಿದ್ದಾರೆ. ನಿನ್ನೆ ಲ್ಯಾಬ್ ಪರೀಕ್ಷೆಯ ಫಲಿತಾಂಶ ಹೊರಬಿದ್ದಿದ್ದು, ಶೀಲಾ ಅವರ ಬ್ಯೂಟಿ ಪಾರ್ಲರ್ ನಿಂದ ವಶಪಡಿಸಿಕೊಂಡ ವಸ್ತು ಅಮಲು ಪದಾರ್ಥವಲ್ಲ ಎಂದು ತಿಳಿದುಬಂದಿದೆ.
ಶೀಲಾ ವಿರುದ್ಧ ಪ್ರಕರಣ ದಾಖಲಿಸಿರುವ ಅಬಕಾರಿ ನಿರೀಕ್ಷಕ ಕೆ.ಸತೀಶನ್ ಹೇಳಿಕೆಗೂ ಮಹಸ್ಸರ್ ವರದಿಗೂ ವೈರುಧ್ಯವಿದೆ ಎಂಬ ಮಾಹಿತಿ ಈ ಹಿಂದೆಯೇ ಹೊರಬಿದ್ದಿತ್ತು. ರಹಸ್ಯ ಮಾಹಿತಿ ಮೇರೆಗೆ ಶೀಲಾ ಅವರನ್ನು ಬಂಧಿಸಲಾಗಿದೆ ಎಂಬುದು ಸತೀಶನ್À ಹೇಳಿಕೆ ನೀಡಿದ್ದರು. ಆದರೆ ಶೀಲಾ ಸ್ಕೂಟರ್‍ನಿಂದ ಇಳಿಯುತ್ತಿದ್ದಾಗ ನಿಲ್ಲಿಸಿ ಬಂಧಿಸಲಾಗಿತ್ತು.
ಶೀಲಾ ಅವರು ಸನ್ನಿಯನ್ನು ನಕಲಿ ಮಾದಕ ದ್ರವ್ಯ ಪ್ರಕರಣದಲ್ಲಿ ಸಿಲುಕಿಸಿದ ನಂತರ ಸತೀಶ ಅವರನ್ನು ಅಮಾನತುಗೊಳಿಸಲಾಗಿತ್ತು. ಆತನ ಮೊಬೈಲ್ ಪೋನ್ ಅನ್ನು ವಶಕ್ಕೆ ಪಡೆಯಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ. ಇಂಟರ್‍ನೆಟ್ ಕರೆ ಮೂಲಕ ಶೀಲಾ ಸನ್ನಿ ಬಗ್ಗೆ ಮಾಹಿತಿ ಲಭಿಸಿದೆ ಎಂಬ ಹೇಳಿಕೆ ಆಧರಿಸಿ ಕ್ರೈಂ ಬ್ರಾಂಚ್ ಪೋಲೀಸರು ಪೋನ್ ಕಸ್ಟಡಿಗೆ ತೆಗೆದುಕೊಂಡಿದ್ದಾರೆ.