ನವದೆಹಲಿ: ಚಲಾವಣೆಯಲ್ಲಿರುವ 2,000 ರೂ. ನೋಟುಗಳಲ್ಲಿ ಶೇ.76 ರಷ್ಟು ನೋಟುಗಳು ಠೇವಣಿಗಳ ಮೂಲಕ ಬ್ಯಾಂಕುಗಳಿಗೆ ಮರಳಿವೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್(ಆರ್ ಬಿಐ) ಸೋಮವಾರ ತಿಳಿಸಿದೆ.
ಮೇ 19 ರಂದು ಆರ್‌ಬಿಐ ಚಲಾವಣೆಯಲ್ಲಿರುವ 2,000 ರೂ ನೋಟುಗಳನ್ನು ಹಿಂಪಡೆಯುವುದಾಗಿ ಘೋಷಿಸಿತು ಮತ್ತು 2000 ರೂ. ನೋಟುಗಳನ್ನು ತಮ್ಮ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲು ಅಥವಾ ವಿನಿಮಯ ಮಾಡಿಕೊಳ್ಳಲು ಸೆಪ್ಟೆಂಬರ್ 30 ರವರೆಗೆ ಸಾರ್ವಜನಿಕರಿಗೆ ಅವಕಾಶ ನೀಡಿದೆ.