ಇಂದು ನಾವು ಎಷ್ಟು ಬ್ಯುಸಿ ಆಗಿದ್ದೇವೆ ಎಂದರೆ, ದುಡಿಯುವ ಭರದಲ್ಲಿ ನಾವು ನಮ್ಮ ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದೇವೆ ಎನ್ನುವುದು ಕೂಡ ಮರೆಯುತ್ತಿದ್ದೇವೆ. ದಿನದ ಬಹುತೇಕ ಸಮಯವನ್ನು ಕೆಲಸ ಮಾಡುವುದರಲ್ಲಿ ಕಳೆಯುವ ನಮಗೆ ನಮ್ಮ ದೇಹದಲ್ಲಿ ಆಗುತ್ತಿರುವ ಬದಲಾವಣೆಗಳು ಕೂಡ ಗೊತ್ತಾಗುವುದಿಲ್ಲ ಕೆಲವೊಮ್ಮೆ ಸಣ್ಣದಾಗಿ ಕಾಲು ನೋವು, ಸಂಧಿವಾತ, ಕೀಲು ನೋವು, ಸ್ನಾಯುಗಳ ಸೆಳೆತ ಉಂಟಾಗಬಹುದು. ಆದರೆ ಇದರ ಬಗ್ಗೆ ನಾವು ಹೆಚ್ಚಿನ ಗಮನ ಕೊಡುವುದಿಲ್ಲ ಅಥವಾ ಒಂದು ಪೈನ್ ಕಿಲ್ಲರ್ ತಿಂದು ಸುಮ್ಮನಾಗುತ್ತೇವೆ.
ಈ ರೀತಿ ನಿರ್ಲಕ್ಷ ಮಾಡುವುದರಿಂದ ಮುಂದಿನ ದಿನಗಳಲ್ಲಿ ಉಂಟಾಗುವ ಆರೋಗ್ಯ ಸಮಸ್ಯೆಗಳು ಅಷ್ಟಿಷ್ಟಲ್ಲ. ದೀರ್ಘಕಾಲದ ಕೀಲು ನೋವು, ಸಂಧಿವಾತ, ಸ್ನಾಯು ನೋವು ಮೊದಲಾದವು ಉಂಟಾದರೆ ಅವು ಉಪಶಮನವೂ ಆಗುವುದಿಲ್ಲ ಹಾಗಾಗಿ ಆರಂಭದಲ್ಲಿಯೇ ಇದನ್ನು ಕಿತ್ತು ಬಿಸಾಡಿದರೆ ಯಾವುದೇ ಸಮಸ್ಯೆ ಇಲ್ಲದೆ ಆರೋಗ್ಯಕರ ಜೀವನ ನಡೆಸಬಹುದು. ಮುಖ್ಯವಾಗಿ ಮಾಡಬೇಕಾಗಿರುವುದು ಇಷ್ಟೇ, ನಾವು ಸೇವಿಸುವ ಆಹಾರದಲ್ಲಿ ಅತ್ಯುತ್ತಮವಾಗಿರುವಂತಹ ಆಹಾರವನ್ನು ಸೆಲೆಕ್ಟ್ ಮಾಡಿಕೊಳ್ಳಬೇಕು.ಹೌದು ದೀರ್ಘಕಾಲದ ಕೀಲು ನೋವು ಸ್ನಾಯು ನೋವು ಅಥವಾ ಸಂಧಿವಾತ ಮೊದಲಾದವುಗಳು ಉಂಟಾಗುವುದಕ್ಕೆ ಮುಖ್ಯ ಕಾರಣ ಪೋಷಕಾಂಶಗಳ ಕೊರತೆ. ಹಾಗಾಗಿ ಕೆಲವು ಸೂಪರ್ ಫುಡ್ ಗಳು ದೇಹಕ್ಕೆ ಬೇಕಾಗಿರುವ ಎಲ್ಲಾ ಪೋಷಕಾಂಶಗಳನ್ನು ನೀಡಿ ದೈಹಿಕವಾಗಿ ನಾವು ಆರೋಗ್ಯವಾಗಿ ಇಡುವಂತೆ ಮಾಡಬಲ್ಲವು. ಹಾಗಾದ್ರೆ ದೀರ್ಘಕಾಲದ ಕೀಲು ನೋವು ಉಂಟಾಗದಂತೆ ನೋಡಿಕೊಳ್ಳಲು ಯಾವ ಆಹಾರ ಪದಾರ್ಥಗಳನ್ನು ಸೇವಿಸಬೇಕು ನೋಡೋಣ.
ಶುಂಠಿ:
ಕೀಲುಗಳನ್ನು ಅಥವಾ ಮೂಳೆಗಳನ್ನು ಬಲಪಡಿಸುವಲ್ಲಿ ಶುಂಠಿ ಪ್ರಮುಖ ಪಾತ್ರ ವಹಿಸುತ್ತದೆ. ಮನೆಯಲ್ಲಿಯೇ ಮೊಣಕಾಲು ನೋವನ್ನು ನಿವಾರಿಸಲು ಅತ್ಯುತ್ತಮವಾಗಿರುವಂತಹ ಪದಾರ್ಥ ಎಂದರೆ ಅದು ಶುಂಠಿ. ನೀವು ನಿತ್ಯ ಸೇವಿಸುವ ಆಹಾರ ಪದಾರ್ಥಗಳಲ್ಲಿ ನಿಯಮಿತವಾಗಿ ಶುಂಠಿಯನ್ನು ಕೂಡ ಸೇರಿಸುತ್ತಾ ಬನ್ನಿ. ಇದರ ಜೊತೆಗೆ ಶುಂಠಿ ರಸ ಅಥವಾ ಶುಂಠಿ ಎಣ್ಣೆ ಮಾಡಿ ಕೀಲುನೋವು ಇರುವ ಭಾಗಕ್ಕೆ ಹಚ್ಚಿದರು ಕೂಡ ಮಂಡಿ ನೋವು ಕಡಿಮೆಯಾಗುತ್ತದೆ.
ಬೆರ್ರಿ ಹಣ್ಣುಗಳು:
ಸ್ಟ್ರಾಬೆರಿ ಹಾಗೂ ಬ್ಲೂ ಬೆರ್ರಿ ಯಂತಹ ಬೆರ್ರಿ ಹಣ್ಣುಗಳು ತಿನ್ನುವುದಕ್ಕೆ ರುಚಿ ಮಾತ್ರವಲ್ಲ ಇವು ಸಂಧಿವಾತ ವಿರೋಧಿ ಗುಣಲಕ್ಷಣಗಳನ್ನು ಹೊಂದಿವೆ. ಹಾಗಾಗಿ ಮೊಣಕಾಲು ನೋವಿಗೆ ಇದರ ಸೇವನೆ ಬಹಳ ಉಪಯುಕ್ತವಾಗಿದೆ. ಹಣ್ಣುಗಳನ್ನು ತಿನ್ನುವುದರಿಂದ ಮೂಳೆಗಳು ಕೂಡ ಸ್ಟ್ರಾಂಗ್ ಆಗುತ್ತವೆ ಹಾಗೂ ನಿಮಗೆ ಯಾವುದೇ ರೀತಿಯ ನೋವು ಭಾರದಂತೆ ಇದು ತಡೆಯುತ್ತದೆ.
ಆಲಿವ್ ಎಣ್ಣೆ: ಆಲಿವ್ ಎಣ್ಣೆ ಸಾಮಾನ್ಯವಾಗಿ ಎಲ್ಲರೂ ಬಳಸುವುದಿಲ್ಲ. ಯಾಕೆಂದರೆ ಇದು ತುಸು ದುಬಾರಿ. ಆದರೆ ಇದರಲ್ಲಿ ಇರುವ ಆರೋಗ್ಯಕರ ಬೆನಿಫಿಟ್ ಕೇಳಿದರೆ ಖಂಡಿತವಾಗಿಯೂ ನೀವು ಬಳಸಲು ಆರಂಭಿಸುತ್ತೀರಿ. ಉರಿಯೂತವನ್ನು ನಿವಾರಿಸುವಂತಹ ಶಕ್ತಿ ಆಲಿವ್ ಎಣ್ಣೆಯಲ್ಲಿ ಇದೆ. ಹಾಗಾಗಿ ನೀವು ಕೀಲುಗಳನ್ನು ಬಲಪಡಿಸಿಕೊಳ್ಳುವುದಕ್ಕೆ ಆಲಿವ್ ಎಣ್ಣೆಯನ್ನು ನಿಮ್ಮ ಆಹಾರ ಪದಾರ್ಥದಲ್ಲಿ ಸೇರಿಸುವುದು ಅತ್ಯವಶ್ಯಕ.
ವಾಲ್ ನೆಟ್ಸ್: ನಾವು ಸೇವಿಸಲೇಬೇಕಾದ ಅತ್ಯಂತ ಪೋಷಕಾಂಶಗಳನ್ನು ಹೊಂದಿರುವ ಡ್ರೈ ಫ್ರೂಟ್ ಗಳಲ್ಲಿ ವಾಲ್ನೆಟ್ ಕೂಡ ಒಂದು. ವಾಲ್ ನೆಟ್ ನಲ್ಲಿ ಸಾಕಷ್ಟು ಪೋಷಕಾಂಶಗಳು ಇರುತ್ತವೆ. ಇದರಿಂದ ಮೂಳೆಗಳು ಸ್ಟ್ರಾಂಗ್ ಆಗುವುದಕ್ಕೆ ಸಹಾಯಕವಾಗುತ್ತದೆ. ಮೊಣಕಾಲುಗಳ ನೋವು ಅಥವಾ ಮೊಣಕೈಗಳ ನೋವು ಇದ್ದರೆ, ವಾಲೆಟ್ ಅನ್ನು ತಪ್ಪದೇ ಸೇವಿಸಿ ಇದು ಮೂಳೆಗಳನ್ನು ಬಲಪಡಿಸಿ ದೇಹದಲ್ಲಿ ಯಾವುದೇ ರೀತಿಯಾದಂತಹ ಕೀಲು ನೋವು ಕಾಣಿಸಿಕೊಳ್ಳದಂತೆ ನೋಡಿಕೊಳ್ಳುತ್ತದೆ.
ಎಲೆಕೋಸು:
ಸಾಕಷ್ಟು ಆರೋಗ್ಯಕರ ಗುಣಲಕ್ಷಣಗಳನ್ನು ಹೊಂದಿರುವ ಎಲೆಕೋಸು ನಿಮ್ಮ ಮೂಳೆಗಳ ಬಲಪಡಿಸುವಿಕೆಗೂ ಕೂಡ ಸಹಾಯಕವಾಗಿದೆ. ಗುಣಲಕ್ಷಣ ಇರುತ್ತದೆ ಹಾಗಾಗಿ ಇದು ಕೀಲುಗಳನ್ನ ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ನೀವು ಕೂಡ ತಪ್ಪದೇ ನಿಮ್ಮ ಆಹಾರ ಪದ್ಧತಿಯಲ್ಲಿ ಎಲೆಕೋಸನ್ನು ಕೂಡ ಸೇರಿಸಿದರೆ ಹೆಚ್ಚು ಆರೋಗ್ಯವಂತರಾಗಿ ಇರಬಹುದು.
ಕ್ಯಾರೆಟ್ ಸೇವನೆ:
ಕ್ಯಾರೆಟ್ ನಲ್ಲಿ ಎಲ್ಲಾ ರೀತಿಯ ಜೀವಸತ್ವಗಳು ಇದೆ ಅದರಲ್ಲೂ ಪ್ರಮುಖವಾಗಿ ವಿಟಮಿನ್ ಎ ಮತ್ತು ಬಿ ಅಂಶ ಹೇರಳವಾಗಿದೆ. ಇದು ಮೂಳೆಗಳನ್ನು ಬಲಪಡಿಸಲು ಹಾಗೂ ಮೂಳೆಗಳಲ್ಲಿ ಇರುವಂತಹ ನೋವನ್ನು ತಡೆಗಟ್ಟಲು ಸಹಾಯ ಮಾಡುತ್ತದೆ. ಕೆಲವು ಮಂಡಿ ನೋವು, ಮೊಣಕೈ ನೋವು ಮೊದಲಾದ ಸಮಸ್ಯೆಗಳು ಇದ್ದರೆ ನಿಮ್ಮ ಆಹಾರ ಪದಾರ್ಥದಲ್ಲಿ ಕ್ಯಾರೆಟ್ ಸೇರಿಸುವುದನ್ನು ಮರೆಯಬೇಡಿ.
ಮೀನುಗಳು:
ಕೆಲವು ಪ್ರಮುಖವಾದ ವೆರೈಟಿ ಮೀನುಗಳು ಸಿಗುತ್ತವೆ ಅವು ಮೂಳೆಗಳನ್ನ ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಉದಾಹರಣೆಗೆ ಸಾಲ್ಮನ್ ಹಾಗೂ ಮ್ಯಾಕೆರೆಲ್ ಮೀನುಗಳಲ್ಲಿ ಕೊಬ್ಬಿನ ಅಂಶ ಹಾಗೂ ಪೋಷಕಾಂಶಗಳು ಹೇರಳವಾಗಿರುತ್ತದೆ. ಇವು ಕೀಲುಗಳನ್ನು ಬಲಪಡಿಸಿ ದೇಹದಲ್ಲಿ ಯಾವುದೇ ರೀತಿಯ ನೋವು ಕಾಣಿಸಿಕೊಳ್ಳದೆ ಇರಲು ಸಹಾಯ ಮಾಡುತ್ತದೆ. ಇಂತಹ ಪೋಷಕಾಂಶ ಭರಿತ ಮೀನುಗಳನ್ನು ಆಗಾಗ ನಿಮ್ಮ ಆಹಾರ ಕ್ರಮದಲ್ಲಿ ಸೇರಿಸುವುದು ಒಳ್ಳೆಯದು.
ಮನುಷ್ಯನಿಗೆ ಏನೇ ಇದ್ದರೂ, ಎಷ್ಟೇ ಹಣ ಸಂಪಾದನೆ ಮಾಡಿದರು ಆರೋಗ್ಯ ಇಲ್ಲದೆ ಇದ್ರೆ ಪ್ರಯೋಜನವೇ ಇಲ್ಲ. ಹಾಗಾಗಿ ದುಡಿದು ದುಡಿದು ದೇಹವನ್ನು ಹಾಳು ಮಾಡಿಕೊಳ್ಳುತ್ತಿರುವ ನಾವು ಆರೋಗ್ಯದ ಬಗ್ಗೆ ಲಕ್ಷವಹಿಸಲೇಬೇಕು. ಇದಕ್ಕಾಗಿ ಕೇವಲ ನಮ್ಮ ಆಹಾರದಲ್ಲಿ ಉತ್ತಮ ಆಹಾರ ಕ್ರಮವನ್ನು ಅಳವಡಿಸಿಕೊಂಡರೆ ಸಾಕು. ದೇಹ ಆರೋಗ್ಯಕರವಾಗಿಯೇ ಇರುತ್ತದೆ.