ನೈಜೀರಿಯಾ: ವಿಶ್ವ ದಾಖಲೆಯನ್ನು ಸಾಧಿಸುವ ಸಲುವಾಗಿ ಜನರು ಈಗಾಗಲೇ ಇರುವ ದಾಖಲೆಯನ್ನು ಮುರಿಯಲು ಸರ್ಕಸ್ ಮಾಡುತ್ತಿರುತ್ತಾರೆ. ಇತ್ತೀಚೆಗಷ್ಟೇ ವ್ಯಕ್ತಿಯೊಬ್ಬ ಹಳೆಯ ದಾಖಲೆಯನ್ನು ಅಳಿಸಿ ಹಾಕುವಂತೆ ಪಣ ತೊಟ್ಟು 7 ದಿನಗಳ ಕಾಲ ಎಡೆಬಿಡದೆ ಕಣ್ಣೀರು ಹಾಕಿ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾನೆ.

ನೈಜೀರಿಯಾದಲ್ಲಿ ವ್ಯಕ್ತಿಯೊಬ್ಬರು ಸಾಧಿಸಿದ ದಾಖಲೆಯನ್ನು ಮುರಿಯುವ ಭರವಸೆಯಲ್ಲಿ ವ್ಯಕ್ತಿಯೊಬ್ಬರು ಏಳು ದಿನಗಳ ಕಾಲ ನಿಲ್ಲದೆ ಅಳುತ್ತಿದ್ದರು. ಈ ಪರಿಣಾಮವಾಗಿ 45 ನಿಮಿಷಗಳ ಕಾಲ ಕಣ್ಣು ಕಾಣದಂತಾಯ್ತು.
ತೆಂಬು ಎಬೆರೆ ಎಂಬ ವ್ಯಕ್ತಿ 7 ದಿನಗಳ ಕಾಲ ಎಡೆಬಿಡದೆ ಅಳುತ್ತಾ ವಿಶ್ವದಾಖಲೆ ನಿರ್ಮಿಸಿದ. ಆದರೆ ಈ ದಾಖಲೆ ಮಾಡಿರುವ ಸಂತೋಷದ ಬೆನ್ನಲ್ಲೇ ಇತನಿಗೆ ಸಂಕಷ್ಟ ಎದುರಾಗಿದೆ. ಮೊದಲು ತಲೆನೋವು, ಮುಖದ ಊತ, ಉಬ್ಬಿದ ಕಣ್ಣುಗಳಿ ನೋವುಗಳಿಂದ ಬಳಲುತ್ತಿದ್ದನು. ನಂತರ 45 ನಿಮಿಷಗಳ ಕಾಲ ತನ್ನ ದೃಷ್ಟಿ ಕಳೆದುಕೊಂಡಿದ್ದನು. ಕಣ್ಣು ಕಾಣಿಸ ತೊಡಗಿದ ನಂತರ ಗಿನ್ನೆಸ್ ವಿಶ್ವ ದಾಖಲೆಗೆ ಅರ್ಜಿ ಸಲ್ಲಿಸಿದರು ಆದರೆ ಅವರು ಅದನ್ನು ಸಂಸ್ಥೆ ಪರಿಗಣಿಸಲಿಲ್ಲ.
ಟೆಂಬು ಎಬೆರೆ ಮಾತ್ರವಲ್ಲದೆ ಅನೇಕ ನೈಜೀರಿಯನ್ನರು ಅನೇಕ ದಾಖಲೆಗಳನ್ನು ಮುರಿಯಲು ಪ್ರಯತ್ನಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಕಣ್ಣು ಕಳೆದುಕೊಂಡ ಘಟನೆಯಿಂದ ಎಚ್ಚರಿತುಕೊಂಡು ಇಂತಹ ಹುಚ್ಚು ಪ್ರಯತ್ನ ಮಾಡಬೇಡಿ ಎಂದು ಗಿನ್ನೆಸ್ ವರ್ಲ್ಡ್ ಮ್ಯಾನೇಜ್‌ಮೆಂಟ್ ನೈಜೀರಿಯನ್ನರಲ್ಲಿ ಮನವಿ ಮಾಡಿದೆ.