ಮುಂಬೈ: ಇಶಾ ಅಂಬಾನಿ ನೇತೃತ್ವದ ಟಿರಾ ಮೂಲಕ ಸೌಂದರ್ಯ ಹಾಗೂ ತ್ವಚೆಯ ಕಾಳಜಿಗೆ ಸಂಬಂಧಿಸಿದ ಉದ್ಯಮಕ್ಕೆ ಈಗಾಗಲೇ ಪ್ರವೇಶಿಸಿದೆ. ಈಗ ಒಳ ಉಡುಪುಗಳ ಮಾರುಕಟ್ಟೆಯನ್ನು ಪ್ರವೇಶಿಸಲು ಸಿದ್ಧಗೊಂಡಿದ್ದು, ಬ್ಲಶ್ ಲೇಸ್ ಎಂಬ ಹೊಸ ಬ್ರ್ಯಾಂಡ್ ಅನ್ನು ಪರಿಚಯಿಸುತ್ತಿದೆ.
ರಿಲಯನ್ಸ್ ರಿಟೇಲ್ ಬ್ಲಶ್ ಲೇಸ್ ಎಂಬ ನೂತನ ಬ್ರ್ಯಾಂಡ್ ಮೂಲಕ ಒಳ ಉಡುಪುಗಳ ಮಾರುಕಟ್ಟೆ ಪ್ರವೇಶಿಸುತ್ತಿದ್ದು, ಇದರ ಉತ್ಪನ್ನಗಳು ಪ್ರೀಮಿಯಂ ಗುಣಮಟ್ಟದ ವಿನ್ಯಾಸಗಳು ಹಾಗೂ ಅರ್ಹ ಬೆಲೆಗಳನ್ನು ಹೊಂದಿರಲಿವೆ. ಇನ್ನು ಕೆಲವು ಉತ್ಪನ್ನಗಳನ್ನು 85ರೂ.ಗೆ ಮಾರಾಟ ಮಾಡುವ ಮೂಲಕ ಈಗಾಗಲೇ ಒಳ ಉಡುಪು ಮಾರುಕಟ್ಟೆಯಲ್ಲಿ ಜನಪ್ರಿಯತೆ ಗಳಿಸಿರುವ ಕ್ಲೊವಿಯಾ, ಝಿವಾಮಿ, ಅಮಂಟೆ ಹಾಗೂ ನೈಕಾ ಫ್ಯಾಷನ್ ಬ್ರ್ಯಾಂಡ್ ಗಳಿಗೆ ಪೈಪೋಟಿ ನೀಡಲಿದೆ.
ಇಶಾ ಅಂಬಾನಿ ನೇತೃತ್ವದಲ್ಲಿ ಬ್ಲಶ್ ಲೇಸ್ ಬ್ರ್ಯಾಂಡ್ ದೇಶದ ಕೆಲವು ನಗರಗಳಲ್ಲಿ ಬಿಡುಗಡೆಗೊಳ್ಳಲಿದೆ. ಇನ್ನು ದೇಶಾದ್ಯಂತ ಈ ಬ್ರ್ಯಾಂಡ್ ನ ನೂರಾರು ಮಳಿಗೆಗಳನ್ನು ತೆರೆಯುವ ಗುರಿಯನ್ನು ಕೂಡ ರಿಲಯನ್ಸ್ ರಿಟೇಲ್ ಹೊಂದಿದೆ.
ಲ್ಯಾಕ್ಮಿ, ಲೋರೆಲ್, ಮಾರ್ಕ್ಸ್ ಹಾಗೂ ಸ್ಪೆನ್ಸರ್ಸ್, ಕ್ಲೊವಿಯಾ, ಅಮಂಟೆ ಹಾಗೂ ಇತರ ಕಾಸ್ಮೆಟಿಕ್ಸ್ ಹಾಗೂ ಒಳ ಉಡುಪುಗಳ ಬ್ರ್ಯಾಂಡ್ ಗಳ ಜತೆಗೆ ಬ್ಲಶ್ ಲೇಸ್ ದೇಶಾದ್ಯಂತ ಒಪ್ಪಂದ ಮಾಡಿಕೊಳ್ಳಲಿದೆ. ಆ ಮೂಲಕ ಉತ್ಪನ್ನಗಳ ಮೇಲೆ ಹೆಚ್ಚಿನ ಡಿಸ್ಕೌಂಟ್ಸ್ ನೀಡಲಿದೆ. ಹಾಗೆಯೇ ಕೆಲವು ಬ್ರ್ಯಾಂಡ್ ಗಳನ್ನು ಅತೀ ಕಡಿಮೆ ಅಂದರೆ 85ರೂ.ಗೆ ಮಾರಾಟ ಮಾಡಲಿದೆ.