HEALTH TIPS

ಮಹಾರಾಷ್ಟ್ರದ ಸಮೃದ್ಧಿ ಎಕ್ಸ್ ಪ್ರೆಸ್ ವೇ: ಆರು ತಿಂಗಳಲ್ಲಿ ಅಪಘಾತದಲ್ಲಿ 88 ಜನರ ಸಾವು- ಅಧಿಕಾರಿಗಳು

               ಮುಂಬೈ: ಶನಿವಾರ ಡಿವೈಡರ್ ಗೆ ಡಿಕ್ಕಿ ಹೊಡೆದ ನಂತರ ಖಾಸಗಿ ಬಸ್ ಗೆ ಬೆಂಕಿ ಹೊತ್ತಿಕೊಂಡು ಮೃತಪಟ್ಟ 25 ಜನರು ಸೇರಿದಂತೆ ಕಳೆದ ಆರು ತಿಂಗಳಲ್ಲಿ ಮಹಾರಾಷ್ಟ್ರದ ಸಮೃದ್ಧಿ ಎಕ್ಸ್ ಪ್ರೆಸ್ ವೇ ನಲ್ಲಿ 88 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

                ಆರು ಪಥದ ಎಕ್ಸ್ ಪ್ರೆಸ್ ವೇನಲ್ಲಿ ಅಪಘಾತಗಳಿಗೆ ಹೈವೇ ಹಿಪ್ನಾಸಿಸ್ ಕೂಡಾ ಒಂದು ಕಾರಣ ಎಂದು ರಾಜ್ಯ ಹೆದ್ದಾರಿ ಪೊಲೀಸ್ ಅಧಿಕಾರಿ ಹೇಳಿದ್ದಾರೆ.

              ಹೈವೇ ಹಿಪ್ನಾಸಿಸ್ ಎಂದರೆ ಚಾಲಕನು ಯಾವುದೇ ಟ್ರಾಫಿಕ್ ಅಥವಾ ಇತರೆ ಗಮನಹರಿಸಬೇಕಾದ ಅಂಶಗಳು ಇಲ್ಲದಾಗ ಹೆದ್ದಾರಿಯನ್ನೇ ನೋಡುತ್ತಾ ಸಂಮೋಹನ ಸ್ಥಿತಿಗೆ ತಲುಪುವುದಾಗಿದೆ. ಆ ಅವಧಿಯಲ್ಲಿ ಏನಾಯಿತು ಎಂಬುದು ಚಾಲಕನ ನೆನಪಿನಲ್ಲಿ ಇರುವುದಿಲ್ಲ.

                ಕಳೆದ ವರ್ಷ ಡಿಸೆಂಬರ್ ನಿಂದ ನಾಗ್ಪುರ- ಮುಂಬೈ ಎಕ್ಸ್ ಪ್ರೆಸ್ ವೇ ಓಪನ್ ಆದ ಬಳಿಕ ಒಟ್ಟು 39 ಮಾರಣಾಂತಿಕ ಅಪಘಾತಗಳು ಸಂಭವಿಸಿವೆ. ಅಲ್ಲದೇ ಒಟ್ಟು 616 ಸಣ್ಣ ಮತ್ತು ದೊಡ್ಡ ಅಪಘಾತಗಳು ಸಂಭವಿಸಿದ್ದು, 656 ಜನರು ಗಂಭೀರ ಮತ್ತು ಸಣ್ಣ ಗಾಯಗಳಿಂದ ಬಳಲುತ್ತಿದ್ದಾರೆ  ಎಂದು ಅವರು ತಿಳಿಸಿದ್ದಾರೆ.

                 ಬಹುತೇಕ ಅಪಘಾತಗಳುಅತಿಯಾದ ವೇಗ, ಚಾಲಕರು ನಿದ್ರಿಸುವುದು ಮತ್ತು ಟೈರ್ ಸ್ಫೋಟದಂತಹ ಕಾರಣಗಳಿಂದ ಉಂಟಾಗಿದೆ. ರಸ್ತೆ ಸಂಮೋಹನದ ಸಮಸ್ಯೆಯನ್ನು ನಿಭಾಯಿಸಲು ಹೆದ್ದಾರಿ ಪೊಲೀಸರು ಪ್ರಯತ್ನಿಸುತ್ತಿದ್ದಾರೆ. 2022 ರಲ್ಲಿ ಮಹಾರಾಷ್ಟ್ರದಾದ್ಯಂತ 15,224 ಜನರು ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪಿದ್ದಾರೆ ಎಂದು ಅವರು ಹೇಳಿದರು. 701-ಕಿಲೋಮೀಟರ್ ನಾಗ್ಪುರ-ಮುಂಬೈ ಸಮೃದ್ಧಿ ಮಹಾಮಾರ್ಗ್ ಸದ್ಯ ವಿದರ್ಭದಿಂದ  ನಾಸಿಕ್‌ನ ಭರ್ವಿರ್‌ವರೆಗೆ 601ಕಿಮೀ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries