ಬೆಂಗಳೂರು: ಬೆಂಗಳೂರು ಮೂಲದ ಸ್ಟಾರ್ಟ್‌ಅಪ್ ಡುಕಾನ್ ತನ್ನ ಶೇ. 90 ರಷ್ಟು ಗ್ರಾಹಕ ಬೆಂಬಲ ವಿಭಾಗದ ತಂಡವನ್ನು ಕೆಲಸದಿಂದ ತೆಗೆದುಹಾಕಿದ್ದು, ಅವರ ಜಾಗಕ್ಕೆ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಅಳವಡಿಸಿಕೊಂಡ ನಂತರ ವಿವಾದದ ಕೇಂದ್ರಬಿಂದುವಾಗಿದೆ.
ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಅಳವಡಿಕೆ ನಂತರ ಗ್ರಾಹಕ ಬೆಂಬಲಕ್ಕೆ ಸಂಬಂಧಿಸಿದ ವೆಚ್ಚವು ಶೇಕಡ 85 ರಷ್ಟು ಕಡಿಮೆಯಾಗಿದೆ. ಅಲ್ಲದೇ ರೆಸಲ್ಯೂಷನ್ ಸಮಯ ಎರಡು ಗಂಟೆಗಳಿಂದ ಮೂರು ನಿಮಿಷಗಳಿಗೆ ಕಡಿಮೆಯಾಗಿದೆ ಎಂದು ಡುಕಾನ್ ಸಂಸ್ಥಾಪಕ ಸುಮಿತ್ ಶಾ ಟ್ವೀಟ್ ಮಾಡಿದ್ದಾರೆ.
ಸುಮಿತ್ ಶಾ ಅವರ ಟ್ವೀಟ್ ಗೆ ಅನೇಕ ಟ್ವೀಟಿಗರು ಕಿಡಿಕಾರಿದ್ದು. ಈ "ಹೃದಯಹೀನ" ನಿರ್ಧಾರದಿಂದ ತಮ್ಮ ಸಿಬ್ಬಂದಿಯ ಜೀವನಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಎಐ ಚಾಟ್‌ಬಾಟ್‌ನಿಂದಾಗಿ ಶೇ. 90 ರಷ್ಟು ಸಿಬ್ಬಂದಿಯನ್ನು ವಜಾಗೊಳಿಸಿದ್ದೇವೆ. ಕಠಿಣ? ನಿಜ, ಆದರೆ ಅಗತ್ಯವಾಗಿತ್ತು. ಇದರಿಂದಾಗಿ ಗ್ರಾಹಕ ಸಪೋರ್ಟ್ ಗೆ ಸಂಬಂಧಿಸಿದ ವೆಚ್ಚ ಶೇಕಡ 85 ರಷ್ಟು ಕಡಿಮೆಯಾಗಿದೆ. ಅಲ್ಲದೇ ರೆಸೆಲ್ಯೂಷನ್ ಸಮಯ ಎರಡು ಗಂಟೆಗಳಿಂದ ಮೂರು ನಿಮಿಷಗಳಿಗೆ ಕಡಿಮೆಯಾಗಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಸುಮಿತ್ ಶಾ ಡುಕಾನ್ ನ ಸಹ-ಸಂಸ್ಥಾಪಕ ಮತ್ತು ಸಿಇಒಆಗಿದ್ದಾರೆ, ಇದು ಡಿಐವೈ ಪ್ಲಾಟ್‌ಫಾರ್ಮ್ ಆಗಿದ್ದು, ಇದು ಯಾವುದೇ ಅನುಭವ ಹೊಂದಿರದ ವ್ಯಾಪಾರಿಗಳು ಹಾಗೂ ಚಿಲ್ಲರೆ ವ್ಯಾಪಾರಿಗಳಿಗೂ ಇ- ಕಾರ್ಮಸ್ ಸ್ಟೋರ್ ತೆರೆಯಲು ನೆರವಾಗುತ್ತದೆ. ಸುಮಿತ್ ಶಾ ಅವರು 2020ರಲ್ಲಿ ಸುಭಾಷ್ ಚೌಧರಿ ಅವರ ಜೊತೆ ಸೇರಿ ಡುಕಾನ್ ಸ್ಥಾಪಿಸಿದ್ದಾರೆ.