ಮಕ್ಕಳಿಗೆ ನೀವು ಸ್ನ್ಯಾಕ್ಸ್ ಯಾವುದು ಹಾಕುತ್ತೀರಿ ಎಂಬುವುದು ಅವರ ಆರೋಗ್ಯದ ದೃಷ್ಟಿಯಿಂದ ತುಂಬಾನೇ ಮುಖ್ಯವಾಗಿರುತ್ತದೆ. ಬಹುತೇಕ ಸ್ಕೂಲ್‌ಗಳಲ್ಲಿ ಸ್ನ್ಯಾಕ್ಸ್ ಡಬ್ಬಕ್ಕೆ ಬಿಸ್ಕೆಟ್ಸ್ ಅಥವಾ ಚಿಪ್ಸ್ ಹಾಕಿಕೊಂಡು ಹೋಗಲು ಅನುಮತಿ ನೀಡುವುದಿಲ್ಲ, ಅದು ತುಂಬಾನೇ ಒಳ್ಳೆಯ ವಿಷಯ.
ಮಕ್ಕಳ ಸ್ಮ್ಯಾಕ್ಸ್ ಡಬ್ಬಕ್ಕೆ ಫ್ರೂಟ್ಸ್, ಡ್ರೈ ಫ್ರೂಟ್ಸ್ ಹೀಗೆ ಆರೋಗ್ಯಕರ ಸ್ನಾಕ್ಸ್ ಹಾಕಿ ಕೊಡಬೇಕು. ಆದರೆ ಮಳೆಗಾಲ ಅಲ್ವಾ ಮಕ್ಕಳಿಗೆ ಹಣ್ಣುಗಳನ್ನು ನೀಡಿದರೆ ಶೀತ ಉಂಟಾಗುತ್ತದೆ ಎಂಬ ಭಯ ಪೋಷಕರದ್ದು, ಆದರೆ ಮಳೆಗಾಲದಲ್ಲಿ ನಿಮ್ಮ ಮಗುವಿನ ಸ್ನಾಕ್ಸ್ ಡಬ್ಬಕ್ಕೆ ಈ ಹಣ್ಣುಗಳನ್ನು ಯಾವುದೇ ಭಯವಿಲ್ಲದೆ ಹಾಕಿಕೊಡಿ, ಇವುಗಳು ನಿಮ್ಮ ಪುಟಾಣಿಗಳ ಆರೋಗ್ಯ ವೃದ್ಧಿಸುವುದು:ಡ್ರ್ಯಾಗನ್ ಫ್ರೂಟ್: ಡ್ರ್ಯಾಗನ್ ಫ್ರೂಟ್ ಅನ್ನು ನೀವು ಮಗುವಿಗೆ 6 ತಿಂಗಳು ಇರುವಾಗಲೇ ನೀಡಬಹುದು, ಇದು ಮೃದುವಾಗಿರುವುದರಿಂದ ಮಗುವಿಗೆ ನುಂಗಲು ಸುಲಭವಾಗಿರುವುರಿಂದ ಯಾವುದೇ ಭಯವಿಲ್ಲದೆ ಬಾಕ್ಸ್‌ನಲ್ಲಿ ಹಾಕಿ ಕೊಡಬಹುದು. ಈ ಹಣ್ಣನ್ನು ತಿನ್ನುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುವುದು. ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು, ತ್ವಚೆ, ಕೂದಲು, ಮೂಳೆ, ಹೃದಯದ ಆರೋಗ್ಯಕ್ಕೆ ಒಳ್ಳೆಯದು.
ದಾಳಿಂಬೆ:
ದಾಳಿಂಬೆ ಹಣ್ಣನ್ನು ಸ್ನ್ಯಾಕ್ಸ್ ಡಬ್ಬದಲ್ಲಿ ತುಂಬಿ. ದಾಳಿಂಬೆ ಮಕ್ಕಳಲ್ಲಿ ರಕ್ತಹೀನತೆ ತಡೆಗಟ್ಟಲು ಸಹಕಾರಿ, ಹಿಮೋಗ್ಲೋಬಿನ್ ಹೆಚ್ಚಿಸುತ್ತದೆ. ಮಕ್ಕಳ ದಂತದ ಆರೋಗ್ಯಕ್ಕೂ ತುಂಬಾ ತುಂಬಾ ಒಳ್ಳೆಯದು.
ಪ್ಲಮ್, ಚೆರ್ರಿ:
ನೀವು ಮಕ್ಕಳ ಸ್ನ್ಯಾಕ್ಸ್ ಡಬ್ಬಕ್ಕೆ ಪ್ಲಮ್, ಚೆರ್ರಿ ಇವುಗಳನ್ನು ಹಾಕಿ ಕೊಡಿ, ಈ ಹಣ್ಣುಗಳನ್ನು ಮಕ್ಕಳು ತಿನ್ನುವುದರಿಂದ ಈ ಮಳೆಗಾಲದಲ್ಲಿ ಕಾಯಿಲೆಗಳ ಹೋರಾಡುವ ಶಕ್ತಿ ಮಕ್ಕಳ ದೇಹಕ್ಕೆ ದೊರೆಯುತ್ತದೆ.
ಪಿಯರ್ಸ್, ಸೇಬು:
ಮಕ್ಕಳ ಸ್ನ್ಯಾಕ್ಸ್ ಡಬ್ಬಕ್ಕೆ ಪಿಯರ್ಸ್, ಸೇಬು ಹಾಕಿ ಕೊಡಿ. ಪಿಯರ್ಸ್ ಮಕ್ಕಳಲ್ಲಿ ಮಲಬದ್ಧತೆ ಸಮಸ್ಯೆ ತಡೆಗಟ್ಟಲು ತುಂಬಾನೇ ಸಹಕಾರಿಯಾಗಿದೆ. ಸೇಬು ಕೂಡ ಮಕ್ಕಳ ಜೀರ್ಣಕ್ರಿಯೆಗೆ, ಮಕ್ಕಳ ಮೂಳೆಯ ಆರೋಗ್ಯಕ್ಕೆ, ಬುದ್ಧಿ ಶಕ್ತಿಗೆ, ಮಕ್ಕಳ ಹೃದಯ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅಲ್ಲದೆ ಇವುಗಳನ್ನು ನೀಡುವುದರಿಂದ ಶೀತವಾಗುವುದಿಲ್ಲ, ಮಳೆಗಾಲದಲ್ಲಿ ಸ್ನ್ಯಾಕ್ಸ್ ಡಬ್ಬಿಗೆ ಹಾಕಿ ಕೊಡಿ.
ಬಾಳೆಹಣ್ಣು:
ಬಾಳೆಹಣ್ಣು ಕೂಡ ನೀವು ಮಕ್ಕಳ ಸ್ನ್ಯಾಕ್ಸ್ ಡಬ್ಬಕ್ಕೆ ಹಾಕಿ ಕೊಡಿ, ಆದರೆ ತುಂಬಾ ಕೆಮ್ಮು, ಕಫ ಇದ್ದಾಗ ಇದನ್ನು ನೀಡಬೇಡಿ, ಇಲ್ಲದಿದ್ದರೆ ನೀಡಬಹುದು.
ನೇರಳೆಹಣ್ಣು:
ಸೀಸನಲ್ ಹಣ್ಣು ಯಾವುದೂ ಮಿಸ್ ಮಾಡಬಾರದು, ನೇರಳೆಹಣ್ಣು ಮಕ್ಕಳಿಗೆ ನೀಡುವುದರಿಂದ ಜೀರ್ಣಕ್ರಿಯೆಗೆ ಒಳ್ಳೆಯದು, ತ್ವಚೆಗೆ ಒಳ್ಳೆಯದು, ಹಿಮೋಗ್ಲೋಬಿನ್ ಹೆಚ್ಚಾಗುವುದು, ಬಾಯಿ ಹಾಗೂ ಲಿವರ್‌ನ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.
ಸೀಬೆಕಾಯಿ:
ಸೀಬೆಕಾಯಿ ತಿಂದರೆ ಶೀತ ಉಂಟಾಗುತ್ತದೆ ಎಂದು ತುಂಬಾ ಮಕ್ಕಳಿಗೆ ಸೀಬೆಕಾಯಿ ಕೊಡುವುದಿಲ್ಲ, ಆದರೆ ಸೀಬೆಕಾಯಿಯಲ್ಲಿ ವಿಟಮಿನ್ ಸಿ ಅಧಿಕವಿರುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸುವುದು, ನೀವು ಬೇಕಾದರೆ ಸ್ವಲ್ಪ ಉಪ್ಪು ಹಾಗೂ ಕಾಳು ಮೆಣಸಿನ ಪುಡಿ ಉದುರಿಸಿ ಕೊಡಬಹುದು.
ಇದರ ಜೊತೆ ಬ್ರೊಕೋಲಿ, ಬೇಯಿಸಿದ ತರಕಾರಿ ಇವುಗಳನ್ನು ಸ್ನ್ಯಾಕ್ಸ್ ಡಬ್ಬದಲ್ಲಿ ತುಂಬಿ ಕೊಡಿ, ದಿನಾ ಒಂದೇ ರೀತಿಯ ಫುಡ್ ಕೊಡ್ಬೇಡಿ, ದಿನಾ ಬೇರೆ-ಬೇರೆ ಕೊಡಿ, ಹೀಗೆ ಕೊಡುವುದರಿಂದ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುವುದು.