ಮಂಜೇಶ್ವರ: ಮಂಜೇಶ್ವರದಲ್ಲಿ 16 ವರ್ಷ ಪ್ರಾಯದ ತಿಮಿಂಗಿಲದ ಅಸ್ಥಿಪಂಜರ ಪತ್ತೆಯಾಗಿದ್ದು, ಡಿಎಫ್‍ಒ ಕಾಸರಗೋಡು ರೇಂಜ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಮಂಜೇಶ್ವರದ ಕಣ್ವತೀರ್ಥ ಕಡಪ್ಪುರದಲ್ಲಿ ಕರ್ನಾಟಕ ಮೂಲದವರೊಬ್ಬರ ಒಡೆತನದ 15 ಎಕರೆ ಜಮೀನಿನ ಶೆಡ್‍ನಲ್ಲಿ ಅಸ್ಥಿಪಂಜರ ಪತ್ತೆಯಾಗಿದೆ. ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಜಮೀನು ಮಾಲೀಕರನ್ನು ಸಂಪರ್ಕಿಸಿದಾಗ 2007ರಲ್ಲಿ ಕಣ್ವತೀರ್ಥ ಕಡಪ್ಪುರದಲ್ಲಿ ದಡ ಸೇರಿದ್ದ ತಿಮಿಂಗಿಲವನ್ನು ಸಂರಕ್ಷಿಸಿಡಲು ಸ್ಥಳದಲ್ಲಿ 27ಸಾವಿರ ರೂ. ವೆಚ್ಚದಲ್ಲಿ ಶೆಡ್ ನಿರ್ಮಿಸಿ ಕಲಾಕೃತಿಯಾಗಿ ಇರಿಸಿರುವುದಾಗಿ ಮಾಹಿತಿ ಲಭಿಸಿದೆ. ಇಲ್ಲಿಂದ ತಿಮಿಂಗಿಲದ ಒಟ್ಟು 23 ಮೂಳೆ ತುಣುಕು ಪತ್ತೆಯಾಗಿವೆ. ಇವುಗಳನ್ನು ಡಿಎನ್‍ಎ ಪರೀಕ್ಷೆಗೆ ಕಳುಹಿಸಲಾಗುವುದು. ನಂತರ ಅನಧಿಕೃತವಾಗಿ ತಿಮಿಂಗಿಲವನ್ನು ಸಂಗ್ರಹಿಸಿಟ್ಟಿಕೊಂಡಿರುವ ಬಗ್ಗೆ ಕಾನೂನು ಕ್ರಮ ಜರುಗಿಸುವುದಾಗಿ ಅರಣ್ಯ ವಲಯಾಧಿಕಾರಿ ಸೊಲೊಮನ್ ಕೆ. ಜಾರ್ಜ್ ತಿಳಿಸಿದ್ದಾರೆ. ಕಾಸರಗೋಡು ಡಿಎಫ್‍ಒ ಅಶ್ರಫ್ ನೇತೃತ್ವದಲ್ಲಿ ತಪಾಸಣೆ ನಡೆಸಲಾಯಿತು. ಅರಣ್ಯಾಧಿಕಾರಿಗಳಾದ ಕೆ.ಬಾಬು, ಆರ್.ಬಾಬು, ಜಯಕುಮಾರ್, ಬಿಎಫ್ ಒ. ಸುಧೀಶ್, ನಿವೇದ್, ಅಮಲ್ ಮತ್ತಿತರರು ಗುಂಪಿನಲ್ಲಿದ್ದರು.