ಪ್ರತಿಯೊಬ್ಬರಿಗೂ ಆರೋಗ್ಯಕರವಾಗಿರುವ ಲೈಫ್ ಬೇಕೇ ಬೇಕು. ನಾವು ಎಷ್ಟೇ ಜೀವನದಲ್ಲಿ ಬ್ಯುಸಿ ಇದ್ದೇವೆ ಸ್ವಲ್ಪವೂ ಸಮಯವೇ ಇಲ್ಲ ಎಂದುಕೊಂಡರು ಕೂಡ ನಾವು ನಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನ ಕೊಡಲೇಬೇಕು ಇಲ್ಲವಾದರೆ ಜೀವನ ಪರ್ಯಂತ ಅನಾರೋಗ್ಯಕ್ಕೆ ಒಳಗಾಗಬೇಕಾಗುತ್ತದೆ.
ಹೀಗೆ ಆರೋಗ್ಯವಂತರಾಗಿ ಜೀವಿಸಲು ಮೊಟ್ಟಮೊದಲನೆಯದಾಗಿ ಗಮನವಹಿಸಬೇಕಾಗಿದ್ದು ಆರೋಗ್ಯಕರವಾಗಿರುವಂತಹ ಆಹಾರ ಸೇವನೆಯ ಬಗ್ಗೆ. ಅದರಲ್ಲೂ ಬಹುತೇಕರು ಪ್ರತಿದಿನವೂ ಕಾಫಿ ಅಥವಾ ಟೀ ಸೇವನೆ ಮಾಡಿ ಮಾಡುತ್ತಾರೆ ಹಾಗೆ ನೀವು ಕಾಫಿ ಸೇವನೆ ಮಾಡುವುದಾದರೆ ತಾಳೆ ಬೆಲ್ಲದ ಕಾಫಿ ಆರೋಗ್ಯದ ದೃಷ್ಟಿಯಿಂದ ಬೆಸ್ಟ್ ಆಯ್ಕೆ ಎನಿಸಿಕೊಳ್ಳುತ್ತದೆ. ಹಾಗಾದ್ರೆ ತಾಳೆ ಬೆಲ್ಲದ ಕಾಫಿ ಕುಡಿಯುವುದರಿಂದ ಏನೆಲ್ಲಾ ಆರೋಗ್ಯಕರ ಪ್ರಯೋಜನಗಳಿವೆ ನೋಡೋಣ.
ತೆಂಗಿನೆಣ್ಣೆ ಕಾಫಿ:
ಹಲವರಿಗೆ ಬೆಳಗಿನ ಆರಂಭ ಆಗುವುದೇ ಒಂದು ಕಪ್ ಕಾಫಿ ಕುಡಿದಾಗಿನಿಂದ. ಸಾಕಷ್ಟು ಜನರಿಗೆ ಕಾಫಿಯನ್ನು ದಿನಚರಿಯಲ್ಲಿ ಸೇರಿಸುವುದು ಅವಿಭಾಜ್ಯ ಅಂಗ ಎನಿಸಿಬಿಟ್ಟಿದೆ. ನಾವು ಉತ್ತಮ ರುಚಿ ಹಾಗೂ ಪೌಷ್ಟಿಕಾಂಶ ಹೊಂದಿರುವಂತಹ ಪಾನೀಯ ಕುಡಿಯುವುದು ಬಹಳ ಮುಖ್ಯ. ಹಾಗಾಗಿ ಹಳೆಯ ಕೆಲವು ಪದ್ಧತಿಗಳನ್ನು ಅನುಸರಿಸಿದರೆ ಒಳ್ಳೆಯದು ವಿಟಮಿನ್ ಬಿ ಅಂಶ ಹೇರಳವಾಗಿರುವ ಜೀರ್ಣಾಂಗ ವ್ಯವಸ್ಥೆಯನ್ನು ಧನಾತ್ಮಕವಾಗಿ ಹಾಗೂ ಪರಿಣಾಮಕಾರಿಯಾಗಿ ಸರಿಪಡಿಸುವ ಔಷಧೀಯ ಮೌಲ್ಯ ಹೊಂದಿರುವ ಖರ್ಜೂರ ಬೆಲ್ಲದ ಕಾಫಿ ಕುಡಿಯುವುದು ಒಳ್ಳೆಯದು ಇದಕ್ಕೆ ತೆಂಗಿನ ಎಣ್ಣೆ ಹನಿ ಮಿಶ್ರಣ ಮಾಡಿ ಕುಡಿಯುತ್ತಾರೆ.
ಸಂಸ್ಕರಿಸಿದ ಸಕ್ಕರೆಯನ್ನು ಸೇವಿಸಬೇಡಿ
ಇತ್ತೀಚಿನ ದಿನಗಳಲ್ಲಿ ಸಂಸ್ಕರಿಸಿದ ಸಕ್ಕರೆ ಸೇವಿಸುವುದು ಆರೋಗ್ಯದ ಮೇಲೆ ಎಂತಹ ಕೆಟ್ಟ ಪರಿಣಾಮ ಬೀರುತ್ತದೆ ಎನ್ನುವುದು ಎಲ್ಲರಿಗೂ ಗೊತ್ತು. ಹಾಗಾಗಿ ದಿನನಿತ್ಯದ ಆಹಾರ ಪದಾರ್ಥಗಳಲ್ಲಿ ಸಕ್ಕರೆ ಸೇವೆಯನ್ನು ಮಿತ್ರಗೊಳಿಸಬೇಕು. ಆರೋಗ್ಯ ತಜ್ಞರ ಪ್ರಕಾರ ತಾಳೆ ಬೆಲ್ಲದೊಂದಿಗೆ ಕಾಫಿ ಸೇವಿಸುವುದರಿಂದ ಸಂಸ್ಕರಿಸಿದ ಸಕ್ಕರೆಗೆ ಗುಡ್ ಬೈ ಹೇಳಬಹುದು. ಈ ಕಾಫಿ ಸೇವನೆಯಿಂದ ಶೀತ ಕೆಮ್ಮು ಮೊದಲಾದ ಸಣ್ಣಪುಟ್ಟ ಸಮಸ್ಯೆಗಳು ಕೂಡ ನಿವಾರಣೆಯಾಗುತ್ತವೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕೂಡ ಹೆಚ್ಚಾಗುತ್ತೆ. ಖರ್ಜೂರ ಬೆಲ್ಲದ ಕಾಫಿ ಆರೋಗ್ಯಕ್ಕೆ ಒಂದು ವರದಾನವಾಗಿದೆ ಎಂದೇ ಹೇಳಬಹುದು ಹಾಗಾಗಿ ಇದನ್ನ ಜೀವನಶೈಲಿಯಲ್ಲಿ ರೂಡಿಸಿಕೊಳ್ಳುವುದು ಬಹಳ ಮುಖ್ಯ.
ನೈಸರ್ಗಿಕ ಚಿಕಿತ್ಸೆ
ಖಜೂರದಲ್ಲಿ ಪೋಷಕಾಂಶಗಳು ಸಮೃದ್ಧವಾಗಿರುತ್ತವೆ ಅದರ ಜೊತೆಗೆ ಬೆಲ್ಲ ಸೇವನೆ ನಮ್ಮ ತ್ವಚೆಯ ಆರೋಗ್ಯಕ್ಕೂ ಕೂಡ ಬಹಳ ಒಳ್ಳೆಯದು ಮುಖದಲ್ಲಿ ಆಗುವಂತಹ ಮೊಡವೆ, ಕಪ್ಪು ಕಲೆ, ಚರ್ಮದ ಮೇಲೆ ಸುಕ್ಕುಗಟ್ಟುವುದು, ಕಣ್ಣಿನ ಸುತ್ತ ಬರುವ ಡಾರ್ಕ್ ಸರ್ಕಲ್, ಬೇಗ ವಯಸ್ಸಾದಂತೆ ಕಾಣಿಸುವುದು ಈ ಎಲ್ಲಾ ಸಮಸ್ಯೆಗಳಿಗೆ ಸೂಕ್ತವಾದ ಪರಿಹಾರ ಎಂದರೆ ಖರ್ಜೂರ ಬೆಲ್ಲದ ಕಾಫಿ ಎನ್ನಬಹುದು.
ಮೈಗ್ರೇನ್ ತಲೆನೋವು
ಇದು ಸಾಕಷ್ಟು ಜನರಲ್ಲಿ ಕಾಡುವ ಸಮಸ್ಯೆಗಳಲ್ಲಿ ಮೈಗ್ರೇನ್ ಕೂಡ ಒಂದು ಇದು ಸಹಜವಾದ ತಲೆನೋವು ಅಲ್ಲ ಒಂದು ವೇಳೆ ಮೈಗ್ರೇನ್ ಬಂದರೆ ಒಂದು ದಿನ ಅಥವಾ ಎರಡು ಮೂರು ದಿನಗಳ ಕಾಲ ನಿರಂತರವಾಗಿ ತೊಂದರೆ ಕೊಡುತ್ತಲೇ ಇರುತ್ತದೆ. ಅದರಲ್ಲೂ ವಿಶೇಷವಾಗಿ ಮಹಿಳೆಯರಲ್ಲಿ ಎಂಡಾಫ್ರೀನ್ ಗಳನ್ನು ಬಿಡುಗಡೆ ಮಾಡುವ ಮೂಲಕ ಮುಟ್ಟಿನ ನೋವಿನ ಜೊತೆಗೆ ಮೈಗ್ರೇನ್ ತಲೆ ನೋವು ಕೂಡ ಆರಂಭವಾಗುತ್ತದೆ. ಇಂತಹ ಸಮಯದಲ್ಲಿ ಸೇವಿಸುವ ಖರ್ಜೂರ ಬೆಲ್ಲದ ಕಾಫಿ ಉತ್ತಮ ಸಿಹಿಕಾರಕ ಆಗಿರುವುದು ಮಾತ್ರವಲ್ಲದೆ ದೇಹದ ಸಾಕಷ್ಟು ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ.
ಪೌಷ್ಟಿಕಾಂಶಗಳ ಆಗರ
ತಾಳೆ ಬೆಲ್ಲ ಅತಿ ಹೆಚ್ಚಿನ ಖನಿಜ ವಿಟಮಿನ್ ಬಿ ಮೊದಲದ ಪೋಷಕಾಂಶಗಳನ್ನು ಹೊಂದಿದೆ. ಇದರಲ್ಲಿ ಗ್ಲೈಸಮಿಕ್ ಇಂಡೆಕ್ಸ್ ಕಡಿಮೆ ಪ್ರಮಾಣದಲ್ಲಿ ಇರುವುದರಿಂದ ಮಧುಮೇಹಿಗಳಿಗೂ ಕೂಡ ಒಳ್ಳೆಯದು. ಬೆಲ್ಲದಲ್ಲಿ ಇರುವ ಕಬ್ಬಿಣದ ಅಂಶ ದೇಹದಲ್ಲಿ ರಕ್ತದ ಹಿಮೋಗ್ಲೋಬಿನ್ ಹೆಚ್ಚಾಗಲು ಕೂಡ ಸಹಾಯ ಮಾಡುತ್ತದೆ ಹೀಗಾಗಿ ರಕ್ತ ಹೀನತೆ, ಕೂದಲು ಉದುರುವಿಕೆ ಇಂತಹ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸುತ್ತದೆ. ಖರ್ಜೂರದಲ್ಲಿ ಮೆಗ್ನೀಷಿಯಂ ಅಂಶವು ಕೂಡ ಅಧಿಕವಾಗಿರುವುದರಿಂದ ಇದು ನಮ್ಮ ದೇಹದ ನರಮಂಡಲವನ್ನು ಸಂರಕ್ಷಿಸುತ್ತದೆ.
ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ
ಬೆಳಿಗ್ಗೆ ಇದ್ದಾಗ ದೇಹದಲ್ಲಿ ಒಂದಷ್ಟು ಎನರ್ಜಿ ಬೇಕು ಎನ್ನುವ ಕಾರಣಕ್ಕೆ ಸಾಕಷ್ಟು ಜನ ಕಾಫಿ ಕುಡಿಯುತ್ತಾರೆ. ಆದರೆ ನೀವು ತಾಳೆ ಬೆಲ್ಲದ ಕಾಫಿ ಕುಡಿಯುವುದನ್ನು ರೂಢಿ ಮಾಡಿಕೊಂಡರೆ ದೇಹಕ್ಕೆ ಎನರ್ಜಿ ಕೊಡುವುದು ಮಾತ್ರವಲ್ಲದೆ ಇದರಲ್ಲಿರುವ ಮೆಗ್ನೀಷಿಯಂ, ಪೊಟ್ಯಾಸಿಯಂ, ಕ್ಯಾಲ್ಸಿಯಂ ಮೊದಲಾದ ಜೀವಸತ್ವಗಳು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ ಜೊತೆಗೆ ಮೂಳೆಗಳು ಕೂಡ ಬಲಗೊಳ್ಳುತ್ತವೆ. ಇದರಲ್ಲಿರುವ ಕಾರ್ಬೋಹೈಡ್ರೇಟ್ ಅಂಶ ದೇಹಕ್ಕೆ ಶಕ್ತಿಯನ್ನು ನೀಡುತ್ತದೆ ಇದು ಬಿಳಿ ಸಕ್ಕರೆಗಿಂತ ಅಥವಾ ಸಂಸ್ಕರಿಸಿದ ಸಕ್ಕರೆಗಿಂತ ಬೇಗ ಜೀರ್ಣಿಸಿಕೊಳ್ಳಲು ಸಹಾಯಕ. ಹಾಗಾಗಿ ದಿನವಿಡಿ ಎನರ್ಜೆಟಿಕ್ ಆಗಿರಲು ಖರ್ಜೂರ ಬೆಲ್ಲದ ಕಾಫಿ ಅತ್ಯುತ್ತಮ ಆಯ್ಕೆ ಎನಿಸಿಕೊಳ್ಳುತ್ತದೆ.
ತೂಕ ಇಳಿಕೆಗೆ ಸಹಾಯಕಾರಿ
ಖರ್ಜೂರ ಬೆಲ್ಲದಲ್ಲಿ ಇರುವ ಪೊಟ್ಯಾಶಿಯಂ ಅಂಶ ದೇಹದ ತೂಕವನ್ನು ಸಮತೋಲನದಲ್ಲಿ ಇಟ್ಟುಕೊಳ್ಳಲು ಹಾಗೂ ತೂಕ ಕಡಿಮೆ ಮಾಡಿಕೊಳ್ಳಲು ಕೂಡ ಸಹಾಯಕವಾಗಿದೆ. ದೇಹದಲ್ಲಿ ಪೊಟ್ಯಾಶಿಯಂ ಅಂಶ ಕಡಿಮೆಯಾದಾಗ ದೇಹ ಉಬ್ಬಿದ ಅನುಭವ ಆಗುತ್ತದೆ ಆದರೆ ಖರ್ಜೂರ ಬೆಲ್ಲದಲ್ಲಿ ಇರುವ ಪೊಟ್ಯಾಶಿಯಂ ಅಂಶ ಈ ಎಲ್ಲಾ ಸಮಸ್ಯೆಗೆ ಮುಕ್ತಿ ನೀಡಿ ದೇಹದ ತೂಕವನ್ನು ನಿಯಂತ್ರಣದಲ್ಲಿ ಇಡುತ್ತದೆ.
ಶೀತ ಕೆಮ್ಮು ಹತ್ತಿರ ಬರುವುದಿಲ್ಲ ನೋಡಿ
ಚಳಿಗಾಲ ಇರಬಹುದು ಅಥವಾ ಮಾನ್ಸೂನ್ ಇರಬಹುದು ಈ ಸಂದರ್ಭದಲ್ಲಿ ಮಕ್ಕಳಿಂದ ಹಿಡಿದು ವಯಸ್ಸಾದವರ ವರೆಗೆ ಶೀತ ಕೆಮ್ಮು ಅಥವಾ ವೈರಲ್ ಫೀವರ್ ಬರೋದು ಸಹಜ. ನೀವು ತಾಳೆ ಬೆಲ್ಲದ ಕಾಫಿ ಕುಡಿದರೆ ಕೆಮ್ಮು, ಶೀತ ಎಲ್ಲವೂ ಉಪಶಮನವಾಗುತ್ತದೆ. ಜೊತೆಗೆ ದೇಹವನ್ನು ಬೆಚ್ಚಿಗೆಡುವುದರಿಂದ ಜ್ವರವು ಕೂಡ ನಿಮ್ಮತ್ತ ಸುಳಿಯುವುದಿಲ್ಲ. ಅಷ್ಟೇ ಅಲ್ಲ ಅಸ್ತಮಾ ರೋಗಿಗಳಿಗೂ ಕೂಡ ಇದು ಅತ್ಯುತ್ತಮ ಮನೆ ಮದ್ದು.
ಸಂಸ್ಕರಿಸಿದ ಸಕ್ಕರೆಗೆ ಪರ್ಯಾಯ
ತಾಳೆ ಬೆಲ್ಲ ಸೇವನೆ ಬಿಳಿ ಸಕ್ಕರೆ ಅಥವಾ ಸಂಸ್ಕರಿಸಿದ ಸಕ್ಕರೆಗೆ ಪರ್ಯಾಯವಾಗಿದೆ ಸುಲಭ ಜೊತೆಗೆ ದೇಹದ ವ್ಯವಸ್ಥೆಯನ್ನು ಶುದ್ಧೀಕರಿಸಲು ಇದು ಸಹಾಯ ಮಾಡುತ್ತದೆ. ನಮ್ಮ ದೇಹದಲ್ಲಿ ಇರುವ ವಿಷಕಾರಕ ಅಂಶಗಳನ್ನು ಕೂಡ ತೆಗೆದುಹಾಕುವ ಶಕ್ತಿ ಖಜೂರ ಬೆಲ್ಲದ ಕಾಫಿಗೆ ಇದೆ. ಹಾಗಾಗಿ ನೀವು ದಿನವೂ ಕಾಫಿ ಕುಡಿಯುವ ಅಭ್ಯಾಸವಿದ್ದರೆ ಅದನ್ನು ಖರ್ಜೂರ ಬೆಲ್ಲದ ಕಾಫಿಗೆ ಬದಲಾಯಿಸಿಕೊಳ್ಳಿ. ಆರೋಗ್ಯವಾಗಿರಿ.