ಕಾಸರಗೋಡು: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಾಸರಗೋಡು ಜಿಲ್ಲಾ ಕಛೇರಿಯಲ್ಲಿರುವ ವೀಡಿಯೋ ಸ್ಟ್ರಿಂಗರ್ಸ್ ಪ್ಯಾನೆಲ್‍ನಲ್ಲಿ ಖಾಲಿ ಇರುವ ಎರಡು ವಿಡಿಯೋ ಸ್ಟ್ರಿಂಗರ್‍ಗಳ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಪ್ರೀಡಿಗ್ರಿ ಯಾ ಪ್ಲಸ್ ಟು ವಿದ್ಯಾರ್ಹತೆಯಾಗಿದ್ದು, ಕಾಸರಗೋಡು ಜಿಲ್ಲೆಯ ಖಾಯಂ ನಿವಾಸಿಯಾಗಿರಬೇಕು. ದೃಶ್ಯ ಮಾಧ್ಯಮದಲ್ಲಿ ಕನಿಷ್ಠ ಒಂದು ವರ್ಷ ಕೆಲಸದ ಅನುಭವ, ನ್ಯೂಸ್ ಕ್ಲಿಪುಗಳನ್ನು ಶೂಟ್ ಮಾಡುವುದರ ಜತೆಗೆ ಎಡಿಟ್ ಮಾಡಿ ವಾಯ್ಸ್ ಕೊಟ್ಟು ನ್ಯೂಸ್ ಸ್ಟೋರಿಯಾಗಿ ಪ್ರಸ್ತುತಪಡಿಸುವಲ್ಲಿ ಕನಿಷ್ಠ ಒಂದು ವರ್ಷದ ಅನುಭವ ಹೊಂದಿರಬೇಕು. ಪಿ.ಆರ್.ಡಿ ಯಲ್ಲಿ ಕೆಲಸದ ಪರಿಚಯ ಇರುವವರಿಗೂ ಎಲೆಕ್ಟ್ರಾನಿಕ್ ವಾರ್ತಾಮಾಧ್ಯಮದಲ್ಲಿ ವೀಡಿಯೋಗ್ರಫಿ ಯಾ ವೀಡಿಯೋ ಎಡಿಟಿಂಗ್‍ನಲ್ಲಿ ಅನುಭವ ಇರುವವರಿಗೆ ಆದ್ಯತೆ ಕಲ್ಪಿಸಲಾಗಿದೆ. ಸ್ವಂತವಾಗಿ ಫುಲ್ ಎಚ್.ಡಿ ಪೆÇ್ರಫೆಷನಲ್ ಕ್ಯಾಮರಾ ಮತ್ತು ದೃಶ್ಯ ವೇಗಕ್ಕಾಗಿ ಸುಧಾರಿತ ಪರಿಕರಗಳನ್ನು ಹೊಂದಿರಬೇಕು ವಿಶ್ವಲ್ ವೇಗದಲ್ಲಿ ಎಡಿಟ್ ಮಾಡಲು ತಾಂತ್ರಿಕ ಜ್ಞಾನ, ಪೆÇ್ರಫೆಷನಲ್ ಎಡಿಟ್ ಸಾಫ್ಟ್‍ವೇರ್ ಇನ್ಸ್ಟಾಲ್ ಮಾಡಿದ ಸ್ವಂತ ಲ್ಯಾಪ್‍ಟಾಪ್, ಫೆÇೀನ್ ಮತ್ತು ಇಂಟರ್ನೆಟ್ ಸೌಲಭ್ಯ ಹಾಗೂ ಸ್ವಂತ ಡ್ರೈವಿಂಗ್ ಲೈಸೆನ್ಸ್ ಹೊಂದಿರಬೇಕು. ಸ್ವಂತವಾಗಿ ವಾಹನದಲ್ಲಿ ಸಂಚರಿಸಿ ಕವರೇಜ್ ಮಾಡಬೇಕು. ವಿವರವಾದ ಬಯೋ ಡಾಟಾ ಮತ್ತು ಸಂಬಂಧಿತ ದಾಖಲೆಗಳ ಪ್ರತಿಗಳನ್ನು ಒಳಗೊಂಡ ಅರ್ಜಿಯನ್ನು ಕಾಸರಗೋಡು ವಿದ್ಯಾನಗರದ ಸಿವಿಲ್ ಸ್ಟೇಷನ್‍ನ ಜಿಲ್ಲಾಧಿಕಾರಿ ಕಚೇರಿ ಸನಿಹದ ಜಿಲ್ಲಾ ಇನ್‍ಫಾರ್ಮೇನ್ ಕಚೇರಿಯಲ್ಲಿ 2023 ಆಗಸ್ಟ್ 5ರ ಮುಮಚಿತವಾಗಿ ಅರ್ಜಿ ಸಲ್ಲಿಸಬೇಕು.
ಸಂದರ್ಶನ, ಪ್ರಮಾಣಪತ್ರ ಪರೀಕ್ಷೆ, ಸಲಕರಣೆಗಳ ಪರೀಕ್ಷೆ ಮತ್ತು ಪ್ರಾಯೋಗಿಕ ಪರೀಕ್ಷೆ ಆಗಸ್ಟ್ 10ರಂದು ಬೆಳಗ್ಗೆ 11 ಗಂಟೆಗೆ ನಡೆಯಲಿದೆ. ಪ್ಯಾನಲ್ ಗೆ ಆಯ್ಕೆಯಾದ ವೀಡಿಯೊ ಸ್ಟ್ರಿಂಗರ್‍ಗಳು ಜಿಲ್ಲಾ ಇನ್ಫರ್ಮೇಷನ್ ಅಧಿಕಾರಿಯೊಂದಿಗೆ ಒಂದು ವರ್ಷದ ಒಪ್ಪಂದಕ್ಕೆ ಸಹಿ ಹಾಕಬೇಕು. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕಾಸರಗೋಡು ಜಿಲ್ಲಾ ಇನ್ಫರ್ಮೇಷನ್ ಕಛೇರಿ ದೂರವಾಣಿ ಸಂಖ್ಯೆ(04994 255145)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.