ಕಾಸರಗೋಡು: ಕೇರಳ ರಸ್ತೆ ಸಾರಿಗೆ ನಿಗಮದ ಕೊರಿಯರ್ ಪಾರ್ಸೆಲ್ ಸೇವೆಗಳನ್ನು ಆರಂಬಿಸಲಾಗಿದ್ದು, ಕೆಎಸ್ಸಾರ್ಟಿಸಿ ಕೊರಿಯರ್ ಸೇವೆಗಳ ಮೂಲಕ ಕೇರಳದಲ್ಲಿ ಕಡಿಮೆ ವೆಚ್ಚದಲ್ಲಿ ಪಾರ್ಸೆಲ್‍ಗಳನ್ನು ತ್ವರಿತವಾಗಿ ನಿಗದಿತ ಸ್ಥಳಗಳಿಗೆ ತಲುಪಿಸುವ ವ್ಯವಸ್ಥೆ ಲಭ್ಯವಗಲಿದೆ.
ಜಿಲ್ಲಾ ಕೇಂದ್ರ ಹಾಗೂ ಪ್ರಮುಖ ಡಿಪೆÇೀಗಳಲ್ಲಿ ಈ ಸೇವೆ ಲಭ್ಯವಾಗಲಿದೆ. ಕೊರಿಯರ್ ಕೌಂಟರ್‍ಗಳು ದಿನದ 24 ತಾಸು ತೆರೆದಿರಲಿದೆ. ಕೊರಿಯರ್‍ಗಳು ಮತ್ತು ಪಾರ್ಸೆಲ್‍ಗಳನ್ನು ಕೇರಳದ ಯಾವುದೇ ಪ್ರದೇಶಕ್ಕೆ 16 ಗಂಟೆಗಳ ಒಳಗೆ ತಲುಪಿಸುವ ವ್ಯವಸ್ಥೆ ಇದಾಗಿದೆ. ಕೊರಿಯರ್ ಮತ್ತು ಪಾರ್ಸೆಲ್‍ಗಳನ್ನು ಸಊಕ್ತ ರೀತಿಯಲ್ಲಿ ಪ್ಯಾಕ್ ಮಡಿಮ ಸಾಕಷ್ಟು ಗುರುತಿನ ಚೀಟಿಯೊಂದಿಗೆ ಡಿಪೆÇೀ ತಲುಪಿಸುವ ಮೂಲಕ ಸೇವೆಯ ಸದುಪಯೋಗ ಪಡೆದುಕೊಳ್ಳಬಹುದಾಘಿದೆ. ಬೆಂಗಳೂರು, ಮೈಸೂರು, ಕೊಯಮತ್ತೂರು, ತೆಂಕಶಿ, ನಾಗರಕೋಯಿಲ್ ಮುಂತಾದ ಸ್ಥಳಗಳಲ್ಲಿಯೂ ಈ ಸೇವೆ ಲಭ್ಯವಿದೆ. ಸಾರ್ವಜನಿಕ ವಲಯದ ಸಂಸ್ಥೆಗಳು ಮತ್ತು ಖಾಸಗಿ ಉದ್ಯಮಿಗಳು ಸೇವೆಯನ್ನು ಬಳಸಿಕೊಳ್ಳಬಹುದು ಎಂದು ಕೆಎಸ್ಸರ್ಟಿಸಿ ಪ್ರಕಟಣೆ ತಿಳಿಸಿದೆ.