ಕಾಸರಗೋಡು: ಪರಿಶಿಷ್ಟ ಪಂಗಡದಿಂದ ಹೆಚ್ಚಿನ ಯುವಕರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಜಿಲ್ಲಾಡಳಿತದ ಕಾರ್ಯಚಟುವಟಿಕೆಗಳ ಅಂಗವಾಗಿ ಇಲಾಖೆಯಲ್ಲಿನ ಉದ್ಯೋಗಾವಕಾಶಗಳ ಬಗ್ಗೆ ಮತ್ತು ಯೋಜನೆಗಳ ಬಗ್ಗೆ ಮಾಹಿತಿ ವಿನಿಮಯಕ್ಕಾಗಿ ತಾತ್ಕಾಲಿಕವಾಗಿ ಕನ್ನಡ ಭಾಷಾಂತರಕಾರರನ್ನು ನೇಮಿಸಲಾಗುತ್ತಿದೆ.
ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು ಸಂದರ್ಶನಕ್ಕೆ ಹಾಜರಾಗಬಹುದು. ಪದವಿಯೊಂದಿಗೆ ಮಲಯಾಳದಿಂದ ಕನ್ನಡಕ್ಕೆ ಭಾಷಂತರಿಸುವ ಬಗ್ಗೆ ಜ್ಞಾನ ಹೊಂದಿರಬೇಕು. ಪತ್ರಿಕೋದ್ಯಮ ಅನುಭವಕ್ಕೆ ಆದ್ಯತೆ ಕಲ್ಪಿಸಲಾಗಿದ್ದು, ವಯಸ್ಸಿನ ಮಿತಿ 20 ರಿಂದ 45 ವರ್ಷಗಳಾಗಿದೆ. ನೇಮಕಾತಿ ಕಾಲಾವಧಿಯು 2023ರ ಜುಲೈ ತಿಂಗಳಿಂದ 2024ರ ಮಾರ್ಚ್ 31ರವರೆಗೆ ಇರಲಿದೆ. ಮಾಸಿಕ 10000 ಗೌರವಧನ ನೀಡಲಾಗುವುದು. ಒಂದು ಹುದ್ದೆ ಖಾಲಿಯಿದ್ದು, ಆಸಕ್ತ ಅಭ್ಯರ್ಥಿಗಳು ಬಿಳಿ ಕಾಗದದ ಮೇಲೆ ಸಿದ್ಧಪಡಿಸಿದ ಅರ್ಜಿಯ ಮೂಲ ಅರ್ಹತಾ ಪ್ರಮಾಣಪತ್ರ(ಕ್ಸೆರಾಕ್ಸ್ ಪ್ರತಿ ಹೊಮದಿರಬೇಕು), ಕೆಲಸದ ಅನುಭವವನ್ನು ತೋರಿಸುವ ಪ್ರಮಾಣಪತ್ರದೊಂದಿಗೆ ಜುಲೈ 5ರಂದು ಬೆಳಗ್ಗೆ 11ಕ್ಕೆ ಕಾಸರಗೋಡು ಜಿಲ್ಲಾ ಮಾಹಿತಿ ಕಛೇರಿಯಲ್ಲಿ ನಡೆಯುವ ಸಂದರ್ಶನಕ್ಕೆ ಹಾಜರಾಗಬಹುದಾಗಿದೆ. ಈ ಬಗ್ಗೆ ಮಾಹಿತಿಗಾಗಿ ದೂರವಾಣಿ ಸಂಖ್ಯೆ (04994 255466)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.