ಕಾಸರಗೋಡು: ಹಿರಿಯ ಸಹಕರಿ ಧುರೀಣ, ಮಾಜಿ ಶಾಸಕ ಪಿ.ರಾಘವನ್ ಅವರಿಗೆ ಕೇರಳ ವಿಧಾನಸಭೆ ಸಂತಪ ವ್ಯಕ್ತಪಡಿಸಿದ್ದು, ಸಂತಾಪ ಪತ್ರದ ಪ್ರತಿಯನ್ನು ರಾಘವನ್ ಕುಟುಮಬಕ್ಕೆ ಹಸ್ತಾಂತರಿಸಲಯಿತು.
ದಿ. ಪಿ. ರಾಘವನ್ ಅವರ ಮುನ್ನಾಡ್ ನಿವಾಸದಲ್ಲಿ ನಡೆದ ಸಮಾರಂಭದಲ್ಲಿ ಎಡಿಎಂ ಕೆ.ನವೀನ್‍ಬಾಬು ಪತ್ರವನ್ನು ಕುಟುಂಬಕ್ಕೆ ಹಸ್ತಾಂತರಿಸಿದರು. ಪಿ.ರಾಘವನ್ ಅವರ ಪತ್ನಿ ಎ.ಕಮಲಾ ಸಂತಾಪ ಪತ್ರ ಸ್ವೀಕರಿಸಿದರು. ಹುಸೂರು ಶಿರಸ್ತೇದಾರ್ ಆರ್.ರಾಜೇಶ್, ರಾಜಕೀಯ ಪಕ್ಷದ ಕಾರ್ಯಕರ್ತರು ಹಾಗೂ ಪಿ.ರಾಘವನ್ ಕುಟುಂಬಸ್ಥರು ಉಪಸ್ಥಿತರಿದ್ದರು.