ಕಾಸರಗೋಡು: ಜಿಲ್ಲೆಯಲ್ಲಿ ಮಾದಕ ವಸ್ತುಗಳ ಸಾಗಣೆ ಮತ್ತು ಮಾರಾಟ ತಡೆಯಲು ಕಠಿಣ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆದ ಮಾದಕ ದ್ರವ್ಯ ವಿರೋಧಿ ಸಮನ್ವಯ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಯಿತು. ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲೆಯ ಶಾಲಾ ವಠಾರದಲ್ಲಿ ಯಾವುದೇ ರೀತಿಯ ಡ್ರಗ್ಸ್ ಮಾಫಿಯಾ ಚಟುವಟಿಕೆ ನಡೆಸದಂತೆ ನಿಗಾ ತೀವ್ರಗೊಳಿಸಲಾಗುವುದು, ಇದಕ್ಕಾಘಿ ಜಿಲ್ಲೆಯಲ್ಲಿ ಮಾದಕ ವಸ್ತು ವಿರೋಧಿ ಚಟುವಟಿಕೆಗಳನ್ನು ಬಲಪಡಿಸಲಾಗುವುದು. ವಿದ್ಯಾಲಯಗಳಲ್ಲಿ ಇನ್ನು ಮುಂದೆ ಸ್ಟೇಶನರಿ ಆರಂಭಿಸುವಂತೆ ಜಿಲ್ಲಾಧಿಕಾರಿ ನಿರ್ದೇಶಿಸಿದ್ದಾರೆ.
ಅಂತಾರಾಜ್ಯ ಗಡಿಯಲ್ಲಿ, ಆರ್‍ಟಿಒ ಮತ್ತು ಜಿಎಸ್‍ಟಿ ವತಿಯಿಂದ ಅಳವಡಿಸಿರುವ ಕಣ್ಗಾವಲು ಕ್ಯಾಮೆರಾಗಳಲ್ಲಿನ ಮಾಹಿತಿಯನ್ನು ಪೆÇಲೀಸರು ಮತ್ತು ಅಬಕಾರಿ ಇಲಾಖೆಗೆ ರವಾನಿಸಲಾಗುತ್ತದೆ. ಗಡಿಯಲ್ಲಿ ವಾಹನ ತಪಾಸಣೆಯನ್ನು ಸುವ್ಯವಸ್ಥಿತಗೊಳಿಸಲು ಸೌಲಭ್ಯಗಳನ್ನು ಒದಗಿಸಲಾಗುವುದು. ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ತಪಾಸಣೆಗೆ ಅಗತ್ಯವಿರುವ ಚೆಕ್ ಪಾಯಿಂಟ್‍ಗಳ ಸ್ಥಳಗಳನ್ನು ಜಿಲ್ಲಾಧಿಕಾರಿಗಳು ಖುದ್ದಾಗಿ ಪರಿಶೀಲಿಸಿ ನಿರ್ಧರಿಸಲಿದ್ದಾರೆ. ಪೆÇಲೀಸರಿಗೆ ಸಿಕ್ಕಿರುವ ಮೊಬೈಲ್ ಲೊಕೇಶನ್‍ಗಳನ್ನು ಅಬಕಾರಿ ಇಲಾಖೆಗೂ ರವಾನಿಸಲಾಗುವುದು. ಜಿಲ್ಲೆಯಲ್ಲಿ ಇನ್ನಷ್ಟು ಡಿ ಅಡಿಕ್ಷನ್ ಸೆಂಟರ್ ಗಳನ್ನು ಆರಂಭಿಸಲು ಸರ್ಕಾರಕ್ಕೆ ಶಿಫಾರಸು ಮಾಡಲು ಸಭೆ ನಿರ್ಧರಿಸಿತು. ಅನುಮತಿ ದೊರೆತರೆ ಮುಳಿಯಾರ್ ಮತ್ತು ಮಂಗಲ್ಪಾಡಿಯಲ್ಲಿ ಮಾದಕ ವ್ಯಸನ ಮುಕ್ತಿ ಕೇಂದ್ರಗಳನ್ನು ಆರಂಭಿಸಲಾಗುವುದು. ಕರಾವಳಿಯಲ್ಲಿ, ಮೆಡಿಕಲ್ ಮತ್ತು ಪ್ರವಾಸಿ ಕೇಂದ್ರಗಳಲ್ಲಿ ತಪಾಸಣೆಯನ್ನು ಬಲಪಡಿಸಲು ಸಭೆ ತೀರ್ಮಾಣಿಸಿತು.
ಅಪರ ಜಿಲ್ಲಾಧಿಕಾರಿ ಸೂಫಿಯಾನ್ ಅಹಮದ್, ಅಬಕಾರಿ ಉಪ ಆಯುಕ್ತ ಪಿ.ಕೆ.ಜಯರಾಜ್, ನಾರ್ಕೋಟಿಕ್ ಸೆಲ್ ಡಿವೈಎಸ್ ಪಿ ಎಂ.ಎ.ಮ್ಯಾಥ್ಯೂ, ಜಿಲ್ಲಾ ಸಾಮಾಜಿಕನ್ಯಾಯಾಧಿಕಾರಿ ಆರ್ಯ ಪಿ ರಾಜ್, ಸಹಾಯಕ ಭವಿಷ್ಯ ನಿಧಿ ಅಧಿಕಾರಿ ಎ.ಅಜಿತಾ, ಡ್ರಗ್ಸ್ ಇನ್ಸ್‍ಪೆಕ್ಟರ್ ವಿ.ಬೇಬಿ, ಜಿಎಸ್‍ಟಿ ಉಪ ಆಯುಕ್ತ ಸಾಬು ಅರಣ್ಯ ವಿಭಾಗದ ಅರಣ್ಯಾಧಿಕಾರಿ ಲಕ್ಷ್ಮಣನ್, ಬಂದರು ಕಚೇರಿ ಪ್ರತಿನಿಧಿ ಅರುಣ್ ಆರ್ ಚಂದ್ರನ್, ಉಪ ಸಮೂಹ ಮಾಧ್ಯಮ ಅಧಿಕಾರಿ (ಆರೋಗ್ಯ ವಿಭಾಗ) ಎನ್.ಪಿ. ಪ್ರಶಾಂತ್ ಮತ್ತಿತರರು. ಭಾಗವಹಿಸಿದ್ದರು.