ಮಂಜೇಶ್ವರ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಬಾವಲಿಗುಳಿ ವರ್ಕಾಡಿ ಇದರ ಆಶ್ರಯದಲ್ಲಿ ನಡೆಯುವ 9ನೇ ವರ್ಷದ ಗಣೇಶೋತ್ಸವವನ್ನು ವಿಜೃಂಭಣೆಯಿಂದ ಜರಗಿಸಲು ಪೂರ್ವಭಾವಿ ಸಭೆ ಬಾವಲಿಗುಳಿಯಲ್ಲಿ ನಡೆಯಿತು. ಸಮಿತಿಯ ಗೌರವ್ಯಾಧ್ಯಕ್ಷ ಲಕ್ಷ್ಮೀನಾರಾಯಣ ಹೊಳ್ಳ ಮರಿಕಾಪು ಬೀಡು ಅಧ್ಯಕ್ಷತೆ ವಹಿಸಿ ಹಳ್ಳಿಗಳಿಂದ ಸುತ್ತುವರಿದ ಈ ಬಾವಲಿಗುಳಿ ಪ್ರದೇಶದಲ್ಲಿ ಜಾತ್ರೆಯ ಸೊಬಗನ್ನು ಪ್ರತ್ಯಕ್ಷ್ಷೀಕರಿಸಲು ಗಣೇಶೋತ್ಸವವನ್ನು ಮಾಡುವುದು ಶ್ರೇಷ್ಠವೇ ಸರಿ. ಕಳೆದ ಎಂಟು ವರ್ಷಗಳಲ್ಲಿ ಅದ್ದೂರಿಯಾಗಿ ನಡೆದ ಗಣೇಶೋತ್ಸವವು ಈ ಬಾರಿಯೂ ವೈಭವೋಪೇತವಾಗಿ ನಡೆಯಬೇಕು. ಈ ನಿಟ್ಟಿನಲ್ಲಿ ಯುವಕರ ಶ್ರಮ ಅವಶ್ಯಕವಾಗಿದೆ. ಸಂಘ-ಸಂಸ್ಥೆಗಳ ಯುವಕರು ಈ ಕಾರ್ಯದಲ್ಲಿ ಪಾಲ್ಗೊಂಡು ಗಣೇಶೋತ್ಸವವನ್ನು ಇನ್ನಷ್ಟು ವಿಜೃಂಭಣೆಯಿಂದ ನಡೆಸಲಿ ಎಂದು ಹೇಳಿದರು.
ವರ್ಕಾಡಿ ಸಂತೋಷ ತಂತ್ರಿ ದೀಪ ಬೆಳಗಿಸಿ ಅನುಗ್ರಹ ಮಾತುಗಳನ್ನಾಡಿದರು. ವೇದಿಕೆಯಲ್ಲಿ ಸಮಿತಿ ಅಧ್ಯಕ್ಷ ವಿಶ್ವನಾಥ ರೈ ಅಡ್ಕ, ಸಮಿತಿಯ ಸಲಹೆಗಾರರಾದ ಶಂಕರನಾರಾಯಣ ಹೊಳ್ಳ ಮರಿಕಾಪು ಬೀಡು, ಸಮಿತಿಯ ಸಂಚಾಲಕÀ ಹರೀಶ್ ಕನ್ನಿಗುಳಿ ಮುಂತಾದವರು ಉಪಸ್ಥಿತರಿದ್ದರು. ಸಮಿತಿಯ ಪದಾಧಿಕಾರಿಗಳ ಬದಲಾವಣೆ ಮಾಡದೆ ಗತ ವರ್ಷದ ಸಮಿತಿಯನ್ನೇ ಮುಂದುವರಿಸುವುದೆಂದು ಒಮ್ಮತದಿಂದ ತೀರ್ಮಾನಿಸಲಾಯಿತು. ಕೋಶಾಧಿಕಾರಿ ರವಿ ಮುಡಿಮಾರು ಸ್ವಾಗತಿಸಿ, ವಂದಿಸಿದರು.