ಉಪ್ಪಳ: ಮುಳಿಂಜ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಾಚನಾ ಮಾಸಾಚರಣೆಯ ಸಮಾರೋಪ ಸಮಾರಂಭ ಜರಗಿತು. ಮಂಗಲ್ಪಾಡಿ ಗ್ರಾಮ ಪಂಚಾಯತಿ ಸದಸ್ಯ ಅಬ್ದುಲ್ ರಹಿಮಾನ್ ಟಿ.ಎಂ.ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಪಂಚಾಯತಿ ಸದಸ್ಯ, ಪತ್ರಕರ್ತ, ಸಾಮಾಜಿಕ ನೇತಾರ ಹμರ್Áದ್ ವರ್ಕಾಡಿ ಉದ್ಘಾಟಿಸಿದರು. ನಿವೃತ್ತ ಮುಖ್ಯೋಪಾಧ್ಯಾಯ ವಸಂತ ಕುಮಾರ್ ಸಿ.ಕೆ ಮಾತನಾಡಿದರು. ಶಾಲಾ ಎಸ್.ಎಂ.ಸಿ.ಅಧ್ಯಕ್ಷ ಇಬ್ರಾಹಿಂ ಹನೀಫಿ, ಸಿ.ಆರ್.ಸಿ.ಸಿ ಬಿಜೀಸ್ ಕುಮಾರ್, ಬಿ.ಆರ್.ಸಿ ಸ್ಪೆಷಲ್ ಎಜುಕೇಟರ್ ಶ್ರೀವಿದ್ಯಾ ಶುಭಾಶಂಸನೆಗೈದರು.
ಈ ಸಂದರ್ಭದಲ್ಲಿ ವಿಶೇಷ ಚೇತನ ಹೊಂದಿದ ಮಗುವನ್ನು ಕೇಂದ್ರೀಕರಿಸಿ ಬಿಡುಗಡೆಯಾದ "ಅಮ್ಮ ಬರ್ಪೆರಾ..."? ಹಸ್ತ ಪ್ರತಿಯನ್ನು ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಹμರ್Áದ್ ವರ್ಕಾಡಿ ಬಿಡುಗಡೆಗೊಳಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.
ಮುಖ್ಯೋಪಾಧ್ಯಾಯಿನಿ ಚಿತ್ರಾವತಿ.ವೈ.ರಾವ್ ಸ್ವಾಗತಿಸಿ, ಅಧ್ಯಾಪಕ ರಿಯಾಸ್ ವಾಫಿ ವಂದಿಸಿದರು. ಇಸ್ಮಾಯಿಲ್ ಮೀಯಪದವು ಕಾರ್ಯಕ್ರಮ ನಿರೂಪಿಸಿದರು. ಅಧ್ಯಾಪಕ ಅಬ್ದುಲ್ ಬಶೀರ್, ಅಬ್ಬಾ, ಜಸೀಲ, ಧನ್ಯ, ಫಝೀನ ಸಹಕರಿಸಿದರು.