ಕೊಚ್ಚಿ: ತೂಕ ಇಳಿಸುವ ಭರವಸೆ ನೀಡಿ ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾದ ಮಹಿಳೆಯ ಸ್ಥಿತಿ ಗಂಭೀರವಾಗಿದೆ.
ತಿರುವನಂತಪುರಂ ಮೂಲದ ವರ್ಷಾ ಎಂಬವರು ಮೇ 19ರಂದು ಕೊಚ್ಚಿ ಕಾಲೂರಿನ ಮೆಡಿಗ್ಲೋ ಕ್ಲಿನಿಕ್‍ನಲ್ಲಿ ಹೆರಿಗೆಯ ನಂತರ ದೇಹದಲ್ಲಿ ಸಂಗ್ರಹವಾದ ಕೊಬ್ಬನ್ನು ತೆಗೆದುಹಾಕಲು ಚಿಕಿತ್ಸೆಗೆ ದಾಖಲಾಗಿದ್ದರು.
ಯುವತಿಗೆ ಮೊದಲು ಕೀ ಹೋಲ್ ಶಸ್ತ್ರಚಿಕಿತ್ಸೆ ಮಾಡಲಾಯಿತು. ಆದರೆ ಶಸ್ತ್ರಚಿಕಿತ್ಸೆ ವಿಫಲವಾಯಿತು. ಆ ಬಳಿಕ ಜೂನ್ 11ರಂದು ಹೊಟ್ಟೆಯ ಶಸ್ತ್ರಚಿಕಿತ್ಸೆ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ ಆ ಶಸ್ತ್ರಚಿಕಿತ್ಸೆಯೂ ವಿಫಲವಾಯಿತು. ದೇಹದ ಬೊಜ್ಜು ಮಾತ್ರ ಬದಲಾಗಲಿಲ್ಲ, ಸೋಂಕಿನಿಂದ ವರ್ಷಾ ಅವರ ಜೀವಕ್ಕೆ ಅಪಾಯಕ್ಕೀಡಾಯಿತು. ಎರಡನೇ ಬಾರಿ ಶಸ್ತ್ರಚಿಕಿತ್ಸೆ ವಿಫಲವಾದಾಗ ಮಹಿಳೆ ಮತ್ತು ಆಕೆಯ ಕುಟುಂಬ ತಾವು ಮೋಸ ಹೋಗಿದ್ದೇವೆ ಎಂದು ಅರಿತುಕೊಂಡರು. ಜೂನ್ 18 ರಂದು ಮಹಿಳೆ ತೀವ್ರವಾಗಿ ಗಂಭೀರವಾಗಿದ್ದರಿಂದ ಎರ್ನಾಕುಳಂನಮತ್ತೊಂದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಸದ್ಯ ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ವರ್ಷಾ ಅವರ ತಾಯಿ ಸರಿತಾ ಕಡವಂತರ ಪೋಲೀಸರಿಗೆ ದೂರು ನೀಡಿದ್ದಾರೆ. ಮಗಳಿಗೆ ಅರಿವಳಿಕೆ ಇಲ್ಲದೆ ಆಪರೇಷನ್ ಮಾಡಲಾಗಿದೆ ಎಂದು ತಾಯಿ ಆರೋಪಿಸಿದ್ದಾರೆ. ದೂರಿನಲ್ಲಿ ಆರೋಪಿಯಾಗಿರುವ ಡಾ.ಸಂಜು ಸಂಜೀವ್ ಅವರನ್ನು ಸಂಪರ್ಕಿಸಿದರೂ ಪ್ರತಿಕ್ರಿಯಿಸಲು ನಿರಾಕರಿಸಿದರು. ದೂರಿನ ಬಗ್ಗೆ ತನಿಖೆ ನಡೆಸಲಾಗುತ್ತಿದ್ದು, ಇದು ವೈದ್ಯರ ವಿರುದ್ಧದ ಮೊದಲ ದೂರು ಎಂದು ಪೋಲೀಸರು ತಿಳಿಸಿದ್ದಾರೆ.