ಕಾಸರಗೋಡು: ರಂಗಚಿನ್ನಾರಿ ಕಾಸರಗೋಡು, ಕನನಡ ಮತ್ತು ಸಂಸ್ಕøತಿ ಇಲಾಖೆ ಬೆಂಗಳೂರು ಸಹಯೋಗದೊಂದಿಗೆ ಚಿತ್ರನಟ ಕಾಸರಗೋಡು ಚಿನ್ನಾ ನಿರ್ದೇಶನದಲ್ಲಿ ರಂಗ ರಸಗ್ರಾಹಿ ಶಿಬಿರ ಜುಲೈ 8 ಮತ್ತು 9ರಂದು ಬೈಲಹೊಂಗಲ ಶ್ರೀ ಅಕ್ಕಮಹಾದೇವಿ ವಿಮೆನ್ಸ್ ಆಟ್ರ್ಸ್ ಮತ್ತು ಕಾಮರ್ಸ್ ಪದವಿ ಕಾಲೇಜು ಸಭಾಂಗಣದಲ್ಲಿ ಜರುಗಲಿದೆ. ಬೈಲಹೊಂಗಲ ಬೇವಿನಕೊಪ್ಪ ಶ್ರೀ ವಿಜಯಾನಂದ ಸ್ವಾಮೀಜಿ ಅವರ ಸಹಕಾರದೊಂದಿಗೆ ಕಾರ್ಯಕ್ರಮ ಜರುಗಲಿದೆ. ಎರಡು ದಿವಸಗಳ ಕಾಲ ನಡೆಯಲಿರುವ ಶಿಬಿರದಲ್ಲಿ ರಂಗಭೂಮಿ ಬಗ್ಗೆ ಕಾಸರಗೋಡು ಚಿನ್ನಾ ತರಗತಿ ನಡೆಸಲಿದ್ದರೆ.