ಕುಂಬಳೆ: ಮರ ಮಗುಚಿಬಿದ್ದು ದಾರುಣವಗಿ ಮೃತಪಟ್ಟ ಅಂಗಡಿಮೊಗರು ಸರ್ಕಾರಿ ಹೈಯರ್ ಸಎಕೆಂಡರಿ ಶಾಲಾ ವಿದ್ಯಾರ್ಥಿನಿ ಫಾತಿಮತ್ ಮಿನ್‍ಹಾ(11)ಮೃತದೇಹ ನೂರಾರು ಮಂದಿಯ ಉಪಸ್ಥಿತಿಯಲ್ಲಿ ಅಂಗಡಿಮೊಗರು ಪೆರ್ಲಡಂ ಜುಮಾ ಮಸೀದಿ ವಠಾರದಲ್ಲಿ ಅಂತ್ಯಸಂಸ್ಕಾರ ನಡೆಸಲಕಾಯಿತು. ತರಗತಿಯಲ್ಲಿ ಅತ್ಯಂತ ಲವಲವಿಕೆಯಿಂದ ಇದ್ದ ಬಾಲಕಿ ಸೋಮವಾರ ಸಂಜೆ ಶಾಲೆಬಿಟ್ಟು ಮನೆಗೆ ಹೊರಡುವ ಮಧ್ಯೆ ಶಾಲೆ ಸನಿಹದ ಬೃಹತ್ ಮರ ಬುಡಸಹಿತ ಮಗುಚಿಬಿದ್ದ ಪರಿಣಾಮ ಮೃತಪಟ್ಟಿದ್ದಳು.
ಬಾಲಕಿ ಮೃತಪಟ್ಟ ಘಟನೆಗೆ ಸಂಬಂಧಿಸಿ ರಾಜ್ಯ ಮಕ್ಕಳ ಹಕ್ಕು ಆಯೋಗ ಸ್ವಯಂ ಪ್ರೆರಣೆಯಿಮದ ಕೇಸು ದಾಖಲಿಸಿಕೊಂಡಿದೆ. ಸಾವಿನ ಬಗ್ಗೆ ಸಮಗ್ರ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಆಯೋಗ ಸೂಚಿಸಿದೆ. ಇನ್ನೊಂದೆಡೆ ಸಾವಿನ ಬಗ್ಗೆ ಸಮಗ್ರ ವರದಿ ಸಲ್ಲಿಸುವಂತೆ ಶಿಕ್ಷಣ ಖಾತೆ ಸಚಿವ ವಿ.ಶಿವನ್ಕುಟ್ಟಿ ಆದೇಶಿಸಿದ್ದಾರೆ. ಬಾಲಕಿ ಸಾವಿನ ಹಿನ್ನೆಲೆಯಲ್ಲಿ ಸಚಿವ ಶಿವನ್‍ಕುಟ್ಟಿ ಬಾಲಕಿ ತಂದೆ ಕೆ.ಎಂ ಯೂಸುಫ್ ಅವರಿಗೆ ದೂರವಾಣಿ ಕರೆಮಾಡಿ ಸಾಂತ್ವನ ತಿಳಿಸಿದ್ದಾರೆ.