ಕಣ್ಣೂರು: ನಕ್ಸಲ್ ಭಯೋತ್ಪಾದಕರು ಕಣ್ಣೂರಿನ ಅಯ್ಯಂಕುನ್ನು ವಾಲತೋಡ್ ಪಟ್ಟಣದಲ್ಲಿ ಪ್ರತ್ಯಕ್ಷಗೊಂಡು ಮಾರ್ಚ್‍ಪಾಸ್ಟ್ ನಡೆಸಿರುವುದು ವರದಿಯಾಗಿದೆ. ಮಹಿಳೆ ಸೇರಿದಂತೆ ಐವರು ಸದಸ್ಯರ ಶಸ್ತ್ರಸಜ್ಜಿತ ತಂಡ ನಗರದಲ್ಲಿ ಅರ್ಧಗಂಟೆ ಮಾರ್ಚ್‍ಪಾಸ್ಟ್ ನಡೆಸಿ ಹಿಂತಿರುಗಿದರು ಎನ್ನಲಾಗಿದೆ.
ವಿಶ್ವಬ್ಯಾಂಕ್‍ನ ಸೂಚನೆಯಂತೆ ಪಡಿತರ ರದ್ದುಪಡಿಸುತ್ತಿರುವ ಮೋದಿ ಮತ್ತು ಪಿಣರಾಯಿ ಸರ್ಕಾರದ ವಿರುದ್ದ ಕರಪತ್ರವನ್ನೂ ಅವರು ಆಸುಪಾಸಿನಲ್ಲಿ ಹಂಚಿದ್ದಾರೆ. ಇದೇ ವೇಳೆ ಥಂಡರ್ ಬೋಲ್ಟ್ ಕೂಡ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದೆ. ಈ ಹಿಂದೆಯೂ ಶಸ್ತ್ರಸಜ್ಜಿತ ಮಾವೋವಾದಿ ಗುಂಪು ಇಲ್ಲಿಗೆ ಬಂದಿತ್ತು.
ಸೋಮವಾರ ಸಂಜೆ ನಕ್ಸಲ್ ತಂಡ ಬಂದೂಕು ಸಹಿತ ಮಾರ್ಚ್‍ಪಾಸ್ಟ್ ನಡೆಸಿದರು. ಕೈಯಲ್ಲಿದ್ದ ಕರಪತ್ರಗಳನ್ನು ಸ್ಥಳೀಯರಿಗೆ ಹಂಚಿದ್ದರು. ಅರಣ್ಯ ಪ್ರದೇಶವು ಅಯ್ಯಂಕುನ್ನು ವಾಲತೋಡ್ ಪಟ್ಟಣದಿಂದ ಎರಡು ಕಿಲೋಮೀಟರ್ ದೂರದಲ್ಲಿದೆ. ಇಲ್ಲಿಂದ ಮಾವೋವಾದಿಗಳು ಬಂದಿದ್ದಾರೆ ಎಂದು ಅಂದಾಜಿಸಲಾಗಿದೆ. ಐವರು ಸದಸ್ಯರ ತಂಡ ಈ ಹಿಂದೆ ಅಂಗಡಿಗಳಿಗೂ ಭೇಟಿ ನೀಡಿತ್ತು. ಅದೇ ತಂಡ ಬಂದಿತ್ತು ಎಂದು ಪೋಲೀಸರು ತೀರ್ಮಾನಿಸಿದ್ದಾರೆ.