ಕಾಸರಗೋಡು : ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸರ್ಕಾರದ ನೇತೃತ್ವದಲ್ಲಿ 'ಬೇಟಿ ಬಚಾವೋ ಬೇಟಿ ಪಡಾವೋ' ಯೋಜನೆಯ ಜಿಲ್ಲಾ ಮಟ್ಟದ ಉದ್ಘಾಟನೆ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಜರುಗಿತು.
ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿ ಕೆ.ನವೀನ್ ಬಾಬು ಸಮಾರಂಭ ಉದ್ಘಾಟಿಸಿದರು. ಕಾಸರಗೋಡು ನಗರಸಭೆ ಉಪಾಧ್ಯಧ್ಯಕ್ಷೆ ಶಂಸಿದಾ ಫಿರೋಜ್ ಅಧ್ಯಕ್ಷತೆ ವಹಿಸಿದ್ದರು. ವಾರ್ಡ್ ಕೌನ್ಸಿಲರ್ ರಂಜಿತಾ, ಪ್ರಾಂಶುಪಾಲ ಕೆ.ಸಿ.ಮುಹಮ್ಮದ್ ಕುಞÂ, ಮುಖ್ಯಶಿಕ್ಷಕಿ ಎ.ಉಷಾ, ಶಾಲಾ ಸಲಹೆಗಾರ್ತಿ ದಿವ್ಯಾ ಉಪಸ್ಥಿತರಿದ್ದರು. ಡಾ.ವಿನೋದ್ ಕುಮಾರ್ ಪೆರುಂಬಳ ಅವರು ಜೀವನ ಕೌಶಲ್ಯ ಕುರಿತು ತರಬೇತಿ ನೀಡಿದರು. ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ವಿ.ಎಸ್.ಶಿಮ್ನಾ ಸ್ವಾಗತಿಸಿದರು. ಐಸಿಡಿಎಸ್ ಮೇಲ್ವಿಚಾರಕಿ ದಿಲ್ನಾ ವಂದಿಸಿದರು.