ಕುಂಬಳೆ: ಕುಂಬಳೆ ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಜೀರ್ಣೋದ್ದಾರ ಬ್ರಹ್ಮಕಲಶಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ, ರಾಜ್ಯಸಭಾ ಸದಸ್ಯ ರಾಜಶ್ರೀ ಡಾ. ಡಿ.ವೀರೇಂದ್ರ ಹೆಗ್ಗಡೆಯವರು 10 ಲಕ್ಷ ರೂ. ಧನಸಹಾಯವನ್ನು ಹಸ್ತಾಂತರಿಸಿದರು.
ಈ ಮೊದಲು 15 ಲಕ್ಷ ರೂಪಾಯಿ ನೀಡಿದ್ದು, ಈವರೆಗೆ ಎರಡು ಹಂತಗಳಲ್ಲಿ ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಜೀರ್ಣೋದ್ದಾರ ಬ್ರಹ್ಮಕಲಶಕ್ಕೆ ಒಟ್ಟು ಮೊತ್ತ 25 ಲಕ್ಷ ಧನಸಹಾಯವನ್ನು ನೀಡಿರುತ್ತಾರೆ. ಈ ಸಂದರ್ಭದಲ್ಲಿ ಸಮಿತಿಯ ಉಪಾಧ್ಯಕ್ಷ ಕೆ. ಮಂಜುನಾಥ ಆಳ್ವ ಮಡ್ವ, ಕೆ.ಸುಧಾಕರ ಕಾಮತ್, ದೇವಸ್ಥಾನದ ಹಿರಿಯ ಕ್ಲರ್ಕ್ ಎಚ್.ಎಸ್. ವೆಂಕಟಕೃಷ್ಣ ಭಟ್ ಹಾಗೂ ಸಮಿತಿಯ ಸಹ ಲೆಕ್ಕ ಪರಿಶೋಧಕ ಸುಧಾಕರ ಬಿ.ಕೆ. ಉಪಸ್ಥಿತರಿದ್ದರು.