ಕಾಸರಗೋಡು: ಕಾಞಂಗಾಡು ಬಾನಂ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗಾಗಿ ಉಳುಮೆ ಮಾಡಿರುವ ಗದ್ದೆಯಲ್ಲಿ ಬೀಜ ಬಿತ್ತುವ ಬಗ್ಗೆ ನಡೆಸಲಾದ ಪ್ರಾತ್ಯಕ್ಷಿಕೆ ಕುತೂಹಲ ಹಾಗೂ ಕೃಷಿಬಗ್ಗೆ ಮಾಹಿತಿ ಪಡೆದುಕೊಳ್ಳುವಲ್ಲಿ ಸಹಕಾರಿಯಾಯಿತು.
ಕೃಷಿ ಸಂಸ್ಕøತಿಯ ಪಾಠವನ್ನು ವಿದ್ಯಾರ್ಥಿಗಳಿಗೆ ತಿಳಿಹೇಳುವುದರ ಜತೆಗೆ ಮಕ್ಕಳನ್ನು ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆ ನೀಡುವ ನಿಟ್ಟಿನಲ್ಲಿ ಹಸಿರು ಕ್ರಿಯಾ ಸೇನೆ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಖಾಸಗಿ ವ್ಯಕ್ತಿಯೊಬ್ಬರು ನೀಡಿದ ಮೂವತ್ತು ಸೆಂಟ್ಸ್ ಜಮೀನಿನಲ್ಲಿ ಪ್ರಗತಿಪರ ಕೃಷಿಕರೊಬ್ಬರು ಗುತ್ತಿಗೆ ಆಧಾರದಲ್ಲಿ ಕೃಷಿ ಆರಂಭಿಸಿದ್ದು, ಇಲ್ಲಿ ಪಿಲಿಕೋಡು ಕೃಷಿ ಸಂಶೋಧನಾ ಕೇಂದ್ರದಿಂದ ಖರೀದಿಸಿದ ಸಾವಯವ ಭತ್ತವನ್ನು ನಾಟಿಗೆ ಬಳಸಿಕೊಂಡಿದ್ದಾರೆ. ಉಳುಮೆ ಮಾಡಿದ ಮಣ್ಣಿನಲ್ಲಿ ಕೃಷಿಕಾರ್ಮಿಕರು ಕೃಷಿ ಸೋಬಾನೆ ಹಾಡಿನ ಮೂಲಕ ಬೀಜ ಬಿತ್ತನೆ ನಡೆಸುತ್ತಿದ್ದಂತೆ ಹಾಡಿಗೆ ತಕ್ಕಂತೆ ಮಕ್ಕಳೂ ಹೆಜ್ಜೆ ಹಾಕಿದರು.
ಜನಪ್ರತಿನಿಧಿಗಳು, ಸ್ಥಳೀಯರು, ಪಾಲಕರು, ಪಿಟಿಎ, ಎಂಪಿಟಿಎ, ಎಸ್‍ಎಂಸಿ ಸದಸ್ಯರು, ಮಕ್ಕಳು, ಶಿಕ್ಷಕರು, ಸಿಬ್ಬಂದಿ ಎಲ್ಲರೂ ಭಾಗವಹಿಸಿದ್ದರು. ಪರಪ್ಪ ಬ್ಲಾಕ್ ಪಂಚಾಯಿತಿ ಉಪಾಧ್ಯಕ್ಷ ಕೆ.ಭೂಪೇಶ್, ಕೋಡೋಂಬೇಲೂರು ಗ್ರಾಮ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಪಿ.ಗೋಪಾಲಕೃಷ್ಣನ್, ಪಿಟಿಎ ಅಧ್ಯಕ್ಷ ಕೆ.ಎನ್.ಅಜಯನ್, ಮದರ್ ಪಿ.ಟಿ.ಎ ಅಧ್ಯಕ್ಷ ರಜಿತಾಭೂಪೇಶ್, ಪಿಟಿಎ ಉಪಾಧ್ಯಕ್ಷ ಪಿ.ಮನೋಜ್ ಕುಮಾರ್, ಎಸ್.ಎಂ.ಸಿ ಉಪಾಧ್ಯಕ್ಷ ಪಚ್ಚೇನಿ ಕೃಷ್ಣನ್, ಮುಖ್ಯಶಿಕ್ಷಕಿ ಸಿ.ಕೋಮಲವಲ್ಲಿ, ಪಿ.ಕೆ.ಬಾಲಚಂದ್ರನ್, ಸಂಜಯ್ ಮನೈಲ್, ಅನೂಪ್ ಪೆರಿಯಾಲ್, ಕೆ.ಎನ್.ಭಾಸ್ಕರನ್, ಕೆ.ಸಿ.ಗೋವಿಂದನ್, ಟಿ.ವಿ.ಕುಞÂರಾಮನ್ ನೇತೃತ್ವ ವಹಿಸಿದ್ದರು.