ಬದಿಯಡ್ಕ: ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳ ತೃತೀಯ ಚಾತುರ್ಮಾಸ್ಯದ ಸಂದರ್ಭ ಮಂಗಳವಾರ ಯಕ್ಷತೂಣೀರ ಪ್ರತಿಷ್ಠಾನ ಕೋಟೂರು ತಂಡದವರಿಂದ ವಿಪ್ರಾರ್ಪಣಂ ಯಕ್ಷಗಾನ ತಾಳಮದ್ದಳೆ ಜರಗಿತು. ಹಿಮ್ಮೇಳದಲ್ಲಿ ತಲ್ಪನಾಜೆ ವೆಂಕಟರಮಣ ಭಟ್, ತಲ್ಪನಾಜೆ ಶಿವಶಂಕರ ಭಟ್, ಲವಕುಮಾರ ಐಲ, ಮುರಳೀಧರ ಕಲ್ಲೂರಾಯ ಪುತ್ತೂರು, ಕೃಷ್ಣ ಭಟ್ ಅಡ್ಕ, ಯತಿರಾಜ ರೈ ಅಮೆಕ್ಕಾರು ಹಾಗೂ ಮುಮ್ಮೇಳದಲ್ಲಿ ಗಣರಾಜ ಕುಂಬಳೆ, ಶ್ರೀಪತಿ ಕಲ್ಲೂರಾಯ, ಅಡ್ಕ ಸುಬ್ರಹ್ಮಣ್ಯ ಭಟ್, ಪಕಳಕುಂಜ ಶ್ಯಾಮ ಭಟ್, ನಾ.ಕಾರಂತ ಪೆರಾಜೆ ಭಾಗವಹಿಸಿದ್ದರು.
ಬೆಳಿಗ್ಗೆ ಹನುಮ ಭಕ್ತ ಭಜನಾ ಸಂಘ ಆರಿಕ್ಕಾಡಿ ತಂಡದಿಂದ ಭಕ್ತಿ ಸಂಗೀತ ನಡೆಯಿತು. ನಿನ್ನೆ ನಾಡಿನ ಹಿರಿಯ ಸಾಂಸ್ಕøತಿಕ ಮುಖಂಡರೂ, ಹಿರಿಯ ತಲೆಮಾರಿನ ಯಕ್ಷಗಾನ, ತಾಳಮದ್ದಳೆ ಕಲಾವಿದ 90 ಹರೆಯದ ಅಡ್ಕ ಗೋಪಾಲಕೃಷ್ಣ ಭಟ್ ಶ್ರೀಗಳ ಭೇಟಿಯಾಗಿ ಮಾತುಕತೆ ನಡೆಸಿದರು.
ಇಂದು ಸಂಜೆ 6 ರಿಂದ ಶ್ರೀಬೊಡ್ಡಜ್ಜ ಯಕ್ಷಭಾರತೀ ಮಧೂರು ತಂಡದಿಂದ ತಾಳಮದ್ದಳೆ ಪ್ರಸ್ತುತಗೊಳ್ಳಲಿದೆ.