ಉಪ್ಪಳ: ಬೆಳಗಾವಿ ಜಿಲ್ಲೆ ಚಿಕ್ಕೋಡಿಯ ಹಿರೇಕೋಡಿ ಗ್ರಾಮದ ನಂದಿಪರ್ವತ ಆಶ್ರಮದ ಜೈನಮುನಿ ಆಚಾರ್ಯ 108 ಶ್ರೀ ಕಾಮಕುಮಾರ ನಂದಿಮಹಾರಾಜರನ್ನು ಬರ್ಬರವಾಗಿ ಹತ್ಯೆ ಮಾಡಿರುವುದಕ್ಕೆ ದಿಗ್ಭ್ರಮೆ ವ್ಯಕ್ತಪಡಿಸಿದ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು ಈ ಹೇಯ ಕೃತ್ಯವನ್ನು ತೀವ್ರವಾಗಿ Sಂಡಿಸಿದ್ದಾರೆ. ಪೂಜ್ಯ ಮುನಿಗಳ ದಿವ್ಯಾತ್ಮ ಭಗವಾನ್ ಮಹಾವೀರರ ಸನ್ನಿಧಿಯಲ್ಲಿ ಚಿರಶಾಂತಿಯಿಂದ ನೆಲೆಸಲಿ ಎಂದು ಪೂಜ್ಯರು ಆರಾಧ್ಯ ದೇವರಲ್ಲಿ ಸಂಪ್ರಾರ್ಥಿಸಿದ್ದಾರೆ.