ಕಾಸರಗೋಡು: ಮುಳಿಯಾರ್ ಗ್ರಾಮ ಪಂಚಾಯಿತಿಯ ಕುಟುಂಬಶ್ರೀ ಸಿಡಿಎಸ್ ವತಿಯಿಂದ ಜಿಲ್ಲೆಯಲ್ಲಿ ಭತ್ತದ ಕೃಷಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ನಡೆಸುತ್ತಿರುವ ಮಳೆ ಹಬ್ಬವನ್ನು ಪಮಚಾಯಿತಿ ವ್ಯಾಪ್ತಿಯ ಪೊವ್ವಲ್‍ನಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು.
ಮುಳಿಯಾರ್ ಗ್ರಾ.ಪಂ.ಅಧ್ಯಕ್ಷೆ ಪಿ.ವಿ.ಮಿನಿ ಪೆÇವ್ವಲ್ ಭತ್ತದ ಗದ್ದೆಯಲ್ಲಿ ನಡೆದ ಮಳೆ ಹಬ್ಬದ ಸಂದರ್ಭ ಬಿತ್ತನೆ ಕಾರ್ಯಕ್ರಮ ಉದ್ಘಾಟಿಸಿದರು. ಮುಳಿಯಾರ್ ಕುಟುಂಬಶ್ರೀ ಸಿಡಿಎಸ್, ಬೋವಿಕಾನದ ಬಿಎಆರ್‍ಎಚ್‍ಎಸ್ ಶಾಲೆಯ ಎನ್ನೆಸ್ಸೆಸ್ ಘಟಕದ ಸಹಕಾರದೊಂದಿಗೆ ಪೆÇವ್ವಲ್‍ನ ಆರು ಎಕರೆ ಭತ್ತದ ಗದ್ದೆಯಲ್ಲಿ ಭತ್ತದ ನಾಟಿ ಮಾಡಲಾಯಿತು. ಶ್ರೇಯಸ್ ತಳಿಯ ಭತ್ತವನ್ನು ಬಿತ್ತಲಾಯಿತು. ಕೆ ಶ್ರೀ ಬ್ರಾಂಡ್ ಅಕ್ಕಿಯನ್ನು ಮಾರುಕಟ್ಟೆಗೆ ಸರಬರಾಜು ಮಾಡುವ ಉದ್ದೇಶದಿಂದ ವಿವಿಧ ವಾರ್ಡ್ ಗಳಲ್ಲಿ ಕುಟುಂಬಶ್ರೀ ಸಿಡಿಎಸ್ ನೇತೃತ್ವದಲ್ಲಿ ವಿವಿಧ ಜೆಎಲ್‍ಜಿ ಘಟಕಗಳ ಸಹಕಾರದೊಂದಿಗೆ 65 ಎಕರೆ ಭೂಮಿಯಲ್ಲಿ ಸಾಗುವಳಿ ಮಾಡಲಾಗುತ್ತಿದೆ. ಪಂಚಯಿತಿ ಕಲ್ಯಾಣ ಸ್ಥಾಯಿ ಸಮಿತಿ ಅಧ್ಯಕ್ಷ ಇ.ಮೋಹನನ್, ವಾರ್ಡ್ ಸದಸ್ಯರಾದ ಅಬ್ಬಾಸ್ ಕೊಳಚಪ್ಪು, ಎಂ.ಅನನ್ಯ, ಎ.ಶ್ಯಾಮಲಾ, ವಿ.ಸತ್ಯವತಿ, ರಮೇಶನ ಮುದಲಪ್ಪಾರ, ಸಿಡಿಎಸ್ ಅಧ್ಯಕ್ಷೆ ಖೈರುನ್ನೀಸಾ, ಲೆಕ್ಕಪರಿಶೋಧಕಿ ಸಕೀನಾ, ಪ್ರಸಾದ್ ಮಾಸ್ಟರ್, ಕೆ.ಶೀಜಾ, ತಾಹಿರಾ, ಯಶೋದಾ, ಶಕುಂತಲಾ, ರಜಿಯಾ ಉಪಸ್ಥಿತರಿದ್ದರು.