ಈ ವರ್ಷ ತನ್ನ ಬಳಕೆದಾರರಿಗೆ ಹೊಸ ವೈಶಿಷ್ಟ್ಯಗಳನ್ನು ತರುವಲ್ಲಿ ವಾಟ್ಸ್ ಆಫ್ ಉತ್ಸುಕವಾಗಿದೆ.
ಕಳೆದ ಹಲವು ದಿನಗಳಿಂದ ತನ್ನ ಲೇಔಟ್ ನಲ್ಲಿ ಬದಲಾವಣೆ ತರುತ್ತಿರುವ ವಾಟ್ಸಾಪ್ ಇದೀಗ ಚಾಟ್ ಹಿಸ್ಟರಿ ವರ್ಗಾವಣೆ ಮಾಡುವ ಹೊಸ ವ್ಯವಸ್ಥೆಯನ್ನು ಪರಿಚಯಿಸಿದೆ.
ಹೊಸ ಪೋನ್‍ಗಳನ್ನು ಖರೀದಿಸುವಾಗ, ಬಳಕೆದಾರರು ವಾಟ್ಸ್ ಆಫ್ ಚಾಟ್‍ಗಳನ್ನು ವರ್ಗಾಯಿಸಲು ಕ್ಲೌಡ್ ಅಥವಾ ಬ್ಯಾಕಪ್ ಸಿಸ್ಟಮ್‍ಗಳನ್ನು ಅವಲಂಬಿಸಿರುತ್ತಾರೆ. ಇದಕ್ಕಾಗಿ ಸ್ವಲ್ಪ ಹೆಚ್ಚು ಸಮಯ ಕಳೆದುಹೋಗುತ್ತದೆ. ಇದೀಗ ಇದಕ್ಕೆ ಪರಿಹಾರವೆಂಬಂತೆ ವಾಟ್ಸ್ ಆಪ್ ಚಾಟ್ ವಿನಿಮಯ ಮಾಡಿಕೊಳ್ಳಲು ಕ್ಯೂಆರ್ ಕೋಡ್ ವ್ಯವಸ್ಥೆಯನ್ನು ಪರಿಚಯಿಸಿದೆ.
ಹೊಸ ವ್ಯವಸ್ಥೆಯು ಹೆಚ್ಚು ಸುರಕ್ಷಿತ ಮತ್ತು ಪರಿಣಾಮಕಾರಿಯಾಗಿರುವುದಲ್ಲದೆ, ದೊಡ್ಡ ಮಾಧ್ಯಮ ಫೈಲ್‍ಗಳನ್ನು ಕ್ಯೂಆರ್ ಕೋಡ್ ವ್ಯವಸ್ಥೆಯ ಮೂಲಕ ವಿನಿಮಯ ಮಾಡಿಕೊಳ್ಳುವ ವೈಶಿಷ್ಟ್ಯವೂ ಇರಲಿದೆ.