HEALTH TIPS

ರಾಷ್ಟ್ರಮಟ್ಟದಲ್ಲಿ ಒಂದನೇ ರ್ಯಾಂಕ್ ಪಡೆದ ಯಶಸ್ವಿನಿ ಕಿಳಿಂಗಾರು ಮುಳ್ಳೇರಿಯ ಹವ್ಯಕ ಮಂಡಲದ ವತಿಯಿಂದ ಸನ್ಮಾನ

            ಬದಿಯಡ್ಕ: ಶ್ರೀರಾಮಚಂದ್ರಾಪುರ ಮಠದ ಮುಳ್ಳೇರಿಯ ಹವ್ಯಕಮಂಡಲದ ವತಿಯಿಂದ ದೇಶೀಯಮಟ್ಟದಲ್ಲಿ ಒಂದನೇ ರ್ಯಾಂಕ್ ಪಡೆದ ಕಿಳಿಂಗಾರು ಯಶಸ್ವಿನಿಯನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಕಿಳಿಂಗಾರು ವೇದಮೂರ್ತಿ ಶಿವಶಂಕರ ಭಟ್ ಹಾಗೂ ಶಶಿಪ್ರಭಾ ದಂಪತಿಗಳ ಪುತ್ರಿಯಾದ ಈಕೆ ಐಐಐಟಿ (ಅಂತರರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ) ಹೈದರಾಬಾದ್ ಪದವಿಪೂರ್ವ ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ 1ನೇ ರ್ಯಾಂಕ್ ಪಡೆದಿರುತ್ತಾಳೆ. ಮುಳ್ಳೇರಿಯ ಮಂಡಲ ಅಧ್ಯಕ್ಷ ಬಾಲಸುಬ್ರಹ್ಮಣ್ಯ ಸರ್ಪಮಲೆ ಈ ಸಂದರ್ಭದಲ್ಲಿ ಮಾತನಾಡಿ ಮಕ್ಕಳಿಗೆ ಎಳವೆಯಲ್ಲಿ ಸರಿಯಾದ ಮಾರ್ಗದರ್ಶನ ಲಭಿಸಿದಾಗ ಅವರು ಉನ್ನತ ಮಟ್ಟಕ್ಕೆ ಏರಲು ಸಾಧ್ಯವಿದೆ. ಇದೀಗ ದೇಶೀಯ ಮಟ್ಟದಲ್ಲಿಯೇ ಸಾಧನೆಯನ್ನು ಮಾಡಿದ ಯಶಸ್ವಿನಿಗೆ ಉತ್ತಮ ಭವಿಷ್ಯವಿದೆ ಎಂದು ಹಾರೈಸಿದರು. ನೀರ್ಚಾಲು ವಲಯ ಅಧ್ಯಕ್ಷ ಜಯದೇವ ಖಂಡಿಗೆ, ಮಂಡಲ ಉಪಾಧ್ಯಕ್ಷ ಕುಸುಮ ಪೆರ್ಮುಖ, ಕೋಶಾಧಿಕಾರಿ ಹರಿಪ್ರಸಾದ ಪೆರ್ಮುಖ, ಮಹಾಮಂಡಲ ಮಾರ್ಗದರ್ಶಕ ಡಾ. ವೈ.ವಿ.ಕೃಷ್ಣಮೂರ್ತಿ, ಗುರಿಕ್ಕಾರ ಮಹಾಲಿಂಗೇಶ್ವರ ಭಟ್ಟ ಈಂದುಗಳಿ, ಶ್ರೀಧರ ಭಟ್ಟ ಬೇಳ, ವಿಷ್ಣುಶರ್ಮ ಮಿಂಚಿನಡ್ಕ, ಈಶ್ವರ ಭಟ್ಟ ಹಳೆಮನೆ, ಗಣಪತಿ ಪ್ರಸಾದ ಕುಳಮರ್ವ, ಗೋಪಾಲಕೃಷ್ಣ ಶಿಮಲಡ್ಕ, ಶ್ರೇಯಾ ಮಿಂಚಿನಡ್ಕ, ವೇದಮೂರ್ತಿ ಶಿವಶಂಕರ ಭಟ್ ದಂಪತಿಗಳು, ಗುಂಪೆ ವಲಯ ಕಾರ್ಯದರ್ಶಿ ಕೇಶವಪ್ರಸಾದ ಎಡೆಕ್ಕಾನ ಉಪಸ್ಥಿತರಿದ್ದರು. ನೀರ್ಚಾಲು ವಲಯ ಕಾರ್ಯದರ್ಶಿ ಮಹೇಶ ಸರಳಿ ಸ್ವಾಗತಿಸಿ, ಗುರಿಕ್ಕಾರ ಶ್ರೀಧರ ಭಟ್ ಉಪಸ್ಥಿತರಿದ್ದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries