HEALTH TIPS

ಮಧ್ಯಪ್ರಾಚ್ಯದಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಭಾರತ: 'ಫಾರಿನ್ ಪಾಲಿಸಿ' ಲೇಖನದಲ್ಲಿ ಪ್ರಸ್ತಾಪ

                ವದೆಹಲಿ: ಮಧ್ಯಪ್ರಾಚ್ಯದಲ್ಲಿ ಭಾರತವು ಪ್ರಮುಖ ಪಾತ್ರ ವಹಿಸುತ್ತಿರುವ ಕುರಿತು ಅಮೆರಿಕದ ಪ್ರತಿಷ್ಠಿತ ನಿಯತಕಾಲಿಕೆ 'ಫಾರಿನ್ ಪಾಲಿಸಿ' ಉಲ್ಲೇಖಿಸಿದೆ. ಜಾಗತಿಕ ವ್ಯವಹಾರಗಳನ್ನು ಕೇಂದ್ರೀಕರಿಸಿರುವ ಅಮೆರಿಕದ ಈ ಪ್ರತಿಷ್ಠಿತ ನಿಯತಕಾಲಿಕೆಯ ಲೇಖನವೊಂದರಲ್ಲಿ ಈ ವಿಷಯ ಪ್ರಸ್ತಾಪವಾಗಿದೆ.

               ಮಧ್ಯಪ್ರಾಚ್ಯದಲ್ಲಿ ಭಾರತವು ಪ್ರಮುಖ ಪಾತ್ರ ವಹಿಸುತ್ತಿರುವುದು ಈ ಪ್ರದೇಶದಲ್ಲಿನ ಹಲವು ವರ್ಷಗಳ ಅತ್ಯಂತ ಆಸಕ್ತಿದಾಯಕ ಭೌಗೋಳಿಕ ರಾಜಕೀಯ ಬೆಳವಣಿಗೆಗಳಲ್ಲಿ ಒಂದಾಗಿದೆ ಎಂದು ಈ 'ಫಾರಿನ್ ಪಾಲಿಸಿ'ಯಲ್ಲಿ ಉಲಲೇಖಿಸಲಾಗಿದೆ.

               ಇಸ್ರೇಲ್, ಸೌದಿ ಅರೇಬಿಯಾ ಮತ್ತು ಯುಎಇ ಸೇರಿದಂತೆ ಈ ಪ್ರದೇಶದ ಪ್ರಮುಖ ದೇಶಗಳೊಂದಿಗೆ ನವದೆಹಲಿಯ ಗಾಢ ಮತ್ತು ಬೆಳೆಯುತ್ತಿರುವ ಸಂಬಂಧಗಳನ್ನು ಒತ್ತಿ ಹೇಳಲಾಗಿದೆ. ಮಾತ್ರವಲ್ಲ, ಭಾರತದ ಸ್ಥಾನದ ವಿಕಸನವು ಬದಲಾಗುತ್ತಿರುವ ಅಂತಾರಾಷ್ಟ್ರೀಯ ಕ್ರಮವನ್ನು ಪ್ರತಿಬಿಂಬಿಸುತ್ತದೆ ಮತ್ತು ಹೊಸ ಬಹುಧ್ರುವೀಯತೆಯಿಂದ ಪ್ರಯೋಜನ ಪಡೆಯುವ ಈ ರಾಷ್ಟ್ರಗಳ ಆಶಯವನ್ನು ಪ್ರತಿಬಿಂಬಿಸುತ್ತದೆ ಎಂದು ಪ್ರತಿಪಾದಿಸಲಾಗಿದೆ. ಈ ಬೆಳವಣಿಗೆ ಬಗ್ಗೆ ಯುನೈಟೆಡ್ ಸ್ಟೇಟ್ಸ್ ಏನೂ ಮಾಡಲು ಸಾಧ್ಯವಿಲ್ಲ ಮತ್ತು ವಿರೋಧಾಭಾಸದ ರೀತಿಯಲ್ಲಿ ಅದರಿಂದ ಪ್ರಯೋಜನ ಪಡೆಯಬಹುದು ಎಂದು ಅದರ ಲೇಖಕ ಸ್ಟೀವನ್ ಎ ಕುಕ್ ವಾದಿಸಿದ್ದಾರೆ.

                      ಯುನೈಟೆಡ್ ಸ್ಟೇಟ್ಸ್​​ನ ಮಧ್ಯಪ್ರಾಚ್ಯ ಪಾಲುದಾರರು ವಾಷಿಂಗ್ಟನ್​ಗೆ ಪರ್ಯಾಯವನ್ನು ಹುಡುಕುತ್ತಿದ್ದರೆ ನವದೆಹಲಿ ಆಯ್ಕೆಗಳಲ್ಲಿ ಒಂದಾಗಿದೆ. ಯುಎಸ್ ಇನ್ನು ಮುಂದೆ ಈ ಪ್ರದೇಶದಲ್ಲಿ ಪ್ರಶ್ನಾತೀತ ನಾಯಕ ಆಗಿರದೆ ಇರಬಹುದು, ಆದರೆ ಮಧ್ಯಪ್ರಾಚ್ಯದಲ್ಲಿ ಭಾರತ ತನ್ನ ಉಪಸ್ಥಿತಿ ವಿಸ್ತರಿಸುವವರೆಗೆ ರಷ್ಯಾ ಅಥವಾ ಚೀನಾ ಆ ಪಾತ್ರವನ್ನು ವಹಿಸಲು ಸಾಧ್ಯವಿಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ.

            ಸುಮಾರು ಒಂದು ದಶಕದ ಹಿಂದೆ ಭಾರತಕ್ಕೆ ಭೇಟಿ ನೀಡಿದ್ದನ್ನು ಲೇಖಕರು ನೆನಪಿಸಿಕೊಂಡಿದ್ದು, ಮಧ್ಯಪ್ರಾಚ್ಯದಲ್ಲಿ ಭಾರತೀಯರು ದೊಡ್ಡ ಪಾತ್ರವನ್ನು ವಹಿಸಲು ಬಯಸುವುದಿಲ್ಲ ಎಂಬುದಾಗಿ ಅಂದುಕೊಂಡಿದ್ದನ್ನೂ ಸ್ಮರಿಸಿಕೊಂಡಿದ್ದಾರೆ. ಆದಾಗ್ಯೂ, ಆ ಪ್ರವಾಸದ ನಂತರದ 10 ವರ್ಷಗಳಲ್ಲಿ ಸನ್ನಿವೇಶಗಳು ಬದಲಾಗಿವೆ ಎಂದು ಅವರು ಲೇಖನದಲ್ಲಿ ಉಲ್ಲೇಖಿಸಿದ್ದಾರೆ.

              ಯುಎಸ್ ಅಧಿಕಾರಿಗಳು ಮತ್ತು ವಿಶ್ಲೇಷಕರು ಬೀಜಿಂಗ್​ನ ಪ್ರತಿ ರಾಜತಾಂತ್ರಿಕ ಕ್ರಮದ ಬಗ್ಗೆ ಗೀಳನ್ನು ಹೊಂದಿದ್ದು ಮತ್ತು ಮಧ್ಯಪ್ರಾಚ್ಯದಲ್ಲಿ ಚೀನಾದ ಹೂಡಿಕೆಯನ್ನು ಅನುಮಾನದಿಂದ ನೋಡುತ್ತಿದ್ದರೆ, ಈ ಪ್ರದೇಶದ ಅತ್ಯಂತ ಆಸಕ್ತಿದಾಯಕ ಭೌಗೋಳಿಕ ರಾಜಕೀಯ ಬೆಳವಣಿಗೆಗಳಲ್ಲಿ ಒಂದನ್ನು ವಾಷಿಂಗ್ಟನ್​ ಕೆಲ ವರ್ಷಗಳಿಂದ ಕಡೆಗಣಿಸುತ್ತಿದೆ. ಆದರೆ ಮಧ್ಯಪ್ರಾಚ್ಯದಲ್ಲಿ ಭಾರತವು ಪ್ರಮುಖ ಆಟಗಾರನಾಗಿ ಹೊರಹೊಮ್ಮುತ್ತಿದೆ ಎಂದು ಕುಕ್ ಬರೆದಿದ್ದಾರೆ.

             ಗಲ್ಫ್ ವಿಷಯಕ್ಕೆ ಬಂದರೆ ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಸೌದಿ ಅರೇಬಿಯಾ ಭಾರತದೊಂದಿಗೆ ಸಂಬಂಧವನ್ನು ವಿಸ್ತರಿಸುವ ಮಾರ್ಗಗಳನ್ನು ಆಕ್ರಮಣಕಾರಿಯಾಗಿ ಹುಡುಕುತ್ತಿವೆ ಎಂದೂ ಲೇಖನದಲ್ಲಿ ಹೇಳಲಾಗಿದೆ.

                ಪ್ರಧಾನಿ ನರೇಂದ್ರ ಮೋದಿ ಅವರು 2017ರಲ್ಲಿ ಇಸ್ರೇಲ್​ಗೆ ಭೇಟಿ ನೀಡಿದ್ದು, ಅದು ಭಾರತ ಸರ್ಕಾರದ ಮುಖ್ಯಸ್ಥರ ಮೊದಲ ಭೇಟಿ ಆಗಿತ್ತು. ಆಮೇಲೆ ಅವರ ಸಹವರ್ತಿ ಬೆಂಜಮಿನ್ ನೆತನ್ಯಾಹು ಒಂದು ವರ್ಷದ ಬಳಿಕ ಗೌರವ ಹಿಂದಿರುಗಿಸಿದ ನಂತರ ಈ ಸಂಬಂಧಗಳು ವಿವಿಧ ಕ್ಷೇತ್ರಗಳಲ್ಲಿ ವೇಗವಾಗಿ ಅಭಿವೃದ್ಧಿಗೊಂಡಿವೆ.

           ಈ ಹಿಂದೆ, ದೇಶದ ಸಣ್ಣ ಮಾರುಕಟ್ಟೆ ಮತ್ತು ವಿವಾದಾತ್ಮಕ ರಾಜಕೀಯವನ್ನು (ಭಾರತದಲ್ಲಿನ ಅನೇಕರಿಗೆ) ಗಮನದಲ್ಲಿಟ್ಟುಕೊಂಡು ಭಾರತದ ವ್ಯಾಪಾರ ಸಮುದಾಯವು ಇಸ್ರೇಲ್​ನಲ್ಲಿ ಹೂಡಿಕೆ ಮಾಡಲು ಹಿಂಜರಿಯಿತು ಎಂದು ಕುಕ್ ಹೇಳಿದ್ದಾರೆ.

              ಆದರೆ 2022ರಲ್ಲಿ ಅದಾನಿ ಗ್ರೂಪ್ ಮತ್ತು ಇಸ್ರೇಲ್ ಪಾಲುದಾರರು ಹೈಫಾ ಬಂದರಿಗೆ 1.2 ಬಿಲಿಯನ್ ಯುಎಸ್​ ಡಾಲರ್ ಟೆಂಡರ್ ಗೆದ್ದಿದ್ದು, ಭಾರತ-ಇಸ್ರೇಲ್ ಮುಕ್ತ ವ್ಯಾಪಾರ ಒಪ್ಪಂದಕ್ಕಾಗಿ ಮಾತುಕತೆಗಳು ನಡೆಯುತ್ತಿವೆ ಎಂದೂ ಕುಕ್ ಪ್ರಸ್ತಾಪಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries