ಕಾಸರಗೋಡು: ಕಳೆದ ಹತ್ತು ವರ್ಷಗಳಿಂದ ಬಿ.ಆರ್.ಡಿ.ಸಿಯಿಂದ ಗುತ್ತಿಗೆ ಆಧಾರದ ಮೇಲೆ ವಹಿಸಿಕೊಳ್ಳುತ್ತಿರುವ ಬೇಕಲ ಬೀಚ್ ಪಾರ್ಕ್ ಪಳ್ಳಿಕ್ಕೆರೆ ಸಹಕಾರಿ ಬ್ಯಾಂಕ್ ಅನ್ನು ಬಿ.ಆರ್. ಡಿ. ಸಿ ಹಿಂಪಡೆದು ಮುಂದಿನ ಹತ್ತು ವರ್ಷಗಳವರೆಗೆ ಹೊಸ ಗುತ್ತಿಗೆದಾರರಿಗೆ ಉದ್ಯಾನವನ್ನು ನೀಡಲಾಯಿತು.
ಪ್ರವಾಸೋದ್ಯಮ ಇಲಾಖೆಯು ಬೀಚ್ ಪಾರ್ಕ್‍ನಲ್ಲಿ 5 ಕೋಟಿ ವೆಚ್ಚದ ನವೀಕರಣ ಮತ್ತು ಸುಂದರೀಕರಣ ಅಭಿವೃದ್ಧಿ ಯೋಜನೆಯನ್ನು ಸಿದ್ಧಪಡಿಸಿದೆ. ಇದರಲ್ಲಿ ಅರ್ಧದಷ್ಟು ಮೊತ್ತವನ್ನು ಪ್ರವಾಸೋದ್ಯಮ ಇಲಾಖೆ ಮತ್ತು ಅರ್ಧದಷ್ಟು ಮೊತ್ತವನ್ನು ಗುತ್ತಿಗೆದಾರರು ಒಪ್ಪಂದದ ನಿಯಮಗಳ ಪ್ರಕಾರ 2.5 ಕೋಟಿ ರೂ.ವ್ಯಯಿಸಲಿದೆ. ಇದರ ಪ್ರಕಾರ ಜಿ.ಎಸ್.ಟಿ ಮೊತ್ತ ಹಾಗೂ 6 ತಿಂಗಳ ಬಾಡಿಗೆಯನ್ನು ಬಿಆರ್ ಡಿಸಿಗೆ ಪಾವತಿಸಿ ಟೆಂಡರ್ ಪ್ರಕ್ರಿಯೆ ಮುಗಿದು ನೂತನ ಉದ್ಯಮಿ ಬೇಕಲ ಬೀಚ್ ಪಾರ್ಕ್ ಅನ್ನು ತಮ್ಮ ವಶಕ್ಕೆ ಪಡೆದು ಕೆಲಸ ಆರಂಭಿಸಿದೆ.
ಬೀಚ್ ಪಾರ್ಕ್ ಅಭಿವೃದ್ಧಿ ಯೋಜನೆಗಳನ್ನು ಪೂರ್ಣಗೊಳಿಸಲು ಕನಿಷ್ಠ ಒಂದು ವರ್ಷ ತೆಗೆದುಕೊಳ್ಳುತ್ತದೆ ಎಂದು ಅಂದಾಜಿಸಲಾಗಿದೆ. ಉರಾಳುಂಗಲ್ ಲೇಬರ್ ಕಾಂಟ್ರಾಕ್ಟ್ ಸೊಸೈಟಿ ಕಾಮಗಾರಿ ಕೈಗೆತ್ತಿಕೊಳ್ಳಲಿದೆ. ಅಭಿವೃದ್ಧಿ ಯೋಜನೆಯೊಂದಿಗೆ ಪುಡ್ ಕೋರ್ಟ್, ರೆಸ್ಟೋರೆಂಟ್, ಅಮ್ಯೂಸ್‍ಮೆಂಟ್ ಪಾರ್ಕ್, ಮಕ್ಕಳ ಆಟದ ಪ್ರದೇಶ, ಸಾಹಸ ಮನೋರಂಜನೆ ಕಾರ್ಯಕ್ರಮಗಳು ಮತ್ತು ಪ್ರವಾಸಿಗರಿಗೆ ಟೆಂಟ್ ವಸತಿಗಳನ್ನು ಆಧುನಿಕ ರೀತಿಯಲ್ಲಿ ಮತ್ತು ಭದ್ರತಾ ವ್ಯವಸ್ಥೆಗಳೊಂದಿಗೆ ಸ್ಥಾಪಿಸಲಾಗುವುದು ಎಂದು ಯುವ ಉದ್ಯಮಿ ಮತ್ತು ಮಾಲೀಕ ಅಬ್ದುಲ್ ಲತೀಫ್ ಬೇಕಲ್ ಇಂಟನ್ರ್ಯಾಷÀನಲ್ ಹೋಟೆಲ್ ನಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಆದಷ್ಟು ಬೇಗ ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಉದ್ಯಾನವನದೊಳಗೆ ಅಂತಾರಾಷ್ಟ್ರೀಯ ಗುಣಮಟ್ಟದ ಶೌಚಾಲಯಗಳನ್ನು ಪ್ರವಾಸಿಗರಿಗೆ ತೆರೆಯುವ ವ್ಯವಸ್ಥೆ ಮಾಡಲಾಗುವುದು ಎಂದು ಬಿ.ಆರ್. ಡಿಸಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ವಿಶೇಷ ದಿನಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಅಬ್ದುಲ್ ಲತೀಫ್ ತಿಳಿಸಿರುವರು.