HEALTH TIPS

ಸೈಬರ್‌ ಅಪರಾಧಗಳ ನಿಗ್ರಹಕ್ಕೆ ಏಕರೂಪ ಕಾನೂನು ಅಗತ್ಯ: ಅಮಿತ್‌ ಶಾ

               ವದೆಹಲಿಡಿಜಿಟಲ್‌ ಜಗತ್ತಿನಲ್ಲಿ ವಿಕಸನಗೊಂಡಿರುವ ಭದ್ರತಾ ಸವಾಲುಗಳ ಬಗ್ಗೆ ಗೃಹ ಸಚಿವ ಅಮಿತ್ ಶಾ ಜಾಗತಿಕ ಸಮುದಾಯವನ್ನು ಎಚ್ಚರಿಸಿದ್ದಾರೆ. ಇಂತಹ ಅಪರಾಧಗಳ ವಿರುದ್ಧ ಕ್ರಮ ಕೈಗೊಳ್ಳಲು ಜಿ20 ರಾಷ್ಟ್ರಗಳು ಸಾಂಪ್ರದಾಯಿಕ ಎಲ್ಲೆಗಳನ್ನು ದಾಟಿ ಕಾರ್ಯನಿರ್ವಹಿಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದಾರೆ.

                ಸೈಬರ್‌ ಅಪರಾಧ ಮತ್ತು ಭದ್ರತೆಗೆ ಸಂಬಂಧಿಸಿದಂತೆ ಹರಿಯಾಣದಲ್ಲಿ ಗುರುವಾರ ನಡೆದ ಜಿ20 ಸಮ್ಮೇಳನದಲ್ಲಿ ಅಮಿತ್‌ ಶಾ ಮಾತನಾಡಿದರು. ನಿರ್ಣಾಯಕ ಮಾಹಿತಿ ಮತ್ತು ಹಣಕಾಸು ವ್ಯವಸ್ಥೆಗಳನ್ನು ಗುರಿಯಾಗಿಸಿ ಸೈಬರ್ ದಾಳಿ ನಡೆಸುವವರಿಂದ ಎದುರಾಗುವ ಅಪಾಯಗಳ ಬಗ್ಗೆ ಅವರು ಸಮಾರಂಭದಲ್ಲಿ ಒತ್ತಿ ಹೇಳಿದರು.

                   ನಾಗರಿಕರು ಮತ್ತು ಸರ್ಕಾರಗಳಿಗೆ ಆರ್ಥಿಕ ಮತ್ತು ಸಾಮಾಜಿಕ ಹಾನಿಯುಂಟು ಮಾಡಲು ಕೆಲವು ಸಮಾಜಘಾತಕ ಶಕ್ತಿಗಳು ತಂತ್ರಜ್ಞಾನವನ್ನು ಬಳಸುತ್ತಿವೆ ಎಂದು ಅಮಿತ್‌ ಶಾ ಆರೋಪಿಸಿದರು.

'ಡಿಜಿಟಲ್‌ ಆರ್ಥಿಕತೆ ರೂಪಾಂತರ ಮತ್ತು ದತ್ತಾಂಶ ಹರಿವಿನ ಮೇಲೆ ಮಾತ್ರ ಜಿ20 ಈ ವರೆಗೆ ತನ್ನ ಗಮನ ಕೇಂದ್ರೀಕರಿಸಿತ್ತು. ಆದರೆ ಈಗ ಅಪರಾಧ ಮತ್ತು ಭದ್ರತೆಯ ಅಂಶಗಳನ್ನೂ ಅರ್ಥಮಾಡಿಕೊಳ್ಳಬೇಕಿದೆ. ಅದಕ್ಕೆ ಪರಿಹಾರವನ್ನು ಕಂಡುಹಿಡಿಯುವ ಅಗತ್ಯವಿದೆ. ಸೈಬರ್‌ ಅಪರಾಧವು ಆತಂಕಕಾರಿ ವಿಚಾರ. ಅದು ರಾಷ್ಟ್ರೀಯ ಭದ್ರತೆ, ಕಾನೂನು-ಸುವ್ಯವಸ್ಥೆ ಮತ್ತು ಆರ್ಥಿಕತೆ ಮೇಲೆ ನೇರವಾದ ಪರಿಣಾಮ ಬೀರುತ್ತಿದೆ. ಇಂಥ ಕೃತ್ಯಗಳು ಮತ್ತು ಇದರ ಹಿಂದಿರುವವರನ್ನು ತಡೆಯಬೇಕಿದ್ದರೆ ನಾವು ಗಡಿಗಳ ಎಲ್ಲೆ ಮೀರಿ ಯೋಚಿಸಬೇಕು' ಎಂದು ಅವರು ಪ್ರತಿಪಾದಿಸಿದರು.

'ಎಲ್ಲಾ ದೇಶಗಳ ಕಾನೂನುಗಳಲ್ಲಿ ಏಕರೂಪತೆ ತಂದು, ನಿರ್ದಿಷ್ಠ ಕಾರ್ಯವಿಧಾನವನ್ನು ಅಳವಡಿಸಿಕೊಂಡು ಸೈಬರ್ ಅಪರಾಧಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ನಿಖೆಯಲ್ಲಿ ಸಹಕಾರ ಇಂದು ಅತ್ಯಂತ ಅವಶ್ಯವಾಗಿದೆ' ಎಂದು ಅಮಿತ್‌ ಶಾ ಹೇಳಿದರು.

                  ಜಗತ್ತಿನಲ್ಲಿ ಹಲವು ದೇಶಗಳು ಸೈಬರ್‌ ದಾಳಿಗೆ ಗುರಿಯಾಗಿವೆ. ಅಲ್ಲದೇ, ಈ ಅಪಾಯ ಜಗತ್ತಿನ ದೊಡ್ಡ ದೊಡ್ಡ ಆರ್ಥಿಕತೆಗೂ ಸವಾಲಾಗಿ ಪರಿಣಮಿಸಿವೆ. ಸೈಬರ್‌ ದಾಳಿಯಿಂದಾಗಿ 2019-23ರ ಅವಧಿಯಲ್ಲಿ 5.2 ಟ್ರಿಲಿಯನ್‌ ಡಾಲರ್‌ನಷ್ಟು ನಷ್ಟ ಉಂಟಾಗಿದೆ ಎಂದು ವಿಶ್ವ ಬ್ಯಾಂಕ್‌ ಅಂದಾಜು ಮಾಡಿದೆ. ಸೈಬರ್‌ ದಾಳಿಕೋರರು ಕ್ರಿಪ್ಟೊ ಕರೆನ್ಸಿ ಬಳಸುತ್ತಿರುವುದರಿಂದ ಅಪರಾಧಗಳ ಪತ್ತೆ ಮತ್ತು ನಿಯಂತ್ರಣ ಅತ್ಯಂತ ಸಂಕೀರ್ಣಗೊಳ್ಳುತ್ತಾ ಸಾಗಿದೆ' ಎಂದು ಅವರು ತಿಳಿಸಿದರು.

ಇಂಥ ತೊಂದರೆಗಳಿಂದ ಪಾರಾಗಲು ತುರ್ತು ಸ್ಪಂದನ ತಂಡಗಳನ್ನು ಬಲವರ್ಧನೆಗೊಳಿಸಬೇಕಾದ ಅಗತ್ಯವಿದ್ದು, 24X7 ಆಧಾರದಲ್ಲಿ ಭದ್ರತಾ ಕಾರ್ಯತಂತ್ರ ಅಳವಡಿಸಿಕೊಳ್ಳಬೇಕು ಎಂದೂ ಅವರು ಸಲಹೆ ನೀಡಿದರು.

                    ಭಾರತವು ಗುರುತು ದೃಢೀಕರಣಕ್ಕಾಗಿ 'ಆಧಾರ್‌', ತುರ್ತು ಹಣ ವರ್ಗಾವಣೆಗೆ ಯುಪಿಐನಂತ ವಿಶೇಷವಾದ ವ್ಯವಸ್ಥೆ ಹೊಂದಿದೆ. ಮಾಹಿತಿ ಮತ್ತು ಹಣಕಾಸಿನ ಹರಿವನ್ನು ಸುಲಭಗೊಳಿಸಲು ಜಗತ್ತಿಗೆ ಇಂದು ಹೊಸ ಮಾದರಿಯ ಅಗತ್ಯವಿದೆ ಎಂದು ಅವರು ಇದೇ ವೇಳೆ ಹೇಳಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries