ಕುಂಬಳೆ: ಶಾಲಾ ಸಮೀಪದ ಮರವೊಂದು ಧಾರಾಕಾರ ಮಳೆ-ಗಾಳಿಗೆ ಕೆಳಗುರುಳಿ, ಮರದಡಿಯಿದ್ದ ಶಾಲಾ ಬಾಲಕಿ ದಾರುಣ ಅಂತ್ಯಕಂಡ ಘಟನೆ ಈ ಸಂಜೆ ನಡೆದಿದ್ದು, ತೀವ್ರ ದುಃಖ ಹಾಗೂ ಕಳವಳಕ್ಕೆ ಕಾರಣವಾಗಿದೆ.
ಅಂಗಡಿಮೊಗರು ಜಿ.ಎಚ್.ಎಸ್.ಎಸ್ ಶಾಲಾ 6ನೇ ತರಗತಿ ವಿದ್ಯಾರ್ಥಿನಿ ಆಯಿಷತ್ ಮಿಲ್ಹಾ(11) ಮೃತಳಾದ ವಿದ್ಯಾರ್ಥಿ. ಅಂಗಡಿಮೊಗರಿನ ಬಿ.ಎಂ.ಯೂಸುಫ್-ಫಾತಿಮತ್ ಝೈನಬಾ ದಂಪತಿಗಳ ಪುತ್ರಿಯಾದ ಈಕೆ ಇಂದು ಸಂಜೆ ಶಾಲೆ ಬಿಟ್ಟ 4 ಗಂಟೆಯ ಸುಮಾರಿಗೆ ಈ ಘಟನೆ ನಡೆದಿದೆ. ಮರದಡಿ ಸಿಲುಕಿದ್ದ ವಿದ್ಯಾರ್ಥಿನಿಯನ್ನು ಕೂಡಲೇ ಹೊರತೆಗೆದು ಕುಂಬಳೆ ಸಹಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಆಗಲೇ ಪ್ರಾಣಪಕ್ಷಿ ಹಾರಿಹೋಗಿತ್ತು. ಶಾಲಾ ಪರಿಸರದಲ್ಲಿ ಅಪಾಯಕಾರಿ ಮರ ಇದ್ದು, ಕ್ರಮ ಕೈಗೊಳ್ಳದ ಅಧಿಕೃತರ ಬಗ್ಗೆ ವಿಚಾರಣೆ ಸಮರೋಪಾದಿಯಲ್ಲಿ ನಡೆಯುತ್ತಿದೆ.