ಪಾಲಕ್ಕಾಡ್: ರಾಜ್ಯ ಅಗ್ನಿಶಾಮಕ ದಳದ ಮುಖ್ಯಸ್ಥ ಡಾ. ಸಂಜೀವ್ ಕುಮಾರ್ ಪಟ್ ಜೋಶಿ ಜುಲೈ 8 ರಂದು, ಪಾಲಕ್ಕಾಡ್ ಜಿಲ್ಲೆಯ ಅಗ್ನಿಶಾಮಕ ದಳಕ್ಕೆ ಭೇಟಿ ನೀಡಲು ರಾತ್ರಿ 11:30 ಕ್ಕೆ ಆಗಮಿಸಿದ್ದರು. ಆ ವೇಳೆ ಸಿಬ್ಬಂದಿಗಳು ಇದ್ದಿರಲಿಲ್ಲ, ನಂತರ ಅಗ್ನಿಶಾಮಕ ಸಿಬ್ಬಂದಿಯ ಚಾಲಕ ಸಿಬ್ಬಂದಿಯನ್ನು ವಿಶ್ರಾಂತಿ ಕೊಠಡಿಗೆ ಕರೆದೊಯ್ದರು.
‘ಯಾರಾದರೂ ಠಾಣೆಗೆ ಬೆಂಕಿ ಹಚ್ಚಿದರೂ ರಕ್ಷಿಸುವವರು ಯಾರೂ ಇರರು. ನೌಕರರು ಸಾಮೂಹಿಕವಾಗಿ ನಿದ್ದೆ ಮಾಡುತ್ತಿದ್ದಾರೆ’ ಎಂದು ಡಾ. ಸಂಜೀವ್ ಕುಮಾರ್ ಪಟ್ ಜೋಶಿ ಸಿಬ್ಬಂದಿಗೆ ಸಂದೇಶ ರವಾನಿಸಿದರು. ಇದು ಸರಿಯಾದ ಕ್ರಮವಲ್ಲ, ಅಧಿಕಾರಿಗಳು ಹಗಲಿರುಳು ಸೇವೆಗೆ ಶ್ರಮಿಸಬೇಕು ಎಂದು ಆಗ್ರಹಿಸಿದರು. ಅದೇ ವೇಳೆ ಅಲ್ಲಿದ್ದ ಸಿಬ್ಬಂದಿ ನಾವು ನಿದ್ದೆ ಮಾಡಿಲ್ಲ ಎಂದರು. ಠಾಣೆಯಲ್ಲಿ ಹಾಜರಿದ್ದ ಅಧಿಕಾರಿಗಳ ವಿರುದ್ಧ ಯಾವುದೇ ಅಧಿಕೃತ ಕ್ರಮ ಕೈಗೊಂಡಿಲ್ಲ. ಆದರೆ ಆ ಬಳಿಕ ರಾಜ್ಯದ ಎಲ್ಲಾ ಅಗ್ನಿ ಶಾಮಕ ಕೇಂದ್ರಗಳು ಸಜೀವವಾಗಿರುವುದು ಕಂಡುಬಂದಿದೆ.