ಹೂಸ್ಟನ್: ಅಮೆರಿಕದ ಹೂಸ್ಟನ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಗೆ ಸಿಡಿಲು ಬಡಿದು ಜೀವನ್ಮರಣದ ಮಧ್ಯೆ ಹೋರಾಡುತ್ತಿದ್ದಾರೆ.
ಹೂಸ್ಟನ್ ವಿಶ್ವವಿದ್ಯಾಲಯದಲ್ಲಿ ಮಾಹಿತಿ ತಂತ್ರಜ್ಞಾನ ಓದುತ್ತಿದ್ದ ವಿದ್ಯಾರ್ಥಿನಿ ಸುಸ್ರೂಣ್ಯ ಕೋಡೂರು ಜುಲೈ 4 ನೇ ವಾರಾಂತ್ಯದಲ್ಲಿ ಸ್ಯಾನ್ ಜಸಿಂಟೋ ಸ್ಮಾರಕ ಉದ್ಯಾನವನದಲ್ಲಿ ತನ್ನ ಸ್ನೇಹಿತರೊಂದಿಗೆ ಕೊಳದ ಬಳಿ ನಡೆದುಕೊಂಡು ಹೋಗುತ್ತಿದ್ದಾಗ ಸಿಡಿಲು ಬಡಿದಿದೆ. ಇದರಿಂದ ಆಕೆಯ ಮೆದುಳಿಗೆ ತೀವ್ರ ಹಾನಿಯಾಗಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಸುಸ್ರೂಣ್ಯಗೆ ಸಿಡಿಲು ಬಡಿದು ಕೊಳಕ್ಕೆ ಬಿದ್ದಿದ್ದಾಳೆ. ಬಳಿಕ, ಹೃದಯ ಸ್ತಂಭನಕ್ಕೆ ಒಳಗಾಗಿದ್ದಳು. ಈಗ ಮೆದುಳು ಹಾನಿಗೊಳಗಾಗಿದೆ ಎಂದು ಸೋದರ ಸಂಬಂಧಿ ಸುರೇಂದ್ರ ಕುಮಾರ್ ಕೋಟ ತಿಳಿಸಿದ್ದಾರೆ.
ಆಕೆಗೆ ಹೆಚ್ಚಿನ ವೈದ್ಯಕೀಯ ಚಿಕಿತ್ಸೆಯ ಅಗತ್ಯವಿದೆ’ ಎಂದೂ ಸುರೇಂದ್ರ ಹೇಳಿದರು. ಸುಸ್ರೂಣ್ಯ, ಉನ್ನತ ವ್ಯಾಸಂಗಕ್ಕಾಗಿ ಅಮೆರಿಕಕ್ಕೆ ಬಂದಿದ್ದರು. ಹೂಸ್ಟನ್ ವಿಶ್ವವಿದ್ಯಾಲಯದಲ್ಲಿ ಮಾಹಿತಿ ತಂತ್ರಜ್ಞಾನದ ಸ್ನಾತಕ ಪದವಿಯನ್ನು ಬಹುತೇಕ ಮುಗಿಸಿ, ಇಂಟರ್‌ಶಿಪ್‌ಗಾಗಿ ಕಾಯುತ್ತಿದ್ದರು. ಈ ನಡುವೆ ಈ ದುರಂತ ಸಂಭವಿಸಿದೆ.
ಕುಟುಂಬವು ವೈದ್ಯಕೀಯ ವೆಚ್ಚಗಳಿಗೆ ನೆರವು ಕೋರಿ GoFundMe ಅನ್ನು ರಚಿಸಿದೆ. ಆಕೆಯ ಸಾಮಾಜಿಕ ಮಾಧ್ಯಮ ಪುಟದಲ್ಲಿ, ಕುಟುಂಬವು ಸಹಾಯಕ್ಕಾಗಿ ಮನವಿ ಮಾಡಿದೆ, ಸುಸ್ರೂಣ್ಯ ಶೀಘ್ರವೇ ಸಹಜ ಸ್ಥಿತಿಗೆ ಮರಳಲು ಸಹಾಯ ಮಾಡುವಂತೆ ಕೋರಿದೆ. ಆಕೆಯನ್ನು ಭಾರತಕ್ಕೆ ಏರ್ ಲಿಫ್ಟ್ ಮಾಡುವ ಅವಶ್ಯಕತೆಯಿದೆ.