ತಿರುವನಂತಪುರ: ಕೆ ಪೋನ್ ಯೋಜನೆಯಲ್ಲಿ ಭ್ರμÁ್ಟಚಾರ ನಡೆದಿದೆ ಎಂಬ ದೂರಿನ ಮೇರೆಗೆ ವಿಜಿಲೆನ್ಸ್ ಪ್ರಾಥಮಿಕ ತನಿಖೆ ಆರಂಭಿಸಿದೆ. ಸಾರ್ವಜನಿಕ ಸೇವಕ ಪೈಚ್ಚಿರ ನವಾಜ್ ಅವರು ವಿಜಿಲೆನ್ಸ್ ನಿರ್ದೇಶಕರಿಗೆ ನೀಡಿದ ದೂರಿನ ಮೇರೆಗೆ ತನಿಖೆ ನಡೆಸಲಾಗುತ್ತಿದೆ.
ವಿಜಿಲೆನ್ಸ್ ವಿಶೇಷ ತನಿಖಾ ದಳ 1ರ ಡಿವೈಎಸ್ಪಿ ಜಿ.ಜಿ ತನಿಖೆಯ ಉಸ್ತುವಾರಿ ವಹಿಸಿದ್ದು, ದೂರುದಾರರಿಗೆ ಆ.7ರಂದು ಬೆಳಗ್ಗೆ 11 ಗಂಟೆಗೆ ಪೂಜಾಪುರ ಕಚೇರಿಗೆ ಬಂದು ಹೇಳಿಕೆ ನೀಡುವಂತೆ ಸೂಚನೆ ನೀಡಲಾಗಿದೆ.
ಕೆ ಪೋನ್ ಯೋಜನೆಯಲ್ಲಿ ಭಾರತೀಯ ನಿರ್ಮಿತ ಉತ್ಪನ್ನಗಳ ಅಗತ್ಯವಿರುವ ಟೆಂಡರ್‍ನ ಷರತ್ತು ಉಲ್ಲಂಘಿಸಿ ಚೈನೀಸ್ ಕೇಬಲ್ ಬಳಸಲಾಗಿದೆ ಎಂದು ಆರೋಪಿಸಲಾಗಿದೆ. ಭಾರತೀಯ ನಿರ್ಮಿತ ಎಂದು ಎಲ್‍ಎಸ್ ಕೇಬಲ್‍ನಿಂದ ಸರಬರಾಜು ಮಾಡಲಾದ ಒಪಿಜಿಡಬ್ಲ್ಯೂ ಕೇಬಲ್‍ಗಳ ಮುಖ್ಯ ಘಟಕವು ಚೀನಾದಿಂದ ಆಮದು ಮಾಡಿಕೊಳ್ಳಲಾಗಿದೆ ಮತ್ತು ಕಳಪೆ ಗುಣಮಟ್ಟದ್ದಾಗಿದೆ ಎಂದು ಕೆಎಸ್‍ಇಬಿ ಈ ಹಿಂದೆ ಗಮನಸೆಳೆದಿತ್ತು.
ಯೋಜನೆಯ ಡೆವಲಪರ್ ಆಗಿರುವ ಕೇರಳ ಸ್ಟೇಟ್ ಐಟಿ ಇನ್‍ಫ್ರಾಸ್ಟ್ರಕ್ಚರ್ ಲಿಮಿಟೆಡ್ (ಕೆಎಸ್‍ಐಟಿಐಎಲ್) ಎಲ್‍ಎಸ್ ಕೇಬಲ್‍ಗೆ ಒತ್ತಾಯಿಸಿ ನಾಲ್ಕು ನೂರು ಕೋಟಿ ರೂಪಾಯಿಗಳಿಗೂ ಹೆಚ್ಚು ನಷ್ಟ ಉಂಟು ಮಾಡಿದೆ ಎಂಬುದು ದೂರು. ಕೆ ಪೋನ್ ಪ್ರಾಜೆಕ್ಟ್‍ನ ಅಕೌಂಟೆಂಟ್ ಜನರಲ್ ಆಡಿಟ್‍ನಲ್ಲಿಯೂ ಇದು ಕಂಡುಬಂದಿದೆ.