ಕಾಸರಗೋಡು: ಉತ್ತರ ಮಲಬಾರಿನ ಶೈಕ್ಷಣಿಕ, ಸಮಾಜ ಸೇವಾ ರಂಗದಲ್ಲಿ 30 ಸಂವತ್ಸರಗಳನ್ನು ಪೂರ್ತಿಗೊಳಿಸುತ್ತಿರುವ ಮುಹಿಮತ್‍ನ ಮೂಲಸೌಕರ್ಯ ಅಭಿವೃದ್ಧಿಗಾಗಿ 5 ಕೋಟಿ ರೂಪಾಯಿಯ ಯೋಜನೆಯನ್ನು ಘೋಷಿಸಲಾಗಿದೆ. 'ಅಭಿವೃದ್ಧಿಯ ಪಥದಲ್ಲಿರುವ ಮುಹಿಮ್ಮಾತಿಗೆ ಪ್ರೀತಿಪೂರ್ವಕ' ಎಂಬ ಹೆಸರಿನಲ್ಲಿ 500 ರೂಪಾಯಿ ಚಾಲೆಂಜ್ ಮೂಲಕ ಒಂದು ಲಕ್ಷ ಜನರಿಂದ ನಿಧಿ ಸಂಗ್ರಹಿಸುವ ಗುರಿಯನ್ನು ಯೋಜನೆ ಹೊಂದಿದೆ.
ಯೋಜನೆಯ ಘೋಷಣೆ ಮತ್ತು ಚಾಲೆಂಜ್ ಉದ್ಘಾಟನೆಯನ್ನು ಮುಹಿಮ್ಮಾತ್ ಅಧ್ಯಕ್ಷರೂ ಇಂಡಿಯನ್ ಗ್ರಾಂಡ್ ಮುಫ್ತಿ ಕಾಂತಪುರಂ ಎ.ಪಿ.ಅಬೂಬಕ್ಕರ್ ಮುಸ್ಲಿಯಾರ್ ನೆರವೇರಿಸಿದರು. ನೆರವೇರಿಸಿದರು. ಹಿಜ್ರಿ ಹೊಸ ವರ್ಷದ ಆರಂಭದಿಂದ ಪ್ರಾರಂಭವಾಗಿ ಮೊಹರಂ 10 ರೊಳಗೆ ಮೊದಲ ಹಂತದ ಸಂಗ್ರಹಣೆಯನ್ನು ಪೂರ್ಣಗೊಳಿಸುವುದು ಯೋಜನೆಯ ಗುರಿಯಾಗಿದೆ. ಸಂಸ್ಥೆಯ ಸಮಿತಿಯ ಸದಸ್ಯರು, ಪೂರ್ವ ವಿದ್ಯಾರ್ಥಿಗಳು ಮತ್ತು ಪ್ರಸಕ್ತ ಕಲಿಯುತಿರುವ ವಿದ್ಯಾರ್ಥಿಗಳ ಕುಟುಂಬದವರು, ಸಂಘ ಕುಟುಂಬ ಮತ್ತು ಮುಹಿಮ್ಮತ್ ಹಿತೈಷಿಗಳು ಯೋಜನೆಯ ಭಾಗವಾಗಲಿದ್ದಾರೆ.
ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಮುಶಾವರ ಸದಸ್ಯರೂ, ಎಸ್ ವೈ ಎಸ್ ರಾಜ್ಯ ಕೋಶಾಧಿಕರಿಯಾಗಿದ್ದ ಸಯ್ಯದ್ ತ್ವಾಹಿರುಲ್ ಅಹ್ದಲ್ ತಂಙಳ್ ಮುಹಿಮ್ಮತ್ ಸಂಸ್ಥೆಯ ರೂವಾರಿಯಾಗಿದ್ದು, ಇಂದು ಅನಾಥರು, ನಿರ್ಗತಿಕರು, ಹಾಫಿಳ್‍ಗಳು, ಮುತಅಲ್ಲಿಗಳು ಸೇರಿದಂತೆ 1700ಕ್ಕೂ ಮಿಕ್ಕ ವಿದ್ಯಾರ್ಥಿಗಳು ಸಂಸ್ಥೆಯಲ್ಲಿ ವಸತಿಯೊಂದಿಗೆ ವಿದ್ಯಾರ್ಜನೆಗೈಯುತ್ತಿದ್ದಾರೆ. ಸಂಸ್ಥೆಯ ಜನರಲ್ ಕೌನ್ಸಿಲ್ ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿ ಬಿ.ಎಸ್.ಅಬ್ದುಲ್ಲಕುಞÂ ಫೈಝಿ ಸಮಾರಂಭ ಉದ್ಘಾಟಿಸಿದರು. ಮುಹಿಮ್ಮಾತ್ ಉಪಾಧ್ಯಕ್ಷ ಪಲ್ಲಂಗೋಡ್ ಅಬ್ದುಲ್ ಖಾದಿರ್ ಮದನಿ ಅಧ್ಯಕ್ಷತೆ ವಹಿಸಿದ್ದರು. ಸಯ್ಯಿದ್ ಮುನೀರ್ ಅಹ್ದಲ್ ತಂಙಳ್ ಮತ್ತು ಸೈಯದ್ ಹಾಮಿದ್ ಅನ್ವರ್ ಅಹ್ದಲ್ ತಂಙಳ್ ಪ್ರಾಜೆಕ್ಟ್ ನಿರೂಪಿಸಿದರು. ಜನರಲ್ ಮ್ಯಾನೇಜರ್ ಉಮರ್ ಸಖಾಫಿ ಕರ್ನೂರು ಸ್ವಾಗತಿಸಿದರು. ಕಾರ್ಯದರ್ಶಿ ಅಬ್ದುಲ್ ಖಾದಿರ್ ಸಖಾಫಿ ಮೊಗ್ರಾಲ್ ವಂದಿಸಿದರು.