ತೈಪೆ: ತೈವಾನ್‌ನ ಪ್ರಮುಖ ತಂತ್ರಜ್ಞಾನ ಸಂಸ್ಥೆಗಳು ತಮ್ಮ ತಯಾರಿಕಾ ನೆಲೆಯನ್ನು ಭಾರತಕ್ಕೆ ಸ್ಥಳಾಂತರಿಸಲು ಚಿಂತನೆ ನಡೆಸಿವೆ. ಚೀನಾ ಮಾರುಕಟ್ಟೆ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಸಂಸ್ಥೆಗಳು ಈ ಹೆಜ್ಜೆ ಇಟ್ಟಿವೆ ಎಂದು ಅಲ್ಲಿಯ ಸರ್ಕಾರದ ಪ್ರಮುಖ ನೀತಿ ನಿರೂಪಕರು ತಿಳಿಸಿದ್ದಾರೆ.

ಚೀನಾ- ತೈವಾನ್ ಬಾಂಧವ್ಯ ಹದಗೆಡುತ್ತಿರುವ ಬೆನ್ನಲ್ಲೇ ತೈವಾನ್ ಹೀಗೆ ಹೇಳಿದೆ.
ಅಂತರರಾಷ್ಟ್ರೀಯ ಮಟ್ಟದ ಪತ್ರಕರ್ತರ ಎದುರು ತೈವಾನ್‌ನ ಸಚಿವೆ ಕಾವೊ ಶೀನ್ ಕ್ವೇಯ್ ಈ ಕುರಿತು ಮಾತನಾಡಿದ್ದಾರೆ. ಜಾಗತಿಕ ಪೂರೈಕೆ ಸರಪಳಿಯನ್ನು ಬಲಪಡಿಸಿಕೊಳ್ಳುವ ನಿಟ್ಟಿನಲ್ಲಿ ತೈವಾನ್‌ನ ಪ್ರಮುಖ ತಂತ್ರಜ್ಞಾನ ಸಂಸ್ಥೆಗಳು ಭಾರತದತ್ತ ದೃಷ್ಟಿ ಹರಿಸಿವೆ. ಸೆಮಿಕಂಡಕ್ಟರ್ ಮತ್ತು ವಿದ್ಯುನ್ಮಾನ ಉಪಕರಣ ತಯಾರಿಕಾ ಕ್ಷೇತ್ರದಲ್ಲಿ ಸಹಭಾಗಿತ್ವ ಸಾಧಿಸಲು ತೈವಾನ್ ಮತ್ತು ಭಾರತಕ್ಕೆ ವಿಫುಲ ಅವಕಾಶಗಳಿವೆ ಎಂದಿದ್ದಾರೆ.
'ಸೆಮಿಕಂಡಕ್ಟರ್, ಮಾಹಿತಿ ಮತ್ತು ಸಂವಹನ ಉದ್ಯಮದಲ್ಲಿ ಭಾರತ- ತೈವಾನ್ ನಡುವೆ ಸಹಭಾಗಿತ್ವಕ್ಕೆ ಶೀಘ್ರವೇ ಚಾಲನೆ ದೊರೆಯುತ್ತದೆ ಎಂದು ನನಗೆ ಭರವಸೆ ಇದೆ' ಎಂದು ಶೀನ್ ಹೇಳಿದ್ದಾರೆ.
ತೈವಾನ್‌ನ ಸೆಮಿಕಂಡಕ್ಟ್ ಸಂಸ್ಥೆಯ ತಯಾರಿಕಾ ಘಟಕವನ್ನು ಭಾರತದಲ್ಲಿ ಸ್ಥಾಪಿಸುವುದಕ್ಕೆ ಸಂಬಂಧಿಸಿದ ಮಾತುಕತೆಗಳು ಅಂತಿಮ ಹಂತಕ್ಕೆ ತಲುಪಿವೆ ಎಂದು ಅಲ್ಲಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ
ತಯಾರಿಕಾ ನೆಲೆಗಳನ್ನು ಯುರೋಪ್ ರಾಷ್ಟ್ರಗಳು, ಉತ್ತರ ಅಮೆರಿಕ, ಅಮೆರಿಕ ಮತ್ತು ಭಾರತಕ್ಕೆ ಸ್ಥಳಾಂತರಿಸಲು ತೈವಾನ್ ಸಂಸ್ಥೆಗಳು ಚಿಂತನೆ ನಡೆಸಿವೆ. ವಾಣಿಜ್ಯ ವ್ಯವಹಾರದ ವಿಚಾರದಲ್ಲಿ ಚೀನಾ ಜೊತೆ ಅಮೆರಿಕ ಹೊಂದಿರುವ ತಕರಾರು ಮತ್ತು ತೈವಾನ್ ಗಡಿಯಲ್ಲಿ ಸೇನಾ ನಿಯೋಜನೆಯನ್ನು ಚೀನಾ ಹೆಚ್ಚಿಸುತ್ತಿರುವುದೇ ತೈವಾನ್ ಸಂಸ್ಥೆಗಳ ಈ ನಿರ್ಧಾರಕ್ಕೆ ಕಾರಣ ಎನ್ನಲಾಗಿದೆ.