ಕಾಸರಗೋಡು: ಕಣ್ಣೂರ್ ವಿಶ್ವವಿದ್ಯಾನಿಲಯ ಸಂಯೋಜಿತವಾಗಿರುವ ಕಾಸರಗೋಡು ಚಾಲದಲ್ಲಿರುವ ಅಧ್ಯಾಪಕ ತರಬೇತಿ ಕೇಂದ್ರದಲ್ಲಿ ಸಹಾಯಕ ಪ್ರಾಧ್ಯಾಪಕ(ಕನ್ನಡ)ಹುದ್ದೆಯ ಆಯ್ಕೆಗಾಗಿ ಸಂದರ್ಶನ ನ. 11ರಂದು ಬೆಳಗ್ಗೆ 10ಕ್ಕೆ ನಡೆಯಲಿರುವುದು.
ಎರಡು ವರ್ಷದ ಅವಧಿಗೆ ನೇಮಕಾತಿ ನಡೆಯಲಿದ್ದು, ಎಂ.ಎ ಪಿಎಚ್‍ಡಿ ಅಥವಾ ನೆಟ್ ಎಂ.ಇಡಿ ಪದವೀಧರರಿಗೆ ಹಾಜರಾಗಬಹುದಾಗಿದೆ. ಸಂದರ್ಶನ ಕಣ್ಣೂರು ತಾವಕ್ಕರ ಕ್ಯಾಂಪಸ್‍ನಲ್ಲಿ ಜರುಗಲಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ(6238197279)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.