ಬ್ಯಾಂಕಿಂಗ್ ಚಟುವಟಿಕೆಗಳಿಗೆ ಸೇರಿದಂತೆ ಪ್ಯಾನ್‍ಕಾರ್ಡ್ ತುಂಬಾ ಉಪಯುಕ್ತವಾಗಿದೆ. ಆದರೆ ಪ್ಯಾನ್ ಕಾರ್ಡ್‍ಗೆ ಸಂಬಂಧಿಸಿದ ಅನೇಕ ವಿವರಗಳ ಬಗ್ಗೆ ಇನ್ನೂ ಅನೇಕ ಜನರು ಅರ್ಥಮಾಡಿಕೊಂಡಿಲ್ಲ.
ಪ್ಯಾನ್ ಕಾರ್ಡ್ ಮಾಹಿತಿಯಲ್ಲಿ ಯಾವುದೇ ತಪ್ಪು ಕಂಡುಬಂದರೆ, ಅಕ್ಷಯ ಮುಂತಾದ ಸೇವಾ ಕೇಂದ್ರಗಳಿಗೆ ನೇರವಾಗಿ ತೆರಳಿ ಅಲ್ಲಿಂದಷ್ಟೇ ಪರಿಹಾರವನ್ನು ಪಡೆಯುವುದಷ್ಟೇ ಅಲ್ಲದೆ ಇದನ್ನು ಮನೆಯಲ್ಲಿಯೇ ಮಾಡಬಹುದು. ಪ್ಯಾನ್ ಕಾರ್ಡ್‍ನಲ್ಲಿರುವ ವಿಳಾಸ ಸೇರಿದಂತೆ ಮಾಹಿತಿಯಲ್ಲಿ ಯಾವುದೇ ದೋಷವಿದ್ದರೆ, ಈ ವಿಷಯಗಳನ್ನು ಮನೆಯಲ್ಲಿಯೇ ಸರಿಪಡಿಸಬಹುದು. ಆಧಾರ್ ಮತ್ತು ಪ್ಯಾನ್‍ಕಾರ್ಡ್ ಲಿಂಕ್ ಮಾಡಿದವರು ಇದನ್ನು ಸುಲಭವಾಗಿ ನಿರ್ವಹಿಸಬಹುದು.
ಮಾಡಬೇಕಾದ್ದು ಇμÉ್ಟೀ..
ಮೊದಲು…..
https://www.pan.utiitsl.com/PAN_ONLINE/homeaddresschange
ಅಧಿಕೃತ ವೆಬ್‍ಸೈಟ್‍ಗೆ ಭೇಟಿ ನೀಡಿ.
ಇದರ ನಂತರ ನೀವು ನಿಮ್ಮ ಪ್ಯಾನ್‍ಕಾರ್ಡ್ ಸಂಖ್ಯೆ, ಆಧಾರ್ ಸಂಖ್ಯೆ, ಇಮೇಲ್ ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು.
ನೀವು ಪ್ಯಾನ್ ಕಾರ್ಡ್‍ನಲ್ಲಿರುವ ವಿಳಾಸವನ್ನು ಸರಿಪಡಿಸಲು ಬಯಸಿದರೆ, ಆಧಾರ್ ಕಾರ್ಡ್‍ನ ಸಹಾಯದಿಂದ ವಿಳಾಸವನ್ನು ಸರಿಪಡಿಸುವ ಆಯ್ಕೆಯನ್ನು ಆರಿಸಿ.
ಇದರ ನಂತರ ಕ್ಯಾಪ್ಚಾ ಕೋಡ್ ಅನ್ನು ಸರಿಯಾಗಿ ನಮೂದಿಸಿ.
ಅಷ್ಟರಲ್ಲಿ ಒಟಿಪಿ ಕಾಣಿಸುತ್ತದೆ.
ಒಟಿಪಿ ನಮೂದಿಸಿ ಮತ್ತು ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ನಂತರ, ಪ್ಯಾನ್ ಕಾರ್ಡ್‍ನಲ್ಲಿರುವ ವಿಳಾಸವು ಆಧಾರ್ ಕಾರ್ಡ್‍ನಲ್ಲಿರುವಂತೆಯೇ ಇದೆಯೇ ಎಂದು ಗಮನಿಸಿ. ತಿದ್ದುಪಡಿ ಪೂರ್ಣಗೊಂಡ ನಂತರ, ನೀವು ಎಸ್.ಎಂ.ಎಸ್. ಮತ್ತು ಇಮೇಲ್ ಮೂಲಕ ಅಧಿಸೂಚನೆಯನ್ನು ಸ್ವೀಕರಿಸುತ್ತೀರಿ.