ಕಣ್ಣೂರು: ಕಣ್ಣೂರು ಕೇಂದ್ರ ಕಾರಾಗೃಹದಲ್ಲಿ ಕಾಪ್ಪ ಕೈದಿಗಳ ಮಧ್ಯೆ ಘರ್ಷಣೆ ನಡೆದಿದೆ. ಘಟನೆಯಲ್ಲಿ ಒಬ್ಬ ವ್ಯಕ್ತಿಗೆ ಚೂರಿ ಇರಿತವಾಗಿದೆ. ಕೊಲೆ ಪ್ರಕರಣದ ಆರೋಪಿ ತನ್ನ ಸಹ ಕೈದಿಯನ್ನು ಚಾಕುವಿನಿಂದ ಇರಿದು ಗಾಯಗೊಳಿಸಿದ್ದಾನೆ.
ಘಟನೆ ಸಂಬಂಧ ಕಣ್ಣೂರು ನಗರ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಲಪ್ಪುರಂ ತಿರೂರ್ ಮೂಲದ ನೌಫಲ್ ಚಾಕು ಇರಿತಕ್ಕೆ ಒಳಗಾದ ವ್ಯಕ್ತಿ. ಚೂರಿ ಇರಿತ ಪ್ರಕರಣದ ಆರೋಪಿ ಅಲ್ತಾಫ್ ವಿರುದ್ಧ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಣ್ಣೂರು ಕಣಿಚಾರ್ ನಲ್ಲಿ ಲಾರಿ ಚಾಲಕರಾಗಿದ್ದ ಜಿಂಟೋ ಅವರನ್ನು ಕಣ್ಣೂರು ರೈಲ್ವೆ ನಿಲ್ದಾಣದ ಗೇಟ್ ಎದುರು ಅಲ್ತಾಫ್ ಎಂಬಾತ ಹತ್ಯೆ ಮಾಡಿದ್ದ. ಇಬ್ಬರ ನಡುವಿನ ವಾಗ್ವಾದ ಕೊಲೆಗೆ ಕಾರಣವಾಗಿತ್ತು.