ವಾಷಿಂಗ್ಟನ್: 21ನೇ ಶತಮಾನದಲ್ಲಿ ಮತ್ತಷ್ಟು ವಿಸ್ತೃತ ಮತ್ತು ಗಾಢವಾದ ದ್ವಿಪಕ್ಷೀಯ ಡ್ರಗ್ಸ್ ನೀತಿ ಚೌಕಟ್ಟಿಗೆ ಭಾರತ ಮತ್ತು ಅಮೆರಿಕ ದೇಶಗಳು ಒಪ್ಪಿಗೆ ಸೂಚಿಸಿವೆ.
ವಿಸ್ತೃತ ಮತ್ತು ಗಾಢವಾದ ದ್ವಿಪಕ್ಷೀಯ ಡ್ರಗ್ಸ್ ನೀತಿಗೆ ಭಾರತ-ಅಮೆರಿಕ ಸಮ್ಮತಿ
0
ಜುಲೈ 21, 2023
Tags
ವಾಷಿಂಗ್ಟನ್: 21ನೇ ಶತಮಾನದಲ್ಲಿ ಮತ್ತಷ್ಟು ವಿಸ್ತೃತ ಮತ್ತು ಗಾಢವಾದ ದ್ವಿಪಕ್ಷೀಯ ಡ್ರಗ್ಸ್ ನೀತಿ ಚೌಕಟ್ಟಿಗೆ ಭಾರತ ಮತ್ತು ಅಮೆರಿಕ ದೇಶಗಳು ಒಪ್ಪಿಗೆ ಸೂಚಿಸಿವೆ.
ಭಾರತ-ಅಮೆರಿಕ ಮಾದಕದ್ರವ್ಯ ನಿಗ್ರಹ ಕಾರ್ಯಪಡೆಯ (ಸಿಎನ್‌ಡಬ್ಲ್ಯುಜಿ) ನಾಲ್ಕನೇ ವಾರ್ಷಿಕ ಸಭೆಯಲ್ಲಿ ಮೂರು ಪ್ರಮುಖ ಅಂಶಗಳ ಕುರಿತು ನಿರ್ಣಯ ತೆಗೆದುಕೊಳ್ಳಲಾಯಿತು.
ಉಭಯ ದೇಶಗಳ ಅಧಿಕಾರಿಗಳ ನಡುವಣ ಮಾತುಕತೆಯ ಬಳಿಕ ಅಮೆರಿಕ ಅಧ್ಯಕ್ಷ ಜೋ ಬೈಡನ್ ಆಡಳಿತದ ಅಧಿಕಾರಿಗಳು ಈ ಕುರಿತು ಮಾಹಿತಿ ನೀಡಿದ್ದಾರೆ.
ಶ್ವೇತಭವನದ ರಾಷ್ಟ್ರೀಯ ಔಷಧ ನಿಯಂತ್ರಣ ನೀತಿಯ (ಒಎನ್‌ಡಿಸಿಪಿ) ನಿರ್ದೇಶಕ ರಾಹುಲ್ ಗುಪ್ತಾ ಈ ಕುರಿತು ಮಾಹಿತಿ ನೀಡಿದ್ದಾರೆ.
ಕಳೆದೆರಡು ದಿನಗಳಲ್ಲಿ ಮೂರು ವಿಷಯಗಳ ಕುರಿತು ಚರ್ಚಿಸಲಾಗಿದೆ. ಮಾದಕ ದ್ರವ್ಯ ನಿಗ್ರಹ, ಮಾದಕ ದ್ರವ್ಯ ಜಾಲ ಮತ್ತು ಉತ್ಪಾದನೆ ತಡೆ ಇದರಲ್ಲಿ ಒಂದಾಗಿದೆ. ಡ್ರಗ್ಸ್ ಬೇಡಿಕೆ ಇಳಿಕೆ, ಡ್ರಗ್ಸ್ ವ್ಯಸನವನ್ನು ತಡೆಗಟ್ಟುವುದು ಎರಡನೇಯದ್ದಾಗಿದೆ. ಇದರಲ್ಲಿ ಡ್ರಗ್ಸ್ ವ್ಯಸನಿಗಳಿಗೆ ನೆರವಾಗಲು ಮೊದಲ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಔಷಧೀಯ ಪೂರೈಕೆ ಸರಪಳಿ ಮೂರನೇ ಪ್ರಮುಖ ಅಂಶವಾಗಿದೆ ಎಂದು ಅವರು ತಿಳಿಸಿದ್ದಾರೆ.
ಭಾರತದ ನಿಯೋಗವನ್ನು ರಾಷ್ಟ್ರೀಯ ಮಾದಕ ವಸ್ತು ನಿಯಂತ್ರಣ ಘಟಕದ (ಎನ್‌ಸಿಬಿ) ಮಹಾನಿರ್ದೇಶಕ ಸತ್ಯ ನಾರಾಯಣ ಪ್ರಧಾನ ನೇತೃತ್ವ ವಹಿಸಿದ್ದರು.